ಆದ್ಯೋತ್ ಸುದ್ದಿನಿಧಿ:
ಹಲವು ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾಗಿದ್ದ ಉತ್ತರಕನ್ನಡ ಜಿಲ್ಲೆಯ ಶಿರಸಿ ಟಿಪ್ಪುನಗರದ ಮೌಸೀನ್ ಅಲಯಾಸ್ ಇಮ್ತಿಯಾಜ್ ಶುಕೂರನನ್ನು ವಿಜಯಪುರದ ಸಿಂಧಗಿಯಲ್ಲಿ ಬಂಧಿಸಲಾಗಿದೆ.
ಬೆಂಗಳೂರಿನ ಕೆಜಿಹಳ್ಳಿ- ಡಿಜೆಹಳ್ಳಿ ಪ್ರಕರಣದ ಪ್ರಮುಖ ಆರೋಪಿ ಈತನಾಗಿದ್ದು,ಎನ್.ಐ.ಎ.ಭಂಧಿಸಿರುವ ಉಗ್ರಗಾಮಿ ಸಾಧಿಕ್ ಗೆ ಇವನು ತರಬೇತಿ ನೀಡಿದ್ದಾನೆ ಎನ್ನಲಾಗಿದೆ.
ಘಟನೆಯ ನಂತರ ಹೈದರಾಬಾದ್ ಗೆ ಪರಾರಿಯಾಗಿದ್ದ ಮೌಸಿನ್ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ವಾಸವಾಗಿದ್ದ ನಿಖರ ಮಾಹಿತಿ ಪಡೆದ ಪೊಲೀಸ್ ರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾರ್ಗದರ್ಶನದಲ್ಲಿ ಮೋಸ್ಟ್ ವಾಂಟೆಡ್ ಉಗ್ರಗಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