ಆದ್ಯೋತ ಲೊಕಲ್ ನ್ಯೂಸ್

ಆದ್ಯೋತನ್ಯೂಸ್: ಉತ್ತರಕನ್ನಡ ಜಿಲ್ಲೆಯ ಬೇಡ್ಕಣಿ ಗ್ರಾಮದ ಬಡಕೂಲಿಕಾರ್ಮಿಕರಿಗೆ ರವಿವಾರ ಉಚಿತವಾಗಿ ಹಾಲನ್ನು ವಿತರಿಸಲಾಯಿತು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ, ತಹಸೀಲ್ದಾರ ಮಂಜುಳಾ ಭಜಂತ್ರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುಮಾರ ನಾಯ್ಕ ಉಪಸ್ಥಿತರಿದ್ದರು.

ಎಲ್ಲೆಲ್ಲಿ ಹಾಲಿನಿಂದ ಬಡಕೂಲಿಕಾರ್ಮಿಕರು ವಂಚಿತರಾಗುತ್ತಿದ್ದಾರೋ ಅವರನ್ನು ಗುರುತಿಸಿ ಹಾಲನ್ನು ಉಚಿತವಾಗಿ ಹಂಚುವ ಕೆಲಸವನ್ನು ಸರಕಾರ ಕೆ.ಎಂ.ಎಫ್ ಮುಖಾಂತರ ರಾಜ್ಯಾದ್ಯಂತ ಮಾಡುತ್ತಿದೆ. ಅದೇ ರೀತಿ ಕಳೆದ ಎರಡು-ಮೂರು ದಿನದಿಂದ ಸಿದ್ದಾಪುರದ ಹಲವು ಭಾಗದಲ್ಲಿ ಹಾಲನ್ನು ಹಂಚಲಾಗುತ್ತಿದೆ.

ಕೊರೊನಾ ವೈರಸ್ ತಡೆಗಟ್ಟುವುದಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ಕಾರ್ಯದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಹಣ್ಣು, ನೀರು ಹಾಗೂ ತಂಪುಪಾನೀಯವಿರುವ ಕಿಟ್ ವಿತರಿಸಲಾಯಿತು‌.

ಸಿದ್ದಾಪುರ ತಾಲೂಕು ಪಂಚಾಯತ್ ಸಭಾಭವನದಲ್ಲಿ ರವಿವಾರ ಬಾಬುಜಗಜೀವನರಾಮ್ ಜನ್ಮದಿನಾಚರಣೆ ಆಚರಿಸಲಾಯಿತು.
ತಹಸೀಲ್ದಾರ ಮಂಜುಳಾ ಭಜಂತ್ರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುಮಾರ ನಾಯ್ಕ, ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್.ಗೌಡರ್, ಪಪಂ ಸದಸ್ಯ ನಂದನ ಬೋರ್ಕರ್ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment