ಶಿರಸಿಯಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ

ಶಿರಸಿ : ತೋಟಗಾರಿಕಾ ಇಲಾಖೆ ಉತ್ತರ ಕನ್ನಡ, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶಿರಸಿಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯುತ್ತಿರೋ ಫಲಪುಷ್ಪ ಪ್ರದರ್ಶನ ಹಾಗೂ ಕಿಸಾನ್ ಮೇಳದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ನೆರವೇರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವೆ, ರೈತರು ಯಾವುದಕ್ಕೂ ಕೈ ಒಡ್ಡದೇ ಇರೋ ರೀತಿಯಲ್ಲಿ, ಕಿಸಾನ್ ಸಮ್ಮಾನ್ ಯೋಜನೆ ತಂದಿರೋದು ಶ್ಲಾಘನೀಯ. ರೈತರಿಗೆ ಅಂತಾನೇ ವಿಶೇಷ ಬಜೆಟ್ ಕೂಡ ಘೋಷಣೆ ಮಾಡ್ತಿದ್ದಾರೆ. ರೈತರು ಬೆಳೆದ ಬೆಳೆಗೆ ದ್ವಿಗುಣ ಆದಾಯ ಬರುವಂತಹ ಯೋಜನೆಗಳನ್ನ ಘೋಷಿಸಲಾಗ್ತಿದೆ. ಸಾವಯವ ಕೃಷಿಯ ಅವಶ್ಯಕತೆ ಇಂದಿನ ದಿನಗಳಲ್ಲಿ ಪ್ರಾಮುಖ್ಯವಾಗಿವೆ. ರಾಸಾಯನಿಕ ಹಾಕಿ ಬೆಳೆಸಿದ ತರಕಾರಿಗಳನ್ನು ಸೇವಿಸಿ ಜನರ ಆರೋಗ್ಯ ಹಾಳಾಗುತ್ತಿದೆ. ತೋಟಗಾರಿಕಾ ಇಲಾಖೆಯ ಈ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇಂದಿನಿಂದ ಪ್ರಾರಂಭವಾಗಿ 3 ದಿನಗಳ ಕಾಲ ನಡೆಯೋ ಈ ಫಲ ಪುಷ್ಪ ಪ್ರದರ್ಶನ ಸೋಮವಾರ ಮುಕ್ತಾಯಗೊಳ್ಳಲಿದೆ. ಪ್ರತಿವರ್ಷ ನಡೆಯುತ್ತಿರೋ ಫಲ ಪುಷ್ಪ ಪ್ರದರ್ಶನದಲ್ಲಿ ವರ್ಷವೂ ವಿಶೇಷವಾದ ಮಾದರಿಯ ಪುಷ್ಪಗಳಿಂದ ಮಾಡಲ್ಪಟ್ಟ ಆಕೃತಿಗಳು ಗಮನ ಸೆಳೆಯುತ್ತವೆ. ಈ ವರ್ಷ ಕಮಲ್ ಮಹಲ್ ಹಾಗೂ ಪೇಜಾವರ ಶ್ರೀಗಳಿಗೆ ಶೃದ್ಧಾಂಜಲಿ ಎನ್ನುವ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ. ಇನ್ನೂ ಹಲವಾರು ಕಲಾಕೃತಿಗಳು ಪುಷ್ಪಗಳಿಂದ ನಿರ್ಮಿತವಾಗಿದ್ದು ತೋಟದ ಬೆಳೆಗಳ ಪ್ರದರ್ಶನ ಕೂಡ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಎನ್. ಡಬ್ಲ್ಯೂ.ಕೆ.ಆರ್.ಟಿ.ಸಿ ಅಧ್ಯಕ್ಷ ವಿ.ಎಸ್ ಪಾಟೀಲ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.

About the author

Adyot

1 Comment

Leave a Comment