ಆದ್ಯೋತ್ ಸುದ್ದಿನಿಧಿ:
ಉ.ಕ.ಜಿಲ್ಲೆಯ ಸಿದ್ದಾಪುರ ತ್ಯಾಗಲಿಯ ಶ್ರೀ ಲಕ್ಷ್ಮೀನರಸಿಂಹ ದೇವಾಲಯದ ರಥೋತ್ಸವದ ಶುಭ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಯಕ್ಷಗಾನ ಕಾರ್ಯಕ್ರಮವನ್ನು ದೆಹಲಿಯ. ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವಲ್ಲಿ. ಶಬರ ಸಂಸ್ಥೆ ಸೋಂದಾ ಇವರಿಂದ ಯಕ್ಷಗಾನ ಶ್ರೀಸೇತು ಬಂಧ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಗನಮನೆ ( ಮತ್ತೀಘಟ್ಟ) ಇವರಿಂದ ಕುಂಭಾಸುರ ಕಾಳಗಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ನಾಗಾನಂದ ಹೆಗಡೆ, ಹಳ್ಳಿಯ ಸಂಸ್ಕೃತಿ ಮತ್ತುಸಂಸ್ಕಾರ. ಉಳಿಯಬೇಕಿದ್ದರೆ ದೇವಸ್ಥಾನಗಳಲ್ಲಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು ಎಂದರು.
ನಾಗರಾಜ್ ಜೋಶಿ ಸೋಂದಾ, ಸ್ಥಳೀಯ ಹಿರಿಯರಾದ ಸುಬ್ರಾಯ ಹೆಗಡೆ ತೇರಗಡ್ಡೇಮನೆ, ಶಾಂತಾರಾಮ್ ಹೆಗಡೆ ಸೂರನಕೇರಿ,ಗಣಪತಿ ನಾಯ್ಕ ಹಂಗಾರಖಂಡ ಆಗಮಿಸಿ ತಮ್ಮ ಅ ನೀವುಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿ.ಎಂ.ಹೆಗಡೆ ತ್ಯಾಗಲಿ, ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯ ಮಕ್ಕಳಿಗೆ ಅವಕಾಶ ಸಿಗುತ್ತದೆ. ಕಲಾ ಪ್ರಕಾರಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡುವ ಕೆಲಸ ಆಗಬೇಕು ಎಂದರು.
ನಂತರ ಮತ್ತಿಘಟ್ಟದ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ಕುಂಬಾಸುರ ಕಾಳಗ ಯಶಸ್ವಿಯಾಗಿ ನಡೆಯಿತು. ನಂತರ ಶ್ರೀ ಸೇತು ಬಂಧ ಯಕ್ಷಗಾನ ನಡೆಯಿತು. ಪ್ರಸಿದ್ಧ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸ್ಥಳೀಯ ಮಕ್ಕಳಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.