ಕಾಂಗ್ರೆಸ್ ಹಾಗೂ ಬಿಜೆಪಿ ಮುಸ್ಲಿಂ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ–ಪ್ರಮೋದ ಮುತಾಲಿಕ


ಅದ್ಯೋತ್ ಸುದ್ದಿನಿಧಿ:
ಕಾಂಗ್ರೆಸ್ ಹಾಗೂ ಬಿಜೆಪಿಯವರು ಮುಸ್ಲಿಂ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಮೋದ ಮುತಾಲಿಕ್ ಹೇಳಿದರು.
ಅವರು ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ನಡೆದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಆದ್ಯೋತ್ ನ್ಯೂಸ್ ನೊಂದಿಗೆ ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಮುಸ್ಲಿಂರಿಗೆ ನಾಲ್ಕು ಪರ್ಸೆಂಟ್ ಮೀಸಲಾತಿ ಕೊಡುತ್ತಾ ಇರುವುದು ಅವೈಜ್ಞಾನಿಕ ಹಾಗೂ ಆ ಸಂವಿಧಾನಿಕವಾಗಿದ್ದು ಸಂವಿಧಾನದಲ್ಲಿ ಜಾತಿ ಧರ್ಮ ಆಧಾರಿತ ಯಾವುದೇ ಮೀಸಲಾತಿ ಇಲ್ಲ ಮಹಾರಾಷ್ಟ್ರ ಆಂಧ್ರಪ್ರದೇಶದಲ್ಲಿ ಇಂತಹ ಮೀಸಲಾತಿಯನ್ನು ನೀಡಿದ್ದು ಸುಪ್ರೀಂ ಕೋರ್ಟ್ ಅದನ್ನು ವಜಾ ಮಾಡಿದೆ ಕರ್ನಾಟಕದಲ್ಲಿ ಅದೇ ರೀತಿ ಆಗುತ್ತದೆ ಈ ವಿಷಯ ಕಾಂಗ್ರೆಸನವರಿಗೆ ಗೊತ್ತಿದೆ ಆದರೂ ತಾವು ಮುಸ್ಲಿಂ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಮೀಸಲಾತಿಯನ್ನು ತಂದಿದ್ದಾರೆ ಅದೇ ರೀತಿ ಕೇಂದ್ರ ಸರ್ಕಾರವು 32 ಲಕ್ಷ ಕಿಟ್ ಮುಸ್ಲಿಮರಿಗೆ ಕೊಡಲು ಹೊರಟಿದೆ ಇದು ಮೂರ್ಖತನ ಇಂತಹ ನಾಟಕವನ್ನು ಬಿಜೆಪಿ ಸರ್ಕಾರ ನಿಲ್ಲಿಸಬೇಕು ಎಂದು ಹೇಳಿದರು.

ಆದ್ಯೋತ್ ನ್ಯೂಸ್:–
ಯತ್ನಾಳ್ ರವರು ಹಿಂದುತ್ವದ ಆಧಾರದ ಮೇಲೆ ಹೊಸ ಪಕ್ಷವನ್ನು ಕಟ್ಟಲು ಹೊರಟಿದ್ದಾರೆ ನೀವು ಆ ಪಕ್ಷವನ್ನು ಸೇರುತ್ತೀರಾ?
ಬಿಜೆಪಿ ಪಕ್ಷವನ್ನು ಬೆಳೆಸಲು,ಅಧಿಕಾರಕ್ಕೆ ತರಲು ಹಿಂದೂಗಳ ಸಂಘಟನೆಯ ಪರಿಶ್ರಮವಿದೆ ಕರ್ನಾಟಕದ ಬಿಜೆಪಿಯಲ್ಲಿನ
ಬೆಳವಣಿಗೆ ನೋವು ತಂದಿದೆ ಯತ್ನಾಳರನ್ನು ಬಿಜೆಪಿಯಿಂದ ಹೊರಗೆ ಹಾಕಬಾರದಿತ್ತು. ನನ್ನನ್ನು ಇಲ್ಲಿಯವರೆಗೆ ಯತ್ನಾಳ ಸಂಪರ್ಕ ಮಾಡಿಲ್ಲ ಒಂದು ವೇಳೆ ಸಂಪರ್ಕಿಸಿದರೆ ಶ್ರೀರಾಮ ಸೇನೆಯ ಕೇಂದ್ರೀಯ ನಿರ್ಣಯದ ಪ್ರಕಾರ ಸೇರುವ ಬಗ್ಗೆ
ತೀರ್ಮಾನ ತೆಗೆದುಕೊಳ್ಳುತ್ತೇನೆ ಬಿಜೆಪಿ ಹಿಂದೂ ಸಂಘಟನೆಗಳನ್ನ ಕಡೆಗಣಿಸುತ್ತ ಇದೆ‌

