ಆದ್ಯೋತ್ ಸುದ್ದಿನಿಧಿ:
ಲಾಕ್ ಡೌನ್ ಹಿನ್ನಲೆಯಲ್ಲಿ ಕೂಲಿಕಾರ್ಮಿಕರ ದುಡಿಮೆಯೇ ನಿಂತು ಹೋಗಿದೆ ಇಂತಹವರ ಹಸಿವು ನೀಗಿಸುವ ಪ್ರಯತ್ನವಾಗಿ
ತಾಪಂ ಸದಸ್ಯ ನಾಸೀರ್ ವಲ್ಲಿಖಾನ್ ಆದ್ಯೋತ್ ವೆಬ್ ನ್ಯೂಸ್ ಸಹಯೋಗದಲ್ಲಿ ಸಿದ್ದಾಪುರ ಪಟ್ಟಣದ ಹೊಸೂರು ಜನತಾಕಾಲೊನಿ ಭಾಗದಲ್ಲಿ ಅಕ್ಕಿ,ಬೇಳೆ,ಎಣ್ಣೆ ಸೇರಿದಂತೆ ದಿನನಿತ್ಯ ಬಳಕೆಯ ಸುಮಾರು 600ರೂ.ಮೌಲ್ಯದ ದಿನಸಿ ಕಿಟ್ ನ್ನು ಬುಧವಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಸೀರ್ ಖಾನ್,ಕೊರೊನಾ
ದಂತಹ ಮಾರಕ ಖಾಯಿಲೆಯಿಂದಾಗಿ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ.ಇಂತಹ ಜನರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಇನ್ನು ಒಂದೆರಡು ದಿನದಲ್ಲಿ ನೆಜ್ಜೂರು,ಕವಂಚೂರು,ಶಿರಳಗಿ ಭಾಗದಲ್ಲಿ ಆಹಾರಧಾನ್ಯದ ಕಿಟ್ ನ್ನು ನೀಡಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ಕೆ ಆಲ್ಮಾಸ್ ಖಾನ್ ನೆಜ್ಜೂರು ಇವರು ಸಹಕಾರ ನೀಡಿದರು.
ಉದ್ಯೋಗದ ನಿಮಿತ್ತ ನಮ್ಮ ನೆರೆಯ ರಾಜ್ಯವಾದ ಗೋವಾದಲ್ಲಿ
ಇರುವ ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ನ ದಿವಾಕರ ನಾಯ್ಕ
ಕೊರೊನಾ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ರಿಗೆ ಹಾಗೂ ಕೂಲಿಕಾರ್ಮಿಕರಿಗೆ ಚಹ ಮತ್ತು ಟೋಸ್ಟ ನೀಡುವ ಮೂಲಕ ಮಾನವೀಯತೆ ಮೆರೆದರು.
Good job.👌👍