ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಸ್ಥಳೀಯ ಯುಗಾದಿ ಸಮಿತಿಯವರು ಆಯೋಜಿಸಿದ್ದ ಯುಗಾದಿ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿ ಮಾತನಾಡಿ.
ಧರ್ಮ ಎನ್ನುವುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ ನಾವು ಧರ್ಮವನ್ನು ಸರಿಯಾದ ರೀತಿಯಲ್ಲಿ ಧರ್ಮವನ್ನು ಪಾಲನೆ ಮಾಡಿದರೆ ಧರ್ಮ ನಮ್ಮನ್ನು ಕಾಯುತ್ತದೆ ಧರ್ಮ ಪಾಲನೆ ಮಾಡದೆ ಸ್ವೇಚ್ಛಾಚಾರದಿಂದ ಬದುಕಲು ಹೊರಟರೆ ಅದೇ ಧರ್ಮ ನಮ್ಮನ್ನು ಕೊಲ್ಲುತ್ತದೆ ಯುಗಾದಿ ಎನ್ನುವುದು ಪ್ರಕೃತಿಯ ಬದಲಾವಣೆಯ ಕಾಲವಾಗಿದೆ ಜನವರಿಯಲ್ಲಿ ಪ್ರಕೃತಿಯಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ ಆದರೂ ನಾವು ಜನವರಿಯಲ್ಲಿ ಹೊಸವರ್ಷ ಆಚರಿಸುತ್ತಿದ್ದೆವೆ.ದೀಪ ಬೆಳಗಿಸುವುದು ಹಿಂದೂ ಧರ್ಮದ ಪದ್ದತಿ ಆದರೆ ನಾವು ದೀಪವನ್ನು ಆರಿಸುವ ಮೂಲಕ ನಮ್ಮ ಜನ್ಮದಿನಾಚರಣೆ ಆಚರಿಸುತ್ತಿದ್ದೆವೆ. ನಾವು ಪಾಶ್ಚಾತ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದೆವೆ ಎಂದು ಹೇಳಿದರು.
ಶಿರಳಗಿ ಶ್ರೀರಾಮಕ್ಷೇತ್ರದ ಶ್ರೀಬ್ರಹ್ಮಾನಂದ ಭಾರತೀ ಸ್ವಾಮೀಜಿ ಮಾತನಾಡಿ,ಸೃಷ್ಟಿ ಎನ್ನುವುದು ದ್ವಂದ್ವದಿಂದ ಕೂಡಿದೆ ಇಲ್ಲಿ ಸುಖದುಃಖಗಳು ಬರುತ್ತಿರುತ್ತದೆ ಇದಕ್ಕೆ ನಾವು ಎದೆಗುಂದಬಾರದು ಬಂದುದ್ದನ್ನು ಎದುರಿಸುವ ಧೈರ್ಯಮಾಡಬೇಕು.ನಾವು ಧರ್ಮದ ಕುರಿತು ಕೇವಲ ಮಾತನಾಡಿದರೆ ಸಾಲದು ಅದನ್ನು ಪಾಲಿಸಬೇಕು ಪ್ರತಿನಿತ್ಯ ಧ್ಯಾನ,ಜಪ,ಅಧ್ಯಯನ ಮಾಡಬೇಕು ನಮ್ಮ ಮಕ್ಕಳಿಗೆ ನಮ್ಮ ಸಂಸ್ಕಾರ,ಸಂಸ್ಕೃತಿಯನ್ನು ಪರಿಚಯಿಸಿ ಅವರು ಅದರಂತೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯವಕ್ತಾರ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ,ಯುಗಾದಿ ಎನ್ನುವುದು ಹಿಂದೂಗಳಿಗೆ ಹೊಸವರ್ಷವಾಗಿದೆ ಹಲವು ಐತಿಹಾಸಿಕ ಘಟನೆಗಳು ಈ ದಿನ ನಡೆದಿದೆ ಆರ್‌ಎಸ್‌ಎಸ್ ಸ್ಥಾಪಕ ಹೆಗಡೆವಾರ್ ಹುಟ್ಟಿದ ದಿನ. ಹೆಗಡೆವಾರ್ ಅಂದು ಆರ್‌ಎಸ್‌ಎಸ್ ಸ್ಥಾಪಿಸಿದಿದ್ದರೆ ಇಂದು ಹಿಂದೂಗಳ ಸ್ಥಿತಿ ಶೋಚನೀಯವಾಗಿರುತ್ತಿತ್ತು.
ನಮ್ಮ ದೇಶದ ಮೇಲೆ ಮೊಗಲರು,ಕ್ರಿಶ್ಚಿಯನ್ನರು ದಾಳಿ ಮಾಡಿ ನಮ್ಮ ಸಂಸ್ಕೃತಿ ನಾಶಮಾಡಲು ಪ್ರಯತ್ನ ಪಟ್ಟರು. ಆದರೆ ರಾಜಮಹಾರಾಜರು ಇಂತಹವರ ವಿರುದ್ಧ ಕ್ರಾಂತಿಕಾರಕ ಹೋರಾಟ ಮಾಡುತ್ತಾ ಬಂದಿದ್ದರು. ಸ್ವಾತಂತ್ರ್ಯದ ನಂತರವೂ ನಮ್ಮ ಪರಿಸ್ಥಿತಿ ಭಿನ್ನವಾಗಿರಲಿಲ್ಲ ಇದನ್ನರಿತು ಹೆಗಡೆವಾರ್ ೧೯೨೫ರಲ್ಲಿ ಸಂಘವನ್ನು ಸ್ಥಾಪಿಸಿದರು. ಇದರಿಂದ ನಮಗೆ ಸಂಸ್ಕಾರ,ಮಾರ್ಗದರ್ಶನ ದೊರೆಯಲು ಕಾರಣವಾಯಿತು ಎಂದು ಹೇಳಿದರು.
