ದುರ್ಘಟನೆಯಲ್ಲಿ ಹೊಸಬಾಳೆ ಶೋಭಾ ಹೆಗಡೆ ನಿಧನ


ಆದ್ಯೋತ್ ಸುದ್ದಿನಿಧಿ
ಹೊಸಬಾಳೆ ಶೋಭಾ ಹೆಗಡೆ ಇನ್ನಿಲ್ಲ
ಶಿರಸಿ: ತಾಲೂಕಿನ ಹೊಸಬಾಳೆ ನಿವಾಸಿ ಶೋಭಾ ಹೆಗಡೆ ಆಕಸ್ಮಿಕ ಅವಘಡದಲ್ಲಿ ಬುಧವಾರ ನಿಧನರಾಗಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಪಂ ಮಾಜಿ ಸದಸ್ಯ, ಪ್ರಗತಿಪರ ಕೃಷಿಕ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಧರ್ಮ ಪತ್ನಿಯಾಗಿದ್ದ ಶೋಭಾ ಹೆಗಡೆ ಅವರು ಸದೃಹಿಣಿಯಾಗಿ, ಕೃಷಿ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸದ್ಯ ಅಡಕೆ ಸುಲಿಯುವ ಕಾರ್ಯ ಮನೆಯಲ್ಲಿ ನಡೆಯುತ್ತಿತ್ತು. ಶೋಭಾ ಹೆಗಡೆ ಅವರು ಕೆಲಸಗಾರ ದೇಖರೇಖು ನೋಡಿಕೊಳ್ಳಲು ಹೋಗಿದ್ದರು. ಈ ವೇಳೆ ಚಾಲಿ ಸುಲಿಯುವ ಯಂತ್ರಕ್ಕೆ ಆಕಸ್ಮಿಕವಾಗಿ ಸೀರೆಯ ಸೆರಗು ಸಿಲುಕಿ, ಯಂತ್ರ ತನ್ನತ್ತ ಸೆಳೆದು ಬೀಸಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತರಾದರು. ಕೆಲಸಗಾರರು ಅಲ್ಲಿಯೇ ಇದ್ದರೂ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ. ಕಳೆದ ಮೂರು ವರ್ಷಗಳಿಂದ ಚಾಲಿ ಸುಲಿಯುವ ವೇಳೆ ಶೋಭಾ ಹೆಗಡೆ ಅವರೇ ದೇಖರೇಖು ನೋಡಿಕೊಳ್ಳುತ್ತಿದ್ದರು. ಆದರೆ ಬುಧವಾರ ವಿಧಿ ಕೈಕೊಟ್ಟಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಘಟನೆಯ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಶೋಭಾ ಹೆಗಡೆ ಅವರು ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಹೆಗಡೆ ಅವರ ಪತ್ನಿಯಾಗಿ ಕುಟುಂಬ ಕಾಳಜಿ, ಕೃಷಿ ಮುತುವರ್ಜಿ ವಹಿಸುತ್ತಿದ್ದರು. ತಮ್ಮ ಪತಿಯ ಸಮಾಜಸೇವೆ ಮತ್ತು ರಾಜಕೀಯ ಕಾರ್ಯಗಳಿಗೆ ಪ್ರೋತ್ಸಾಹಕರಾಗಿ ಬೆಂಬಲವಾಗಿ ನಿಂತಿದ್ದರು.
ಶೋಭಾ ಹೆಗಡೆ ಅವರಿಗೆ ಪತಿ ವೆಂಕಟೇಶ ಹೆಗಡೆ, ಪುತ್ರ ನಾಗರಾಜ ಆಪಾರ ಬಂಧು-ಬಳಗವಿದೆ.
ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ ಹೊಸಬಾಳೆಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ

About the author

Adyot

Leave a Comment