ಆದ್ಯೋತ್ ಸುದ್ದಿನಿಧಿ:
ಹಿರಿಯ ನಾಯಕ ಯಡಿಯೂರಪ್ಪ ಹಾಗೂ ಅವರ ಮಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಕಳೆದ ೪-೫ ವರ್ಷದಿಂದ ಟೀಕಿಸುತ್ತಾ ಬಂದಿದ್ದ ಶಾಸಕ ಬಸವರಾಜ ಪಾಟೀಲ್ ಯತ್ನಾಳರನ್ನು ತಕ್ಷಣದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದ್ದು ವಿಜಯೇಂದ್ರ ಬಣ ಮೇಲುಗೈ ಸಾಧಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗುಪುಗಾರಿಕೆ ಹೆಚ್ಚಾಗಿದ್ದ ಕಾರಣ ಪಕ್ಷ ಹೀನಾಯ ಸ್ಥಿತಿಗೆ ತಲುಪಿತ್ತು. ಬಿಜೆಪಿ ಹೈಕಮಾಂಡ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮೀನ- ಮೇಷ ಏಣಿಸುತ್ತಿತ್ತು. ಅಂತೂ ಯಡಿಯೂರಪ್ಪ ಬಣದ ಒತ್ತಡಕ್ಕೆ ಕೊನೆಗೂ ಮಣಿದಿದ್ದು ಯತ್ನಾಳರನ್ನು ಉಚ್ಚಾಟಿಸಲಾಗಿದೆ.
ಚುನಾವಣೆಯ ನಂತರ ಶಾಸಕರಾಗಿರುವ ಎಸ್.ಟಿ.ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರರನ್ನು ಉಚ್ಚಾಟಿಸದೆ ಕಾಲಹರಣ ಮಾಡುತ್ತಿರುವ ಬಿಜೆಪಿ ಹೈಕಮಾಂಡ ಎರಡೂ ಗುಂಪಿನ ಸಾಕಷ್ಟು ಜನರು ಪಕ್ಷಕ್ಕೆ ಹಾನಿಯಾಗುವ ಕೆಲಸವನ್ನು ಮಾಡುತ್ತಿದ್ದಾರೆ ಅವರೆಲ್ಲರ ಮೇಲೂ ಕ್ರಮ ಕೈಗೊಳ್ಳುತ್ತದೆಯೋ ಕಾದು ನೋಡಬೇಕು.