ಕೊರೊನಾ ಮಹಾಮಾರಿಗಾಗಿ ದೇಶದೆಲ್ಲೆಡೆ ದೀಪೋತ್ಸವ

ಆದ್ಯೋತ್ ನ್ಯೂಸ್ ಡೆಸ್ಕ್ : ಕೊರೊನಾ ಮಹಾಮಾರಿಯನ್ನು ತೊಲಗಿಸಲು ದೇಶದ ಏಕತೆಯ ಸರ್ವದರ್ಶನಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಕೊಟ್ಟಿದ್ದ ದೀಪೋತ್ಸವಕ್ಕೆ ದೇಶದೆಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.


ಇಂದು ರಾತ್ರಿ 9 ಗಂಟೆಯಿಂದ 9 ನಿಮಿಷಗಳವರೆಗೆ ವಿದ್ಯುತ್ ದೀಪವನ್ನ ಆರಿಸಿ, ದೀಪ, ಹಣತೆ, ಟಾರ್ಚ್ ಗಳನ್ನ ಬೆಳಗಿಸೋಣ ಅನ್ನುವ ಮೋದಿಯವರ ಸಂದೇಶದಂತೆ ಜನರು ವಿದ್ಯುತ್ ದೀಪಗಳನ್ನ ಆರಿಸಿ, ದೀಪಗಳನ್ನ ಬೆಳಗಿಸುವುದರ ಮೂಲಕ ಕೊರೊನಾ ನಿರ್ಮೂಲನಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎನ್ನುವ ಸಂದೇಶವನ್ನ ವಿಶ್ವಕ್ಕೆ ತೋರಿಸಿಕೊಟ್ಟರು. ದೇಶದೆಲ್ಲೆಡೆ ಮಕ್ಕಳು, ವೃದ್ಧರು, ಯುವಕ ಯುವತಿಯರು ಸೇರಿದಂತೆ ಎಲ್ಲರೂ ದೀಪಗಳನ್ನ ಬೆಳಗಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪೊಲೀಸ್ ಠಾಣೆಯಲ್ಲೂ ಕೂಡ ದೀಪಗಳು ಪ್ರಜ್ವಲಿಸಿದವು.

About the author

Adyot

Leave a Comment