ಆದ್ಯೋತ್ ನ್ಯೂಸ್ ಡೆಸ್ಕ್ : ದೇಶದೆಲ್ಲೆಡೆ ಕರೋನಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಂತ ಸರ್ಕಾರಗಳು ಹೇಳುತ್ತಲೇ ಇವೆ. ಆದ್ರೂ ಕೂಡ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನೇಕರು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ನಿಯಮವನ್ನು ಉಲ್ಲಂಘಿಸಿ ನಮಾಜ್ ಮಾಡುತ್ತಿದ್ದವರ ಮೇಲೆ ಇಂದೂ ಸಹ ಕೇಸ್ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಹುನಗುಂದ ಹಾಗೂ ವೀರಾಪುರ ಗ್ರಾಮದ ಮಸೀದಿಗಳಲ್ಲಿ ಕೊರೊನಾ ಕರ್ಫ್ಯೂ ನಿಯಮಗಳನ್ನ ಉಲ್ಲಂಘಿಸಿ ಸೊಷ್ಯಲ್ ಡಿಸ್ಟನ್ಸ್ ಕೂಡ ಕಾಪಾಡಿಕೊಳ್ಳದೇ ನಮಾಜ್ ಮಾಡುತ್ತಿದ್ದರು. ಇದೇ ವೇಳೆ ಅಲ್ಲಿಗೆ ತೆರಳಿದ ಮುಂಡಗೋಡು ಠಾಣೆ ಪೊಲೀಸರು 2 ಮಸೀದಿಗಳಿಂದ 15 ಜನರನ್ನ ವಶಪಡಿಸಿಕೊಂಡು ಅವರ ಮೇಲೆ ಕೇಸ್ ದಾಖಲಿಸಿದ್ದಾರೆ. ಈ ವೇಳೆ ಮೂವರು ಓಡಿಹೋಗಲು ಯತ್ನಿಸಿದ್ದರು. ಮಸೀದಿಗಳಲ್ಲಿ ನಮಾಜ್ ಮಾಡದೇ ಮನೆಯಲ್ಲೇ ಮಾಡಿ ಎಂದು ಇಂದು ಹಲವಾರು ಮುಸಲ್ಮಾನ ಮುಖಂಡರು ಕರೆಯನ್ನು ಕೂಡ ಕೊಟ್ಟಿದ್ದರು. ನಿನ್ನೆ ಹಳಿಯಾಳದಲ್ಲಿ ಕೂಡ ಈ ಕುರಿತಂತೆ 2 ಪ್ರತ್ಯೇಕ ಪ್ರಕರಣ ದಾಖಲಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.
,👌👍👍👌