ಆದ್ಯೋತ್ ನ್ಯೂಸ್ ಡೆಸ್ಕ್ : ಆಹಾರ ಅರಸಿ ನಾಡಿಗೆ ಬಂದ ನಾಗರಹಾವನ್ನು ಸೆರೆ ಹಿಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಿಚ್ಕಡ ದಲ್ಲಿ ನಡೆದಿದೆ.
ಶಿರಸಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ರ ಮನೆಯ ಸಮೀಪ ಸುಮಾರು 7 ಫೀಟ್ ಉದ್ಧವಿರೋ ಭಾರೀ ಗಾತ್ರದ ಗೋಧಿ ನಾಗರಹಾವು ಆಹಾರವನ್ನು ಅರಸಿ ಬಂದಿತ್ತು. ಇದನ್ನು ನೋಡಿದ ಸ್ಥಳೀಯರು ಅಂಕೋಲಾ ಅವರ್ಸಾದ ಉರಗತಜ್ಞ ಸ್ನೇಕ್ ಮಹೇಶ್ ನಾಯಕ್ ಅವರಿಗೆ ತಿಳಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಮಹೇಶ್ ನಾಯಕ್ ಭಾರೀ ಗಾತ್ರದ ಉರಗವನ್ನು ರಕ್ಷಣೆ ಮಾಡಿದರು. ನಂತರ ನಾಗರಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು. ನಾಗರಹಾವನ್ನು ನೋಡಲು ಜನಸಮೂಹವೇ ಸೇರಿತ್ತು.