ಮುಖ್ಯಮಂತ್ರಿಗಳು ಕೊಡುವ ಖಾತೆ ನನ್ನ ಪಾಲಿಗೆ ಪ್ರಸಾದ : ಹೆಬ್ಬಾರ್

ಶಿರಸಿ : ಮುಖ್ಯಮಂತ್ರಿಗಳು ಯಾವ ಖಾತೆಯನ್ನು ಕೊಟ್ರು ಪ್ರಸಾದ ಎಂದು ಸ್ವೀಕರಿಸುತ್ತೇನೆ ಅಂತ ನೂತನ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.


ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಚಿವ ಹೆಬ್ಬಾರ್ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ. ಸಿದ್ದರಾಮಯ್ಯನವರು ಘನತೆಗೆ ತಕ್ಕ ಮಾತನ್ನು ಆಡಿದ್ರೆ ಒಳ್ಳೇದು. ಘನತೆ ಮೀರಿ ಮಾತನಾಡಿದ್ರೆ ಅವರ ಗೌರವಕ್ಕೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯನ ಭಾಷೆಲಿ ಉತ್ತರ ಕೊಡಲು ನಮಗೂ ಬರುತ್ತೆ ಆದ್ರೆ ನಾವೆಲ್ಲರೂ ಬಹಳ ತಾಳ್ಮೆಯಿಂದ ಶಬ್ದ ಬಳಸುತ್ತಾ ಇದ್ದೀವಿ. ನಮಗೆ ಯಾರ ಭಯವೂ ಇಲ್ಲ. ಸಿದ್ದರಾಮಯ್ಯನವರನ್ನು ಸಮಾಧಾನ ಪಡಿಸುವ ಅವಶ್ಯಕತೆ, ಅನಿವಾರ್ಯತೆ ನಮಗಿಲ್ಲ. ಅವರು ಘನತೆಗೆ ತಕ್ಕ ಮಾತನಾಡಿದ್ರೆ ಅವರಿಗೂ ಒಳ್ಳೆಯದು, ಅವರ ಆರೋಗ್ಯಕ್ಕೂ ಒಳ್ಳೆಯದು ಅಂತ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

About the author

Adyot

1 Comment

Leave a Comment