ಆದ್ಯೋತ್ ನ್ಯೂಸ್:
ಆರ್ ಎಸ್ ಎಸ್ ಕೇಂದ್ರ ಕಚೇರಿಗೆ ಹತ್ತು ವರ್ಷಗಳ ನಂತರ ಪ್ರಧಾನಿ ಮೋದಿ ಭೇಟಿ ನೀಡಿರುವ ಬಗ್ಗೆ ತಮ್ಮ ಅಭಿಪ್ರಾಯ
ಆರ್ ಎಸ್ ಎಸ್ ದೇಶಭಕ್ತ ಸಂಘಟನೆ ಆರ್ ಎಸ್ ಎಸ್ ಕುರಿತು ಕಾಂಗ್ರೆಸ್ ಎಡಪಂಥೀಯ ಪಕ್ಷಗಳು ಬೇಕಾಬಿಟ್ಟಿಯಾಗಿ ಮಾತನಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡುವ ಮೂಲಕ ಆರ್ ಎಸ್ ಎಸ್ ದೇಶಭಕ್ತ ಸಂಘಟನೆ ಎಂಬ ಉತ್ತರವನ್ನು ಕೊಟ್ಟಿದ್ದಾರೆ
ಆದ್ಯೋತ್ ಸುದ್ದಿನಿಧಿ:
ಶ್ರೀರಾಮ ಸೇನೆಯ ಸಂಘಟನೆ ರಾಜ್ಯದಲ್ಲಿ ಹೇಗಿದೆ?
ಶ್ರೀರಾಮ ಸೇನೆ ಹಿಂದೂ ಸಂಘಟನೆಯಾಗಿದ್ದು ಗೋ ಹತ್ಯೆ ಲವ್ ಜಿಹಾದ್ ವಕ್ಪ ಕಾನೂನು ಸೇರಿದಂತೆ ಹಲವು ಹಿಂದೂ ವಿರೋಧಿ ಕಾರ್ಯಗಳು ನಡೆದಾಗ ಮೊದಲು ಧ್ವನಿ ಎತ್ತಿದ್ದು ಶ್ರೀರಾಮ ಸೇನೆ ಕೆಲವು ಜಿಲ್ಲೆ ಹೊರತುಪಡಿಸಿ ರಾಜ್ಯದ್ಯಂತ ಸೇನೆ ಕಾರ್ಯನಿರ್ವಹಿಸುತ್ತಿದೆ.

