ಆದ್ಯೋತ್ ಸುದ್ದಿನಿಧಿ:

filter: 0; jpegRotation: 90; fileterIntensity: 0.000000; filterMask: 0;


ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿದ್ದ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ
ಸಂದೇಶ ನೀಡಿ,ದೇವಸ್ಥಾನಗಳು ಸಾಕಷ್ಟಿವೆ, ಆದರೆ ಶಾಸ್ತಿçÃಯವಾದ ದೇವಾಲಯಗಳು ವಿರಳ. ಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಾಲಯ ವಾಸ್ತುಶಾಸ್ತç, ಆಗಮೋಕ್ತವಾದ ಶಕ್ತಿಯುತವಾದ ದೇವತಾ ಸನ್ನಿಧಿಯಾಗಿರುತ್ತದೆ.

ಬಿಳಗಿ ಸೀಮೆಯ ದೇವಾಲಯ ಇದು. ಚೈತನ್ಯದ ಕಳೆ ತುಂಬಿರುವ ಪವಿತ್ರ ತಾಣ. ಅದ್ಯಾವದೋ ಕಾರಣಕ್ಕೆ ಕಳೆದ ಸರಿಸುಮಾರು ೬೦ ವರ್ಷಗಳಿಂದ ದೇವರಿಗೆ ಅಷ್ಟಬಂಧ ಮಹೋತ್ಸವ, ಪುನರ್‌ಪ್ರತಿಷ್ಠೆ ನಡೆದಿರಲಿಲ್ಲ. ೧೨ ವರ್ಷಕ್ಕೊಮ್ಮೆ ಅಷ್ಟಬಂಧ ಮಾಡಬೇಕಿತ್ತು. ಒಂದು ತಲೆಮಾರು, ಎರಡು ತಲೆಮಾರು ಸಹ ಅಷ್ಟ ಬಂಧ ಕಂಡಿರಲಿಲ್ಲ. ಅಂತಹ ಕಾರ್ಯಕ್ರಮ ಇದೀಗ ಸಂಪನ್ನಗೊAಡಿದೆ ಮುಂದಿನ ದಿನಗಳಲ್ಲಿ ಇದು ಅತ್ಯಂತ ಶಕ್ತಿಯುತವಾದ ಸ್ಥಾನವಾಗಲಿದೆ. ಶ್ರೀ ರಾಮೇಶ್ವರ ಹಾಗೂ ಪರಿವಾರ ದೇವರ ಪುನ:ಪ್ರತಿಷ್ಠೆ, ಅಷ್ಟಬಂಧ ನೆರವೇರಿದೆ. ಬ್ರಹ್ಮಕಲಶೋತ್ಸವ ಮುಂದಕ್ಕೆ ಆಗಲಿದೆ. ಭಕ್ತಜನರ ಭಾಗ್ಯವಿದು, ಇಡೀ ಸೀಮೆಯ ಕ್ಷೇಮಕ್ಕೆ, ಎಲ್ಲಾ ಭಕ್ತ ಜನರ ಆಧ್ಯಾತ್ಮಿಕ ಉನ್ನತಿಗೆ, ಬದುಕಿನ ರಕ್ಷೆಗೆ ಈ ಮಹತ್ಕಾರ್ಯ ಕಾರಣವಾಗಿದೆ ಎಂದರು.

ದಿವ್ಯಾಷ್ಟಬಂಧ ಕಾರ್ಯಕ್ರಮದಲ್ಲಿ ಹಾಸನದ ಸಮರ್ಥ ರಾಮಾವಧೂತ ಆಶ್ರಮದ ಶ್ರೀ ರಾಮಾವಧೂತ ಸ್ವಾಮೀಜಿಗಳು ಪಾಲ್ಗೊಂಡು ಭಕ್ತಜನತೆಗೆ ಆಶೀರ್ವಾದ ಮಾಡಿದರು. ದಿವ್ಯಾಷ್ಟಬಂಧ ಮಹೋತ್ಸವ ಸಮಿತಿ ಹಾಗೂ ಮೊಕ್ತೇಸರ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು, ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಶಿಷ್ಯಭಕ್ತರು ಪಾಲ್ಗೊಂಡಿದ್ದರು. ವಿವಿಧ ಮಹಿಳಾ ಸಂಘಟನೆಗಳು ನಿರಂತರ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಧಾರ್ಮಿಕ ಕಾರ್ಯಕ್ರಮಗಳು: ದಿವ್ಯಾಷ್ಟಬಂಧ ಮಹೋತ್ಸವ ನಿಮಿತ್ತ ಏಪ್ರಿಲ್ ೨ ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡುಬಂದಿದ್ದು ಏಪ್ರಿಲ್ ೫ ರಂದು ಅಧಿವಾಸ ಹೋಮ, ತತ್ವ ಹೋಮ, ಪೂರ್ಣಕಲಾವೃದ್ಧಿ ಹೋಮ, ಶ್ರೀಮದ್ಭಾಗವತ ಪಾರಾಯಣ ಆರಂಭ, ಮಹಾಬಲಿಪ್ರದಾನ, ಜಪಹೋಮ, ಮಯೂರೋತ್ಸವ ನಡೆಯಲಿದೆ. ಏಪ್ರಿಲ್ ೬ ಶ್ರೀ ರಾಮನವಮಿಯಂದು ನವಗ್ರಹ ಶಾಂತಿ, ಮೃತ್ಯುಂಜಯ ಹೋಮ, ಶ್ರೀರಾಮತಾರಕ ಹೋಮ, ಮಹಾಬಲಿಪ್ರದಾನ, ಅಧಿವಾಸ ಹೋಮ, ಜಪಹೋಮ, ಡೋಲೋತ್ಸವ ಜರುಗಲಿದೆ.

filter: 0; jpegRotation: 0; fileterIntensity: 0.000000; filterMask: 0;