ಆಡಳಿತದ ಕಂಟ್ರೋಲ್ ಗೆ ಬರುತ್ತಿರುವ ಜಿಲ್ಲೆ

ಆದ್ಯೋತ್ ನ್ಯೂಸ್ ಡೆಸ್ಕ್: ಕಳೆದ ಆರು ದಿನದ ಹಿಂದೆ ಪ್ರದಾನಿ ನರೇಂದ್ರ ಮೋದಿ ಕೊರೊನಾ ತಡೆಗಟ್ಟುವುದಕ್ಕಾಗಿ ಈಡಿ ದೇಶವನ್ನು ಲಾಕ್ ಡೌನ್ ಮಾಡಿ ಘೋಷಣೆ ಮಾಡಿದಾಗ, ದೇಶದ ಜನರಂತೆ ಜಿಲ್ಲೆಯ ಜನರು ಹೌಹಾರಿದ್ದರು. ಲಾಕ್ ಡೌನ್ ಎಷ್ಟು ದಿನ ಇರುತ್ತದೆಯೊ ಎಂದು ಆತಂಕಕ್ಕೆ ಒಳಗಾಗಿ ಸಿಕ್ಕಷ್ಟು ಸಾಮಾನು ಖರೀದಿಸಲು ಮುಂದಾದರು. ಜೊತೆಗೆ ಯುಗಾದಿ ಹಬ್ಬ ಬಂದಿದ್ದರಿಂದ ಭರ್ಜರಿಯಾಗಿಯೇ ತಯಾರಿ ಮಾಡತೊಡಗಿದರು. ಜನರನ್ನು ತಡೆಯಲು ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯವರು ಸಾಕಷ್ಟು ಪ್ರಯತ್ನ ಪಡತೊಡಗಿದರು. ಇದೇ ಸಮಯದಲ್ಲಿ ಭಟ್ಕಳದಲ್ಲಿ ಎರಡು ಕೊರೊನಾ ಪೊಸಿಟಿವ್ ಪ್ರಕರಣ ಬೆಳಕಿಗೆ ಬಂದ ಕಾರಣ ಜಿಲ್ಲಾಡಳಿತದ ಗಮನ ಭಟ್ಕಳದ ಕಡೆಗೆ ಕೇಂದ್ರೀಕೃತವಾಯಿತು.


ಇದರಿಂದ ತಾಲೂಕು ಮಟ್ಟದಲ್ಲಿ ಜನರನ್ನು ತಡೆಹಿಡಿಯುವವರು ಇಲ್ಲವಾಯಿತು. ಇದರ ಜೊತೆಗೆ ಸರಕಾರದ ಎಡವಟ್ಟಿನಿಂದ ಬೆಂಗಳೂರು ಬಾಗಿಲು ತೆರೆದ ಕಾರಣ ಸಾವಿರಾರು ಜನರು ಜಿಲ್ಲೆಗೆ ಹರಿದು ಬಂದರು. ಇದರಿಂದ ತಾಲೂಕು ಆಡಳಿತ ಕಂಗಾಲಾಯಿತು. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಂಡು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ತೆಗೆದುಕೊಳ್ಳಲು ಮುಂದಾದರು. ಜಿಲ್ಲೆಯ ಗಡಿಯಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಯಿತು. ಅನವಶ್ಯಕ ಓಡಾಡುವವರ ಮೇಲೆ ಪೊಲೀಸ್ ಸಿಬ್ಬಂದಿಗಳು ಲಾಠಿ ಬೀಸುವ ಮೂಲಕ ಬಂದ್ ಮಾಡಿಸಿದರು. ದಿನಸಿ, ತರಕಾರಿ ತೆಗೆದುಕೊಳ್ಳಲು ಸಮಯ ನಿಗದಿಪಡಿಸಿದ್ದರಿಂದ ಆ ಸಮಯದಲ್ಲಿ ಒಂದೇ ಬಾರಿ ಜನರು ಬರತೊಡಗಿದರು. ಇದೆಲ್ಲವನ್ನು ಪರಿಶೀಲಿಸಿ ದಿನಸಿ ಹಾಗೂ ತರಕಾರಿಗಳನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಲಾಕ್ ಡೌನ್ ಘೋಷಣೆಯಾದ ಆರು ದಿನಗಳ ನಂತರ ಜಿಲ್ಲಾಡಳಿತಕ್ಕೆ ಜಿಲ್ಲೆಯ ಹಿಡಿತ ಸಿಕ್ಕಿದೆ. ಕಣ್ಣುತಪ್ಪಿಸಿ ಒಂದಿಷ್ಟು ಜನರು ಓಡಾಡುತ್ತಿದ್ದರೂ ಹೆಚ್ಚಿನ ಜನ ನಿಶ್ವಿಂತೆಯಿಂದ ಮನೆಯಲ್ಲೆ ಲಾಕ್ ಡೌನ್ ಆಗಿದ್ದಾರೆ.


ವಿದೇಶದಿಂದ ಬಂದವರ ಮೇಲೆ ನಿಗಾ ಇಡುವುದರ ಜೊತೆಗೆ
ದೇಶದ ಬೇರೆ ಬೇರೆ ಭಾಗದಿಂದ ಬಂದವರ ಮೇಲೂ ಗಮನ ಇಡಲಾಗುತ್ತಿದೆ. ಮನೆಮನೆಗೆ ತೆರಳಿ ಜ್ವರ ಬಂದವರ ಸಮೀಕ್ಷೆ
ಕಾರ್ಯ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇಲೆ ಪ್ರಾರಂಭವಾಗಿದೆ. ಕೊವಿಡ್-19 ರೋಗಪೀಡಿತರಿಗೆ ಚಿಕಿತ್ಸೆ ನೀಡಲು ಸೌಲಭ್ಯ ಕಲ್ಪಿಸಲಾಗಿದೆ. 7 ಕೊರೊನಾ ಕೇಸ್ ನ್ನು ಹ್ಯಾಂಡಲ್ ಮಾಡುತ್ತ ಈಡೀ ಜಿಲ್ಲೆಯನ್ನು ಲಾಕ್ ಡೌನ್ ಮಾಡುವಲ್ಲಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಹಾಗೂ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಎಂ.ರೋಶನ್ ಅವರ ಶ್ರಮ ಎದ್ದು ಕಾಣುತ್ತದೆ.

About the author

Adyot

Leave a Comment