ಆದ್ಯೋತ್ ಸುದ್ದಿನಿಧಿ:
ಉಳಿದಿರುವ ಹಿಂದೂ ದೇವಾಲಯಗಳನ್ನು ಧರ್ಮಸ್ಥಳವು ಸೇರಿದಂತೆ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದೆ
ಈಗಾಗಲೇ 32 ಸಾವಿರ ದೇವಸ್ಥಾನಗಳು ಸರ್ಕಾರದ ಕೈಯಲ್ಲಿದೆ. ಮುಜರಾಯಿ ಇಲಾಖೆಯ ನಿಯಮದ ಪ್ರಕಾರ ಗೋಶಾಲೆಯನ್ನು ತೆರೆಯಬೇಕು ಅರ್ಚಕರಿಗೆ ತರಬೇತಿ ನೀಡಬೇಕು ಆದರೆ ಇದ್ಯಾವುದನ್ನು ಸರ್ಕಾರ ಮಾಡುತ್ತಿಲ್ಲ
ಈ ರೀತಿ ದೇವಸ್ಥಾನಗಳನ್ನು ಸುಪರ್ದಿಗೆ ತೆಗೆದುಕೊಳ್ಳುವುದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಮುಜರಾಯಿ ದೇವಸ್ಥಾನದ ಸರಹದ್ದಿನಲ್ಲಿ ಅಹಿಂದೂಗಳಿಗೆ ವ್ಯಾಪಾರ ಮಾಡಲು ಪ್ರವೇಶ ಮಾಡಲು ಅವಕಾಶ ಇಲ್ಲ. ಆದರೆ ಸವದತ್ತಿ ಎಲ್ಲಮ್ಮ ಸೇರಿದಂತೆ ಹಲವು ಪ್ರಸಿದ್ಧ ದೇವಾಲಯಗಳಲ್ಲಿ 70 ಶೇಕಡ ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು.
ಧರ್ಮಸ್ಥಳದಲ್ಲಿ ಸೌಜನ್ಯಳ ಹೆಗಲ ಮೇಲೆ ಬಂದೋಕು ಇಟ್ಟು ಗುಂಡು ಹೊಡೆಯಲು ಹೊರಟಿದ್ದಾರೆ. ಸೌಜನ್ಯಳಿಗೆ ನ್ಯಾಯ ಸಿಗಬೇಕೆಂದು ಶ್ರೀರಾಮ ಸೇನೆ ಆಗ್ರಹಿಸುತ್ತದೆ.
ಆದ್ಯೋತ್ ಸುದ್ದಿನಿಧಿ:
ಈ ಹಿಂದೆ ನೀವು ಬಿಜೆಪಿಯ ವಿರುದ್ಧವೇ ಚುನಾವಣೆಗೆ ನಿಂತಿದ್ದೀರಿ
ದೇಶದಲ್ಲಿ ಭ್ರಷ್ಟ ವ್ಯವಸ್ಥೆ ಇದೆ. ಕೇವಲ ಹಣಕಾಸಿನ ಭ್ರಷ್ಟತೆ ಅಲ್ಲ ವೈಚಾರಿಕ ಭ್ರಷ್ಟತೆಯೂ ಇದೆ ಈ ಭ್ರಷ್ಟತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಚುನಾವಣೆಗೆ ನಿಂತಿದ್ದೆ.ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ವಿಶ್ವ ಹಿಂದು ಪರಿಷತ್ ಬಿಜೆಪಿ ಹಾಗೂ ಸ್ವಾಮೀಜಿಗಳಲ್ಲಿ ಕೇಳಿಕೊಂಡಿದ್ದೆ. ಆದರೆ ನಿರಾಕರಿಸಿದಾಗ ನಾನು ಅನಿವಾರ್ಯವಾಗಿ ಚುನಾವಣೆಗೆ ನಿಂತೆ. ಅದರಲ್ಲಿ ನಾನು ವಿಫಲನಾಗಿದ್ದೆನೆ.‌ ವ್ಯವಸ್ಥೆ ಸರಿಪಡಿಸಲಾಗದಷ್ಟು ಕುಲಗೆಟ್ಟು ಹೋಗಿದೆ.‌ ಮೋದಿ ಅವರಿಂದಲೇ ಇದನ್ನು ಸರಿಪಡಿಸಲು ಆಗುತ್ತಿಲ್ಲ.
ಆದ್ಯೋತ್ ಸುದ್ದಿನಿಧಿ:
ಶಾಸಕರು ಹಾಗೂ ಸಂಸದರು ಸಂಬಳ ಎರಡು ಪಟ್ಟು ಹೆಚ್ಚು ಮಾಡಿಕೊಂಡಿದ್ದಾರೆ
ಗ್ಯಾರೆಂಟಿಯ ಮೂಲಕ ವ್ಯವಸ್ಥೆ ಹದಗೆಟ್ಟಿದೆ ಜನರನ್ನು ಬಿಕ್ಷುಕರನ್ನಾಗಿ ಮಾಡುತ್ತಿದ್ದಾರೆ ಇದರಿಂದಾಗಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ ಇಂತಹ ಸಮಯದಲ್ಲಿ ಶಾಸಕರು ಸಂಸದರು ತಮ್ಮ ಸಂಬಳವನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಿದ್ದಾರೆ ಬಿಜೆಪಿ ಸೇರಿದಂತೆ ಯಾವ ಪಕ್ಷದ ಶಾಸಕನು ಇದನ್ನು ವಿರೋಧಿಸಲಿಲ್ಲ ಇದು ನಾಚಿಕೆಗೇಡಿನ ಸಂಗತಿ, ಇವರೆಲ್ಲರೂ ಲೂಟಿ ಹೊಡೆಯುತ್ತಿದ್ದಾರೆ . ರಾಜ್ಯದ ಯಾವ ಶಾಸಕ
ಬಡವನಿದ್ದಾನೆ ಎಂದರು
ಅದ್ಯೋತ್ ಸುದ್ದಿನಿಧಿ:
ಬಿಜೆಪಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಮೋದಿ ಅವರ ಹೊರತುಪಡಿಸಿ ಹೆಚ್ಚಿನವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯಲ್ಲಿ ಹಿಂದುತ್ವದ ಬಗ್ಗೆ ಬದ್ಧತೆ ಇಲ್ಲವಾಗಿದೆ. ಹೀಗೆ ಮುಂದುವರೆದರೆ ಕಾಂಗ್ರೆಸ್ಸಿಗೂ ಬಿಜೆಪಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ.

About the author

Adyot

Leave a Comment