ಸಿದ್ದಾಪುರ ಭಾನ್ಕುಳಿಮಠ ಗೋಸ್ವರ್ಗದಲ್ಲಿ ಮೆ.1 ರಿಂದ ಮೆ.4ರವರೆಗೆ ಶಂಕರಪ0ಚಮಿ ಉತ್ಸವ


ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬಾನ್ಕುಳಿಮಠದ ಪ್ರಸಿದ್ದ ಪ್ರೇಕ್ಷಣೀಯ ಪ್ರವಾಸಿ ಸ್ಥಳ ಭಾನ್ಕುಳಿ ಗೋಸ್ವರ್ಗದಲ್ಲಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೆ.1 ರಿಂದ ಮೆ.4ರವರೆಗೆ ಶಂಕರಪoಚಮಿ ಉತ್ಸವ ನಡೆಯಲಿದೆ

filter: 0; jpegRotation: 90; fileterIntensity: 0.000000; filterMask: 0;

ಈ ಕುರಿತು ಮಾಹಿತಿ ನೀಡಿದ ಶಂಕರಪಂಚಮಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಜಿ.ಕೆ.ಹೆಗಡೆ ಗೋಳಗೋಡ,ಶಂಕರರ ಅದ್ವ್ಯತ ಸಿದ್ದಾಂತವನ್ನು,ತತ್ವವನ್ನು ಪ್ರಚಾರಮಾಡುವುದಕ್ಕಾಗಿ ರಾಮಚಂದ್ರಪುರ ಮಠದ ನಮ್ಮ ಸ್ವಾಮೀಜಿಯವರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಕಳೆದ ಹಲವಾರು ವರ್ಷಗಳಿಂದ ಶಂಕರಪಂಚಮಿ ಉತ್ಸವವವನ್ನು ಮಾಡುತ್ತಾ ಬಂದಿದ್ದಾರೆ. ಈ ಬಾರಿಯೂ ವಿಶಿಷ್ಟವಾಗಿ ವಿಭಿನ್ನವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಮೆ.1 ರಂದು ಭಾನ್ಕುಳಿರಾಮದೇವರ ಮಠದ ವಾರ್ಷಿಕೋತ್ಸವ ನಡೆಯಲಿದೆ. 1982-83ರಲ್ಲಿ ಅಘನಾಶಿನಿಗೆ ಡ್ಯಾಂ ನಿರ್ಮಿಸಲು ಸರಕಾರ ಮುಂದಾಗಿತ್ತು ಆ ಸಮಯದಲ್ಲಿ ರಾಮಚಂದ್ರಾಪುರಮಠದ ಹಿರಿಯ ಸ್ವಾಮೀಜಿಯವರಲ್ಲಿ ಅರಿಕೆ ಮಾಡಿಕೊಂಡಾಗ ಇದೇ ರಾಮದೇವರ ಗರ್ಭಗುಡಿಯನ್ನು ಸರಿಯಾಗಿ ಕಟ್ಟಿರಿ ಬಿಳಗಿಸೀಮೆಯ ಪ್ರತಿಗ್ರಾಮದ ಮಣ್ಣನನ್ನು ಅಡಿಪಾಯಕ್ಕೆ ಹಾಕಿರಿ ಎಂದು ಸೂಚನೆ ನೀಡಿದ್ದರು. ಅದರಂತೆ ಮಾಡಿದಾಗ ಡ್ಯಾಂ ನಿರ್ಮಾಣ ನಿಂತುಹೋಗಿತ್ತು ಅಂತಹ ಶಕ್ತಿ ಸ್ಥಳ ಇದಾಗಿದೆ. ಅದೇ ದಿನ ಸಂಜೆ ಶ್ರೀಗಳು ಆಗಮಿಸಲಿದ್ದಾರೆ. ಬೆಂಗಳೂರಿನ ಶಿಲ್ಪಿಯಿಂದ ನಿರ್ಮಾಣವಾಗಿರುವ ವೈಶಿಷ್ಯಪೂರ್ಣ ಮಹಾಪಾದುಕೆಯು ಮಂಗಳೂರಿನ ಮಾಣಿಮಠದಲ್ಲಿ ಅನಾವರಣಗೊಂಡಿದ್ದು ಶಂಕರರ ಜನ್ಮಸ್ಥಳ ಕಾಲಡಿಯಲ್ಲಿ ಪೂಜೆಗೊಂಡು ರಾಜ್ಯದ ವಿವಿಧ ಭಾಗದಲ್ಲಿ ೫೬ ದಿನ ಸಂಚರಿಸಿ ಈಗ ಭಾನ್ಕುಳಿಮಠದಲ್ಲಿ ಶ್ರೀಗಳಿಂದ ಪೂಜೆಗೊಳ್ಳಲಿದೆ. ಅಡಿಕೆ ತೋಟದ ಸಮಸ್ಯೆಯಿಂದ ಹಿಡಿದು ಕೃಷಿಯಲ್ಲಿ ಬರುವ ಸಮಸ್ಯೆ ನಿವಾರಣೆಯಾಗಲು,ಲೋಕಲ್ಯಾಣಾರ್ಥವಾಗಿ ಈ ಪೂಜೆ ನಡೆಯಲಿದೆ ಪೂಜೆಯಲ್ಲಿ 1೦೦8 ಸಂಖ್ಯೆಯಲ್ಲಿ ಫಲಪುಷ್ಪಗಳು,ವೀಳ್ಯದೆಲೆ,ಅಡಿಕೆ ಕಾಯಿಯನ್ನು ಸಮರ್ಪಣೆ ಮಾಡಲಾಗುತ್ತದೆ ಎಂದು ಹೇಳಿದರು

