ಆದ್ಯೋತ ಲೊಕಲ್ ನ್ಯೂಸ್

ಆದ್ಯೋತ್ ಸುದ್ದಿನಿಧಿ:
ಕೊರೊನಾ ಲಾಕ್ ಡೌನ್ ಪರಿಣಾಮ ಜನಜೀವನದ ಮೇಲೆ ಸಾಕಷ್ಟು ಆಗುತ್ತಿದೆ. ಹಲವರು ಹಲವು ರೀತಿಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಸಾಕಷ್ಟು ದಾನಿಗಳು ವಿವಿಧ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಸಿದ್ದಾಪುರ ತಾಲೂಕು ಪಂಚಾಯತ್ ಸದಸ್ಯ ನಾಸೀರ್ ವಲ್ಲಿಖಾನ್ ಈಗಾಗಲೇ ನೂರಾರು ಆಹಾರ ಧಾನ್ಯದ ಕಿಟ್ ಹಂಚಿದ್ದಾರೆ.ಶುಕ್ರವಾರ ಅವರು ಕವಂಚೂರು ಗ್ರಾಪಂ ಭಾಗದಲ್ಲಿ
ಟೊಮೋಟೊ,ಬದನೆಕಾಯಿ,ಈರುಳ್ಳಿ,ಆಲೂಗಡ್ಡೆ ಸೇರಿದಂತೆ ವಿವಿಧ ತರಕಾರಿಯುಳ್ಳ ನೂರಾರು ಕಿಟ್ ಹಂಚುವ ಮೂಲಕ ಜನರ ನೆರವಿಗೆ ನಿಂತಿದ್ದಾರೆ.

ಲಯನ್ಸ್ ಅಧ್ಯಕ್ಷ ಸಿ.ಎಸ್.ಗೌಡರ್ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಸೇರಿ ವಿವಿಧ ವೃತ್ತಿ ನಡೆಸುವವರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿದ್ದಲ್ಲದೆ ತಾಲೂಕಿನ 148 ಆಶಾಕಾರ್ಯಕರ್ತೆಯರಿಗೆ 300ರೂ. ಬೆಲೆಯ camel ಕಂಪನಿಯ ಛತ್ರಿಯನ್ನು ವಿತರಿಸಿದ್ದಾರೆ. ಅಲ್ಲದೆ ಲಯನ್ಸ್.ರಾಘವೇಂದ್ರ ಭಟ್ಟ ಜೊತೆಗೆ 7 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸ್ವತಃ ಛತ್ರಿಯನ್ನು ತಲುಪಿಸಿ ಬಂದಿದ್ದಾರೆ.


ರಣಧೀರ ಕರ್ನಾಟಕ ಪಡೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ನಾಯ್ಕ ಸ್ವತಃ 200ಕ್ಕೂ ಹೆಚ್ಚು ಮಾಸ್ಕ ತಯಾರಿಸಿ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಉಚಿತವಾಗಿ ಹಂಚಿದ್ದಾರೆ.
ಪ್ರಚಲಿತ ಹೆಸರಿನ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕ ಹತ್ತಾರು ಅನಾಥರಿಗೆ ಆಶ್ರಯವನ್ನು ನೀಡಿ ಅವರ ಸೇವೆಯನ್ನು ಮಾಡುತ್ತಿದ್ದಾರೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅವರ ಸೇವೆ ಹೀಗಿದೆ,
ಸಿದ್ದಾಪುರ ತಾಲೂಕಿನ ಮೇರಿ ಎನ್ನುವ ಮಹಿಳೆಯೊಬ್ಬರು ಬಳಸುತ್ತಿದ್ದ ಕ್ಯಾನ್ಸರ್ ಖಾಯಿಲೆಯ ಔಷಧಿ (Tablets) ಖರ್ಚಾಗಿದ್ದು ಅವರಿಗೆ ಔಷಧಿ ಮಾತ್ರೆಯ ಅವಶ್ಯಕತೆ ಇತ್ತು.
ಈ ಮಾತ್ರೆಯನ್ನು ಅವರು ಮಂಗಳೂರಿನ ಆಸ್ಪತ್ರೆಯಿಂದ ತರುತ್ತಿದ್ದರು ಈಗ ಲಾಕ್ ಡೌನ್ ನಿಮಿತ್ತ ತರಲು ಸಾಧ್ಯವಾಗುತ್ತಿಲ್ಲ ಎಂದು ಜನ ಸ್ನೇಹಿ ಪೋಲೀಸರು ಎನ್ನುವ ವಾಟ್ಸಪ್ ಗ್ರೂಪ್ ಒಂದರಲ್ಲಿ ಶೋಭಾ ನಾಯ್ಕ ಎನ್ನುವ ಆಶಾ ಕಾರ್ಯಕರ್ತೆಯವರು ಸಂದೇಶ ಹಂಚಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ನಾಗರಾಜ ನಾಯ್ಕವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಇದರ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾಗಿರುವ
ಕ್ಯಾ.ಮಣಿವಣ್ಣನ್ ನೇತೃತ್ವದಲ್ಲಿ ಹುಟ್ಟುಹಾಕಿರುವ ಕರೋನಾ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ನ ವಾರಿಯರ್ಸ್ ಮುಖ್ಯ ಸ್ವಯಂಸೇವಕಿ ಸಂಜುಕ್ತ ಮೆಡಮ್ ಮಾರ್ಗದರ್ಶನದಲ್ಲಿ ಔಷಧಿ (Tablets)ಗಳನ್ನು ತಂದು ಅದನ್ನು ಮೇರಿಯವರಿಗೆ ತಲುಪಿಸಿದ್ದಾರೆ

About the author

Adyot

Leave a Comment