ಲೋಕಲ್ ಸುದ್ದಿಗಳು

ಆದ್ಯೋತ್ ನ್ಯೂಸ್ ಡೆಸ್ಕ್ :
ಸಿದ್ದಾಪುರ : ದೇಶವನ್ನು ಸಂಕಷ್ಟಕ್ಕೆ ದೂಡಿರುವ COVID 19 ಸೋಂಕಿನ ಕುರಿತಂತೆ ದೇಶದ ಹೋರಾಟಕ್ಕೆ ಕೈಜೋಡಿಸಿರುವ ಡಾ. ಶಶಿಭೂಷಣ ಹೆಗಡೆ ಅವರು ವೈಯಕ್ತಿಕವಾಗಿ ಪ್ರಧಾನ ಮಂತ್ರಿ ಕೇರ್ ನಿಧಿಗೆ ಎರಡು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.


ಇದೇ ಸಂದರ್ಭದಲ್ಲಿ ಜಿಲ್ಲೆಯ ಏಕೈಕ ಆಯುರ್ವೇದ ಮಹಾವಿದ್ಯಾಲಯ ಸಿದ್ದಾಪುರದ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯನ್ನು COVID 19 ಎದುರಿಸಲು Master Training center ಎಂದು ಗುರುತಿಸಿ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು ಕರೊನ ಸಾಂಕ್ರಾಮಿಕ ರೋಗವನ್ನು ಎದುರಿಸಲು ಆಸ್ಪತ್ರೆ, ಸಿಬ್ಬಂದಿಗಳನ್ನು ಬಳಸಿಕೊಳ್ಳುವಂತೆ ಸರ್ಕಾರಕ್ಕೆ ತಿಳಿಸಿದ್ದಾರೆ. ಈ ವಿಷಮ ಸಂದರ್ಭದಲ್ಲಿ ಜನತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರದೊಂದಿಗೆ ಸಹಕರಿಸುವಂತೆ ಶಶಿಭೂಷಣ್ ಹೆಗಡೆ ವಿನಂತಿಸಿದ್ದಾರೆ.

ಸಿದ್ದಾಪುರ : ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರೋ ಬಡವರಿಗೆ ಸೊರಬಾದ ಸುರಭಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಿದ್ದಾಪುರದಲ್ಲಿ ಫುಡ್ ಕಿಟ್ ವಿತರಿಸಲಾಯಿತು. ಜಿಲ್ಲೆಯಲ್ಲಿ ಈಗಾಗಲೇ 60 ಜನರಿಗೆ ಫುಡ್ ಕಿಟ್ ವಿತರಿಸಿರುವ ಟ್ರಸ್ಟ್ ಇದೀಗ ತಾಲೂಕಿನ 35 ಜನರಿಗೆ ಫುಡ್ ಕಿಟ್ ವಿತರಣೆ ಮಾಡಿದೆ. ಕಿಟ್ ನಲ್ಲಿ ಅಕ್ಕಿ, ತೊಗರಿಬೇಳೆ, ಎಣ್ಣೆ, ಖಾರದಪುಡಿ, ಸೋಪ್ ಸೇರಿದಂತೆ ಅವಶ್ಯಕ ವಸ್ತುಗಳಿದ್ದು, ಸಾಂಕೇತಿಕವಾಗಿ ತಹಸೀಲ್ದಾರ್ ಮೂಲಕ 8 ಕುಟುಂಬಗಳಿಗೆ ವಿತರಿಸಿ ನಂತರ ಮನೆ ಮನೆಗೆ ತೆರಳಿ ವಿತರಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಹಾಜರಿದ್ದರು.

ಶಿರಸಿ : ಶಿರಸಿ ಹೊಸ ಮಾರುಕಟ್ಟೆ ಠಾಣಾ ವ್ಯಾಪ್ತಿಯ ಸಹ್ಯಾದ್ರಿ ತಗ್ಗು, ಸುಭಾಷನಗರದ ಸುತ್ತಲಿನ ಸಂಕಷ್ಟದಲ್ಲಿರುವ ಸುಮಾರು 35ಕ್ಕೂ ಹೆಚ್ಚು ಕೂಲಿಕಾರ್ಮಿಕ ಕಡುಬಡವ ಕುಟುಂಬಗಳಿಗೆ ಅಶೋಕ ಯಾತಗಿರಿ ಮತ್ತು ಸಮಾಜದ ಇತರ ಮುಖಂಡರ ಸಹಕಾರದಿಂದ ಅಕ್ಕಿ, ಬೇಳೆ, ಎಣ್ಣೆ, ಇತರೆ ಅಗತ್ಯ ದಿನಸಿ ವಸ್ತುಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.


ಶಿರಸಿ ಉಪವಿಭಾಗದ ಡಿ.ಎಸ್.ಪಿ ಗೋಪಾಲಕೃಷ್ಣ ನಾಯಕರವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ಪ್ರದೀಪ ಬಿ.ಯು ರವರ ನೇತೃತ್ವದ ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ಮತ್ತು ಸಿಬ್ಬಂದಿಗಳು ಹಾಗೂ ಶಂಭು ಶೆಮಡಿ, ಬಂಗಾರಪ್ಪ ಜಾಬಿನ್, ಶಿವಾನಂದ ಯಾತಗಿರಿ, ಬಸವರಾಜ ಶೆಟ್ಟರ್ ಇತರರು ಭಾಗವಹಿಸಿದ್ದರು.

About the author

Adyot

Leave a Comment