ಗಮನ ಸೆಳೆದ ಅತ್ಯಾಕರ್ಷಕ ಕದಂಬೋತ್ಸವ ಮೆರವಣಿಗೆ

ಬನವಾಸಿ : ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವಂತಹ ಕದಂಬೋತ್ಸವ ಮೆರವಣಿಗೆಯನ್ನು ಕುಂಭ ಹೊರುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.


ಶಾಲಾ ವಿದ್ಯಾರ್ಥಿಗಳಿಂದ ಕುಂಭ ಮೇಳ ಹಾಗೂ ಪಥಸಂಚಲನ ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರದೊಂದಿಗೆ ಆಕರ್ಷಕ ಪಥ ಸಂಚಲನ, ಅತ್ಯಾಕರ್ಷಕ ವಾದ್ಯ ತಂಡಗಳೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದ ಮುಖ್ಯ ದ್ವಾರದಿಂದ ಪ್ರಾರಂಭಗೊಂಡು ಮಾರಿಹೊಕ್ಕಲು ಮೈದಾನದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಹಳಿಯಾಳ ತಂಡದಿಂದ ಸಿದ್ದರ ಕುಣಿತ, ಯಲ್ಲಾಪುರ ತಂಡದಿಂದ ಗೌಳಿ ನೃತ್ಯ, ಶಿರಸಿ ತಂಡದ ಬೇಡರ ನೃತ್ಯ ಸಿದ್ದಾಪುರ ತಂಡದ ವೀರಗಾಸೆ ದಾಂಡೇಲಿಯ ಲಮಾಣಿ ನೃತ್ಯ, ಹೊನ್ನಾವರದ ಹಗಣ ನೃತ್ಯ, ಗದಗ ಜಿಲ್ಲೆಯ ಜಾನಪದ ಕಲಾಮೇಳ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.

About the author

Adyot

Leave a Comment