ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಧನ್ವಂತರಿ ಆಯುರ್ವೇದ ಮೆಡಿಕಲ್ ಕಾಲೇಜ್ನ ರಜತ ಮಹೋತ್ಸವ ಹಾಗೂ ನೂತನ ಹಾಸ್ಪಿಟಲ್ ಉದ್ಘಾಟನೆ ಏ.25 ರಂದು ನಡೆಯಲಿದೆ.
1998ರಲ್ಲಿ ಸರಕಾರದ ಅನುಮತಿಯೊಂದಿಗೆ ಸಾಕಷ್ಟು ಕೊರತೆ,ಅನಾನುಕೂಲತೆಗಳ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಧನ್ವಂತರಿ ಆಯುರ್ವೇದ ಮೆಡಿಕಲ್ ಕಾಲೇಜ್,ಹಾಸ್ಪಿಟಲ್,ಮತ್ತು ರಿಸರ್ಚ ಸೆಂಟರ್ನ್ನು ಪ್ರಾರಂಭಿಸಲಾಯಿತು.ಕೇವಲ 25 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜ್ 2018ರಿಂದ 1೦೦ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ದೇಶಾದ್ಯಂತ ತನ್ನ ಖ್ಯಾತಿಯನ್ನು ವಿಸ್ತರಿಸಿಕೊಂಡಿದೆ.ವಿಶಾಲವಾದ ಹಸಿರು ಪರಿಸರದ ನಡುವೆ ತಲೆಎತ್ತಿರುವ ಈ ಕಾಲೇಜ್ ಸಹಕರಿಸುವ ಆಡಳಿತ ಮಂಡಳಿ,ಉತ್ತಮ ಶಿಕ್ಷಣ ನೀಡುವ ಶಿಕ್ಷಕರು,ವಿದ್ಯಾರ್ಥಿಗಳಿಗೆ ರ್ಆಗಿಂಗ್ ಸೇರಿದಂತೆ ಯಾವುದೇ ಭಯ,ಆತಂಕ ಇಲ್ಲದೆ ಮನಗೊಟ್ಟು ವಿದ್ಯಾಭ್ಯಾಸ ಮಾಡಲು ಅನುಕೂಲ ಕಲ್ಪಿಸಲಾಗಿದೆ.
ದೇಶದ ಅತ್ಯುತ್ತಮ ಆಯುರ್ವೇದ ಕಾಲೇಜ್ನಲ್ಲಿ ಈ ಕಾಲೇಜ್ಗೆ 6ನೇ ಸ್ಥಾನ ಪಡೆದಿದೆ.ದೇಶದ ಬೇರೆ ಬೇರೆ ಪ್ರದೇಶದಿಂದ ವಿದ್ಯಾರ್ಥಿಗಳು ಬರುತ್ತಾರೆ ಬೇರೆ ದೇಶಗಳಿಂದಲೂ ವಿದ್ಯಾರ್ಥಿಗಳು ಬಂದಿದ್ದಾರೆ. 2023ಕ್ಕೆ 25 ವರ್ಷ ಸಂದಿದ್ದರೂ ಕೆಲವು ಕಾರಣಗಳಿಂದ ರಜತ ಮಹೋತ್ಸವ ಕಾರ್ಯಕ್ರಮ ಮುಂದೂಡಲಾಗಿತ್ತು. 2023ರಲ್ಲಿ ಮೆಡಿಕಲ್ ಇನ್ಸ್ಟಿಟ್ಯೂಟ್ ಆಪ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜ್ ಪ್ರಾರಂಭಿಸಲು ಅನುಮತಿ ಕೇಳಿದ್ದೇವು ಈಗ
ಸರಕಾರದಿಂದ ಅನುಮತಿ ಸಿಕ್ಕಿದೆ ಈ ವರ್ಷದಿಂದ ಕಾಲೇಜ್ ಪ್ರಾರಂಭಿಸಲಾಗುತ್ತಿದೆ ಎಂದು ಕಾಲೇಜ್ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯ ಸಚೀವ ದಿನೇಶ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,ಶಾಸಕ ಭೀಮಣ್ಣ ನಾಯ್ಕ, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಭಗವಾನ ಬಿ.ಸಿ. ಭಾಗವಹಿಸಲಿದ್ದಾರೆ.
1998ರಲ್ಲಿ ಪ್ರಾರಂಭವಾದ ಕಾಲೇಜ್ನಲ್ಲಿ ಇಲ್ಲಿಯವರೆಗೆ 1378 ವಿದ್ಯಾರ್ಥಿಗಳು ವೈದ್ಯರಾಗಿ ಹೊರಬಂದಿದ್ದಾರೆ.43 ಜನರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಡೀ ಜಗತ್ತು ಆಯುರ್ವೇದ,ಯೋಗ,ನಿಸರ್ಗ ಚಿಕಿತ್ಸೆಗೆ ತೆರದುಕೊಳ್ಳುತ್ತಿರುವ ಸಂದರ್ಭದಲ್ಲಿ ನಿಸರ್ಗ ಚಿಕಿತ್ಸೆ ಯೋಗವಿಜ್ಞಾನ ಕಾಲೇಜ್ ಪ್ರಾರಂಭಿಸಲು ಸಂಕಲ್ಪಿಸಲಾಗಿದೆ ಪ್ರತಿವರ್ಷ 50 ವಿದ್ಯಾರ್ಥಿಗಳಿಗೆ ಸರಕಾರ ಅವಕಾಶ ನೀಡಿದೆ.
—-