ಆದ್ಯೋತ್ ಸುದ್ದಿ ನಿಧಿ : ಕೃಷಿ ಸಚಿವ ಹಾಗೂ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಶಿರಸಿಯ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಿದ ಸಚಿವರು ಕೋವಿಡ್ 19 ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿತರಿಸಲಾದ ಬಿತ್ತನೆ ಬೀಜ ಹಾಗೂ ರಾಸಾಯನಿಕ ರಸಗೊಬ್ಬರಗಳ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಗೆ ಅಗತ್ಯವಿರುವ ಕೃಷಿ ಸಾಮಗ್ರಿಗಳು ಹಾಗೂ ರಸಗೊಬ್ಬರಗಳನ್ನು ಕೂಡಲೇ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಬಿತ್ತನೆ ಬೀಜಗಳ ಕೊರತೆಯಿದ್ದು, ಶೀಘ್ರವಾಗಿ ಅದನ್ನು ಪೂರೈಸುವ ಭರವಸೆ ನೀಡಿದ್ರು. ಜಿಲ್ಲೆಯ ಅಗತ್ಯತೆಗಳ ಬಗ್ಗೆ ಮಾತನಾಡಿದ ಉಸ್ತುವಾರಿ ಸಚಿವರು, ಬೆಳೆ ವಿಮೆಯ ಬಗ್ಗೆ ಒಂದು ಪಾರದರ್ಶಕವಾದ ನೀತಿಯ ಅಗತ್ಯತೆ ಇದೆ. ರೈತರಿಗೆ ಬೆಳೆ ವಿಮೆಯ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಕುರಿತು ಕ್ರಮಗಳನ್ನು ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ ಎಂದರು.
👍👌