ಗೋಸ್ವರ್ಗದ ಒಂದು ಎಕರೆ ಪ್ರದೇಶದಲ್ಲಿ ಭಾರತದ ನಕ್ಷೆಯಾಕಾರದಲ್ಲಿ ಪಂಚಾಯತ ಶಿಲೆಗಳನ್ನು ಸ್ಥಾಪಿಸಲಾಗುತ್ತಿದೆ. ಭಾರತದ ಯಾವ ಸ್ಥಳದಲ್ಲಿ ಈ ಪುಣ್ಯಶಿಲೆಗಳು ಸಿಗುತ್ತದೆಯೋ ಅಂತಹ ಸ್ಥಳವನ್ನು ಗುರುತಿಸಿ ಆ ಜಾಗದಲ್ಲಿ ಪೂಜೆಗಳು ಮೆ.3 ರಂದು ನಡೆಯಲಿದೆ ಇದು ಶಾಶ್ವತವಾಗಿ ಇರಲಿದ್ದು ಇದು ಗೋಸ್ವರ್ಗದಂತೆ ಪ್ರೇಕ್ಷಣೀಯ ಸ್ಥಳವಾಗಲಿದೆ. ಇದೇ ದಿನ ಧರ್ಮಸಭೆ ನಡೆಯಲಿದ್ದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಎಂದು ಮಾಹಿತಿ ಜಿ.ಕೆ.ಹೆಗಡೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ ಹೆಗಡೆ ಚಟ್ನಳ್ಳಿ,ಎಂ.ವಿ.ಹೆಗಡೆ,ಎA.ಎA.ಹೆಗಡೆ,ಜಿ.ಎಸ್.ಹೆಗಡೆಕಲ್ಲಾಳ,ಶಾAತಾರಾಮ ಹಿರೇಮನೆ,ರಾಘವೇಂದ್ರ ಮುಸವಳ್ಳಿ, ಮುಂತಾದವರು ಉಪಸ್ಥಿತರಿದ್ದರು.
—–
ಮೆ.4 ರಂದು ಕಾಮಧೇನು ಹವನ 3೦ ಕುಂಡದಲ್ಲಿ ಹವನ ನಡೆಯಲಿದೆ. ಈಗಾಗಲೇ ಉತ್ತರಕರ್ನಾಟಕದ 3೦ ಜನರು ಈ ಹವನದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದ್ದಾರೆ. ಇನ್ನೂ ಕೆಲವರು ಬರುತ್ತಿದ್ದು ಕೊನೆಯ ದಿನದವರೆಗೂ ಹೆಸರು ನೀಡಲು ಅವಕಾಶವಿದೆ. ಗೋಸೇವೆಯಲ್ಲಿ ನಿರತರಾಗಿರುವ ಐದು ಜನರಿಗೆ ಗೋಪಾಲಗೌರವ ಪ್ರಶಸ್ತಿಯನ್ನು ಶ್ರೀಗಳಿಂದ ನೀಡಲಾಗುವುದು. ಮಾರ್ವಾಡಿ ಸಮಾಜದ 1೦೦ಕ್ಕೂ ಹೆಚ್ಚು ಜನರಿಂದ ಬಾಂಗಡಾ ನೃತ್ಯ ನಡೆಯಲಿದೆ. ಗೋಆರತಿ ಎಂಬ ವಿಶೀಷ್ಟಕಾರ್ಯಕ್ರಮಗಳನ್ನು ನಡೆಸಲಾಗುವುದು. 