ಜನರು ಮನೆಗಳಿಂದ ಹೊರ ಬಾರದಂತೆ ಪೊಲೀಸರ ವಿಶಿಷ್ಟ ಪ್ರಯತ್ನ

ಆದ್ಯೋತ್ ನ್ಯೂಸ್ ಡೆಸ್ಕ್ : ದೇಶದೆಲ್ಲೆಡೆ ಕೊರೊನಾ ಅಬ್ಬರ ಹೆಚ್ಚುತ್ತಿದೆ. ಕೊರೊನಾ ಕರ್ಫ್ಯೂ ವಿಧಿಸಿದ್ದರೂ ಕೂಡ ಹಲವಾರು ಜನರು ಮನೆಗಳಿಂದ ಹೊರಬಂದು ಕರ್ಫ್ಯೂ ಉಲ್ಲಂಘಿಸುತ್ತಿದ್ದಾರೆ. ಜನರನ್ನ ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ರೂ ಜನ ಸುಮ್ಮನೆ ತಿರುಗಾಡುತ್ತಿದ್ದಾರೆ. ಇದನ್ನು ತಡೆಯೋಕೆ ಜಿಲ್ಲೆಯಲ್ಲಿ ವಿಭಿನ್ನ ಪ್ರಯತ್ನಗಳನ್ನ ಪೊಲೀಸರು ಮುಂದುವರೆಸಿದ್ದಾರೆ.


ಜಿಲ್ಲೆಯ ಶಿರಸಿಯಲ್ಲಿ ಪೊಲೀಸರು ನಿಯಮ ಉಲ್ಲಂಘಿಸಿ ಹೊರಬಂದ ಜನರಿಗೆ ಫಲಕ ಕೊಟ್ಟು ಫೋಟೋ ತೆಗೆಸಿದ್ದಾರೆ. “ಕ್ಷಮಿಸಿ, ನಾನು ಕೊರೊನಾ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದ್ದೇನೆ.” ಅನ್ನೋ ನಾಮಫಲಕವನ್ನು ಹಿಡಿಸಿ ಅವರ ಫೋಟೋ ತೆಗೆಯಲಾಗುತ್ತಿದೆ. ಶಿರಸಿಯ 6 ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮರಾ ಹಾರಿಬಿಡಲಾಗಿದ್ದು, ಚಲನವಲನವನ್ನ ವೀಕ್ಷಣೆ ನಡೆಸುತ್ತಿದ್ದಾರೆ. ಕೋಟೆಕೆರೆಯಲ್ಲಿ ಆಡುತ್ತಿದ್ದ 20 ಜನ ಯುವಕರನ್ನು ಡ್ರೋಣ್ ಮೂಲಕ ವೀಕ್ಷಿಸಿ ಅವರನ್ನ ಓಡಿಸಲಾಗಿದೆ. ಅದೇ ರೀತಿ ಕಾರವಾರದಲ್ಲೂ ಸಂಚಾರಿ ಪೊಲೀಸರು ವಿಭಿನ್ನ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾರೆ. “ಮನೆಯಿಂದ ಹೊರಗಡೆ ಬಾರದಿರಿ”, “ಕೊರೊನಾ ನಿಯಮ ಉಲ್ಲಂಘನೆ ಬೇಡ” ಮುಂತಾದ ಫಲಕಗಳನ್ನು ಹಿಡಿದು ಕಾರವಾರ ನಗರ ವ್ಯಾಪ್ತಿಯಲ್ಲಿ ಸಂಚಾರ ನಡೆಸಿ ಜನರಿಗೆ ಅರಿವನ್ನು ಮೂಡಿಸೋ ಪ್ರಯತ್ನವನ್ನ ನಡೆಸಿದ್ದಾರೆ.


ಒಟ್ಟಿನಲ್ಲಿ ಕೊರೊನಾ ಕರ್ಫ್ಯೂ ನಿಯಮಗಳನ್ನ ಸರಿಯಾಗಿ ಪಾಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟಗಳನ್ನ ಎದುರಿಸಬೇಕಾಗುತ್ತೆ.

ಮನೆಯಲ್ಲೇ ಇರೋಣ..
ಕೊರೊನಾ ತೊಲಗಿಸೋಣ..
ದೇಶವನ್ನು ಉಳಿಸೋಣ..
ಇದು ಆದ್ಯೋತ್ ನ್ಯೂಸ್ ಜಾಗೃತಿ ಅಭಿಯಾನ.

About the author

Adyot

1 Comment

  • ನಿಜವಾಗಿಯೂ ನಮ್ಮ ಹೆಮ್ಮೆಯ ಪೋಲಿಸರ ಕಾರ್ಯ ಮೆಚ್ಚಲೇಬೇಕು. ಅಭಿನಂದನೆಗಳು ಅವರಿಗೆಲ್ಲ. 🙏🙏

Leave a Comment