ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರಿನಲ್ಲಿ ಹಲಸಿನ ಹಣ್ಣುಕೊಯ್ದ ವಿಚಾರದಲ್ಲಿ ಗಲಾಟೆ ನಡೆದು ವಸಂತ ಮಾಣಿ ಗೌಡ ಎನ್ನುವವರ ಮೇಲೆ ಗುಂಡಿನ ದಾಳಿ ನಡೆದಿದೆ.
ಅಡ್ಲೂರನ ಕಾಂಗ್ರೇಸ್ ಮುಖಂಡ ಗೋಪಾಲಕೃಷ್ಣ ರಾಮಚಂದ್ರ ನಾಯಕ, ಶ್ರೀನಿವಾಸ ರಾಮಚಂದ್ರ ನಾಯಕ ಅಗಸೂರು, ರಾಘವೇಂದ್ರ ನಾಯಕ ವಂದಿಗೆ, ಪ್ರವೀಣ ಕಟ್ಟಿಮನಿ ಶಿಗ್ಗಾಂವ ಆರೋಪಿಗಳಾಗಿದ್ದಾರೆ.
ಗೋಪಾಲಕೃಷ್ಣ ನಾಯಕ ಎನ್ನುವವರ ಕೆಲಸಗಾರರಾದ ಪ್ರವೀಣ ಕಟ್ಟಿಮನಿ ಹಾಗೂ ರಾಘವೇಂದ್ರ ನಾಯಕ, ವಸಂತ ಮಾಣಿ ಗೌಡರ ತೋಟದಲ್ಲಿ ಹಲಸಿನಹಣ್ಣು ಕೊಯ್ದಿದ್ದು ಇದನ್ನು ಪ್ರಶ್ನಿಸಿದ ವಸಂತ ಗೌಡರ ಮೇಲೆ ಆರೋಪಿ ಗೋಪಾಲಕೃಷ್ಣ ನಾಯಕ ತನ್ನ ಬಳಿ ಇದ್ದ ಪಿಸ್ತೂಲ್ ನಿಂದ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಅದು ತಾಗಿಲ್ಲ, ಆದರೆ ರಾಘವೇಂದ್ರ ನಾಯಕ ಹಾಗೂ ಪ್ರವೀಣ ಕಟ್ಟಿಮನಿ ವಸಂತ ಗೌಡರನ್ನು ಹಿಡಿದುಕೊಂಡಿದ್ದಾರೆ. ಈ ಸಮಯದಲ್ಲಿ ಆರೋಪಿ ಗೋಪಾಲಕೃಷ್ಣ ನಾಯಕ ಪಿಸ್ತೂಲ್ ಹಿಂಬದಿಯಿಂದ ಹೊಡೆದಿರುವುದಲ್ಲದೆ ಉಳಿದ ಮೂವರೂ ಹಲ್ಲೆ ನಡೆಸಿದ್ದಾರೆ.
ಸ್ಥಳೀಯರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರಮುಖ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಉಳಿದ ಇಬ್ಬರನ್ನು ಸ್ಥಳಿಯರು ಹಿಡಿದಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಪಿಐ ಕೃಷ್ಣಾನಂದ ಜಿ.ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ.
ಅಯ್ಯೋ ದೇವರೇ.