ಸಿದ್ದಾಪುರ : ಸ್ಪೀಕರ್ ಕಾಗೇರಿಗೆ ಬಿಜೆಪಿ ಕಾರ್ಯಕರ್ತರಿಂದಲೇ ಅಸಮಾಧಾನದ ಬಿಸಿ ತಟ್ಟಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರದ ಸಾಯಿ ನಗರದಲ್ಲಿ ನಡೆದ ಸಿಮೆಂಟ್ ರಸ್ತೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡರು. ಕಾರ್ಯಕ್ರಮ ಮುಗಿಸಿ ಹೋರಾಟ ಕ್ಷೇತ್ರದ ಶಾಸಕ ಹಾಗೂ ಸ್ಪೀಕರ್ ಅಸಮಾಧಾನದ ಬಿಸಿಯನ್ನು ಅನುಭವಿಸುವಂತಾಯಿತು. ಸಂಘಟನೆಯಿಂದ ಸ್ಪೀಕರ್ ದೂರ ಸರಿಯುತ್ತಿದ್ದಾರೆ. ಪಕ್ಷದಲ್ಲಿ ನಿಷ್ಠೆಯಿಂದ ದುಡಿದವರಿಗೆ ಬೆಲೆ ಇಲ್ಲ. ಅಭಿವೃದ್ಧಿ ಕೆಲಸದಲ್ಲಿ ಕ್ಷೇತ್ರದಿಂದ ಕ್ಷೇತ್ರಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಬೇರೆ ಪಕ್ಷಕ್ಕಾಗಿ ದುಡಿದವರ ಕ್ಷೇತ್ರಗಳಿಗೆ ಅಪಾರ ಅನುದಾನ ಬಿಡುಗಡೆಯಾಗುತ್ತಿದೆ. ಪಕ್ಷಕ್ಕೆ ದುಡಿದವರ ಮೇಲೆ ಶಾಸಕರು ಆರೋಪ ಹೊರಿಸುತ್ತಿದ್ದಾರೆ ಅನ್ನೋ ಆರೋಪ ಬಿಜೆಪಿ ಕಾರ್ಯಕರ್ತರಿಂದ ಕೇಳಿ ಬಂದಿದೆ.
ಕಾರ್ಯಕರ್ತರ ಮಾತಿಗೆ ಸಿಟ್ಟಾದ ಸ್ಪೀಕರ್ ಕಾಗೇರಿ, ಇನ್ನೊಂದು ದಿನ ಟೈಮ್ ಕೊಡ್ತೀನಿ, ಮಾತನಾಡೋಣ ಅಂತ ಕಾರ್ ಏರಿ ಹೊರಟು ಹೋಗಿದ್ದಾರೆ.