6೦,7೦,8೦ ವರ್ಷ ವಯಸಾದವರಿಗೆ ಶಾಂತಿ ಹೋಮಗಳು ನಡೆಯಲಿದೆ. ಇವೆಲ್ಲವೂ ಉಚಿತವಾಗಿ ನಡೆಸಲಾಗುವುದು. ಏ.13ರಿOದ ವಟುಶಿಕ್ಷಣ ಶಿಬಿರ ನಡೆಯುತ್ತಿದ್ದು 7೦ ಮಕ್ಕಳು ಭಾಗವಹಿಸಿದ್ದಾರೆ ಮಂಗಳವಾರ ಈ ಶಿಬಿರ ಮುಕ್ತಾಯವಾಗಲಿದೆ ಎಂದು ಗೋಸ್ವರ್ಗದ ಅಧ್ಯಕ್ಷ ಎಂ.ಜಿ.ರಾಮಚAದ್ರ ಹೇಳಿದರು.
——
ಗೋಸ್ವರ್ಗದ ಗೋಸೇವೆಗಾಗಿ ಮಾತೃತ್ವಮ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. 1೦೦೦ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ಈ ಸಂಸ್ಥೆಯಲ್ಲಿದ್ದಾರೆ.ಗೋಸೇವೆಗಾಗಿ ಸಂಪನ್ಮೂಲನಾ ಕ್ರೋಢಿಕರಿಸುವ ಕಾರ್ಯಕರ್ತೆಯರಿಗೆ ಶ್ರೀಗಳಿಂದ ಸನ್ಮಾನ,ಮಂತ್ರಾಕ್ಷತೆ ಸಿಗಲಿದೆ. ಶಂಕರಪ0ಚಮಿ ಉತ್ಸವದಲ್ಲಿ ಕುಂಕುಮಾರ್ಚನೆ,ಸ್ತೋತ್ರಪಠನೆ ನಡೆಯಲಿದೆ. ಅಲ್ಲದೆ ಸಾಗರ-ಸಿದ್ದಾಪುರ ಮಹಿಳಾ ಕಾರ್ಯಕರ್ತರು ಸೇರಿ ಸಗಣಿಯಿಂದ 14೦೦೦ ಬೆರಣಿ ತಯಾರಿಸಲಾಗಿದೆ ಉರವಲವಾಗಿ,ಹೋಮಹವನಕ್ಕೆ ಇವನ್ನು ಉಪಯೋಗಿಸಬಹುದಾಗಿದೆ ಇದನ್ನು ಶ್ರೀಗಳಿಗೆ ಸಮರ್ಪಣೆ ಮಾಡಲಾಗುವುದು ಎಂದು ಮಾತೃತ್ವಮ್ ಸಂಸ್ಥೆಯ ಮುಖ್ಯಸ್ಥೆ ವೀಣಾ ಭಟ್ಟ ಹೇಳಿದರು.
——

About the author

Adyot

Leave a Comment