ನಾವೆಲ್ಲರೂ ಇನ್ನೂ ೭೮ ವರ್ಷದ ಗುಲಾಮಗಿರಿಯಲ್ಲೇ ಇದ್ದೇವೆ ಎಲ್ಲವನ್ನು ಕೂಡ ಹೊಂದಾಣಿಕೆ ಮಾಡಿಕೊಂಡೆ ಇದ್ದೇವೆ ಹೊಂದಿಕೊಂಡು ಹೋಗುವಂತಹ ಮಾನಸಿಕತೆ ನಮ್ಮಲ್ಲಿ ನಿರ್ಮಾಣವಾಗಿದೆ ನಾವು ಸಿಡಿದೇಳಬೇಕಾಗಿದೆ.ಒಣಗಿದ ಎಲೆಗಳನ್ನು ಕೆಳಗಡೆ ಉದುರಿಸಿ ಹಸಿರು ಹ್ಯಾಗೆ ಚಿಗುರುತ್ತದೆ
ಯೋ ಹಾಗೆ ಗುಲಾಮಗಿರಿಯ ಹೇಡಿತನದ ದೌರ್ಬಲ್ಯದ ಒಣಗಿದ ಎಲೆಗಳನ್ನು ಕೆಳಗಡೆ ಉರುಳಿಸಿ ಧೈರ್ಯದ ರಾಷ್ಟ್ರೀಯತೆಯ ದೇಶಭಕ್ತಿಯ ಎಲೆಗಳನ್ನು ನಾವು ಇವತ್ತು ಮತ್ತೆ ಚಿಗುರಿಸಬೇಕಾಗಿದೆ ಇಲ್ಲ ಅಂದರೆ ನಮಗೆ ಭವಿಷ್ಯವೇ ಇಲ್ಲವಾಗುತ್ತದೆ. ಶತ್ರು ನಮ್ಮ ಮನೆಯ ಬಾಗಿಲಿಗೆ ಬಂದು ನಿಂತುಕೊಂಡು ಬಿಟ್ಟಿದ್ದಾನೆ ಒದೆಯಬೇಕು ಒಳಗೆ ಸೇರಿಸಿಕೊಳ್ಳಬೇಕು ಎಂಬ ನಿರ್ಧಾರ ನಮ್ಮ ಕೈಯಲ್ಲಿದೆ. ನಾವು ಆಯುಧ ಪೂಜೆ ಎಂದು ಪುಸ್ತಕ ಪೆನ್ನು ಸ್ಕೂಟರ್ ಟ್ರ‍್ಯಾಕ್ಟರ್ ಇಂಥವುಗಳನ್ನು ಇಟ್ಟು ಪೂಜೆ ಮಾಡುತ್ತೇವೆ ಇದರಿಂದ ಶಸ್ತ್ರ ಪೂಜೆಗೆ ಅವಮಾನ ಮಾಡುತ್ತಿದ್ದೇವೆ. ಶಸ್ತ್ರ ಎಂದರೆ ತಲ್ವಾರ್ , ಕೊಡ್ಲಿ ಕುರಪಿ, ಇದು ಶಸ್ತ್ರ. ಇದಕ್ಕೆ ಪೂಜೆ ಮಾಡಬೇಕಾಗಿದೆ.ಇದು ಯಾರನ್ನು ಹೊಡೆಯುವುದಕ್ಕೋಸ್ಕರ ಅಲ್ಲ ಹಿಂದೂ ಸಮಾಜದ ಹಿಂದೂ ದೇಶದ ಹಿಂದೂ ಹೆಣ್ಣುಮಕ್ಕಳ ಗೋಮಾತೆಯ ಸುರಕ್ಷತೆಗೋಸ್ಕರ ನಮಗೆ ಇವತ್ತು ಶಸ್ತ್ರ ಪೂಜೆಯ ಅವಶ್ಯಕತೆ ಇದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಯುಗಾದಿಯ ಹೊಸ ವರ್ಷದ ದಿನ ಹಳೆ ಜಾಡ್ಯ, ಹಳೆ ಭಯ, ಗುಲಾಮಗಿರಿ, ರಾಜಕಾರಣಿಗಳನ್ನು ಬಯ್ಯುವುದು ಸಾಕು ಇನ್ನು ನಾನೇ ನಾಯಕ ನಾನೇ ಹಿಂದುತ್ವದ ರಕ್ಷಕ ಎಂದು ಪ್ರತಿಯೊಬ್ಬ ವ್ಯಕ್ತಿ ಸಿದ್ಧವಾಗಬೇಕು.ಹಿಂದೂ ರಾಷ್ಟ್ರ ನಮ್ಮದು ನಾವು ಮಾಡೇ ಮಾಡುತ್ತೇವೆ ಎಂಬ ಸಂಕಲ್ಪವನ್ನು ತೊಡೋಣ ಎಂದು ಮುತಾಲಿಕ್ ಹೇಳಿದರು.
ವೇದಿಕೆಯಲ್ಲಿ ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ ಈರಾ ನಾಯ್ಕ,ಕಾರ್ಯಾಧ್ಯಕ್ಷ ಕೆ.ಜಿ.ನಾಯ್ಕಹಣಜೀಬೈಲ್,ಅಧ್ಯಕ್ಷ ಡಾ.ಶ್ರೀಧರ ವೈದ್ಯ,ಸುದರ್ಶನಪಿಳ್ಳೆ ಉಪಸ್ಥಿತರಿದ್ದರು.