ತುರ್ತು ಸ್ಪಂದನೆಗೆ ಉಸ್ತುವಾರಿ ಸಚಿವರಿಗೆ ಅಭಿನಂದನೆಗಳ ಮಹಾಪೂರ

ಆದ್ಯೋತ್ ಸುದ್ದಿ ನಿಧಿ : ಮಂಗನ ಖಾಯಿಲೆ ನಿಯಂತ್ರಣಕ್ಕೆ ಕ್ರಮ ಮತ್ತು ಕೊರೋನಾ ವಿರುದ್ಧದ ಹೋರಾಟದಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಿರುವುದಕ್ಕೆ ಉಸ್ತುವಾರಿ ಸಚಿವರಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಹೆಗಡೆ, “ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ ಅವರು ರಾಜ್ಯದ ಬಹುದೊಡ್ಡ ಕಾರ್ಮಿಕ ಸಮೂಹದ ನೆರವಿಗೆ ಧಾವಿಸಿದ್ದು, ಶ್ರಮಿಕರ ಬಾಳು ಕಷ್ಟದ ಕ್ಷಣಗಳಲ್ಲಿ ಈ ನೆರವಿನಿಂದ ನಿರಾಳವಾಗಿದೆ. ಸಿದ್ದಾಪುರದಲ್ಲಿ ಆತಂಕಕಾರೀ ಪ್ರಮಾಣದಲ್ಲಿ ಮಂಗನ ಖಾಯಿಲೆ ಪ್ರಕರಣಗಳು ಕಂಡುಬಂದಿದ್ದು, ರಕ್ತಪರೀಕ್ಷೆಗೆ ಇತರ ಜಿಲ್ಲೆಗಳನ್ನು ಅವಲಂಭಿಸಬೇಕಾಗಿತ್ತು, ತುರ್ತು ವೆಂಟಿಲೇಟರ್ ಆಂಬುಲೆನ್ಸ್ ಅವಶ್ಯಕತೆಯಿತ್ತು. ಇದನ್ನು ಮನಗಂಡು ಆಂಬುಲೆನ್ಸ್ ಹಾಗೂ ಜಿಲ್ಲಾಕೇಂದ್ರ ಕಾರವಾರದಲ್ಲಿ ರಕ್ತಪರೀಕ್ಷಾ ಕೇಂದ್ರ ತೆರೆಯಲು ಮುಂದಾಗಿರುವುದು ತುಂಬಾ ಒಳ್ಳೆಯ ನಿರ್ಧಾರ. ಇದರಿಂದ ರೋಗಪತ್ತೆ ಬೇಗನೆ ಆಗಲಿದ್ದು ಚಿಕಿತ್ಸೆ ಪ್ರಾರಂಭಿಸಲು ಅನುಕೂಲವಾಗಲಿದೆ. “ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ” ಯೋಜನೆಯಡಿ ಮಂಗನ ಖಾಯಿಲೆಯನ್ನು ಸೇರಿಸಿರುವುದರಿಂದ ರೋಗಕ್ಕೆ ತುತ್ತಾಗುವ ಕೃಷಿಕ ಹಾಗೂ ಕೃಷಿ ಕೂಲಿಕಾರರಿಗೆ ಚಿಕಿತ್ಸೆಯ ವೆಚ್ಚದ ಹೊರೆ ಕಡಿಮೆಯಾಗಲಿದೆ” ಎಂದಿದ್ದಾರೆ.


ಇನ್ನು ಸಿದ್ದಾಪುರ ಬಿಜೆಪಿ ತಾಲೂಕಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ನಾಗರಾಜ ನಾಯ್ಕ, “ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಹೆಬ್ಬಾರ್ ರು ಜಿಲ್ಲೆಯ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಮಂಗನಕಾಯಿಲೆ ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಿ, ಅದರಲ್ಲಿ ಬಂದ ನ್ಯೂನತೆಗಳ ವಿಚಾರಗಳ ಬಗ್ಗೆ ತ್ವರಿತವಾಗಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಜನರು ಸಂಕಷ್ಟದಲ್ಲಿದ್ದ ಸಮಯದಲ್ಲಿ ಇಂತಹ ಸ್ಪಂದನೆ ಸಿಕ್ಕಾಗ ಜನರಿಗೂ ಜನಪ್ರತಿನಿಧಿಗಳ ಮೇಲೆ ಗೌರವ ಹೆಚ್ಚಾಗುತ್ತದೆ. ಉಸ್ತುವಾರಿ ಸಚಿವರಿಗೆ ಜನರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದಿದ್ದಾರೆ.


ವಾಜಗೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, “ಕ್ಯಾದಗಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಳೊಂದಿಗೆ ಚರ್ಚಿಸುವ ಸಂದರ್ಭದಲ್ಲಿ ಸಾರ್ವಜನಿಕರು ಈ ಪ್ರದೇಶಕ್ಕೆ ಅನೂಕೂಲವಾಗಲು ಒಂದು ವೆಂಟಿಲೇಟರ್ ಹೊಂದಿರುವ ಆಂಬುಲೆನ್ಸ್ ಹಾಗೂ ಮಂಗನಕಾಯಿಲೆ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಚಿಕಿತ್ಸಾ ಪ್ಯಾಕೇಜ್ ಅಳವಡಿಸಿ ಪ್ರತ್ಯೇಕ ಸೌಲಭ್ಯಗಳ ಮಂಜೂರಿ ಕೋಡ್ ರಚಿಸುವಂತೆ ಸಚಿವರ ಬಳಿ ಮನವಿ ಮಾಡಿದರು. ಅಲ್ಲದೆ ದನಕರುಗಳಿಗೆ ಅವಶ್ಯಕವಾದ ಔಷದವನ್ನು ಖರೀದಿಸಲು ಏಳು ಪಂಚಾಯತಗಳಿಗೆ ಅವಶ್ಯ ಇರುವ ಅನುದಾನವನ್ನು ಜಿಲ್ಲಾಡಳಿತದಿಂ‍ದ ಮಂಜೂರಿಸಲು ವಿನಂತಿಸಿದರು ಈ ನಿಟ್ಟಿನಲ್ಲಿ ಮಾನ್ಯ ಸಚಿವರು ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ದರು. ಕೇವಲ ನಾಲ್ಕೇ ದಿನಗಳಲ್ಲಿ ಸಚಿವರಿಂದ ಸ್ಪಂದನೆ ವ್ಯಕ್ತವಾಗಿ ಮಂಜೂರಿ ಮಾಡಿಸಿದ್ದಾರೆ. ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ” ಎಂದಿದ್ದಾರೆ.

About the author

Adyot

1 Comment

Leave a Comment