ಆದ್ಯೋತ್ ಸುದ್ದಿ ನಿಧಿ : ಜಿಲ್ಲೆಯ ಭಟ್ಕಳದಲ್ಲಿ ಇಂದು ಒಂದೇ ದಿನ 12 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗುವುದರೊಂದಿಗೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.
ಆರೆಂಜ್ ಜೋನ್ ನಲ್ಲಿ ಇದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 12 ಪ್ರಕರಣಗಳು ದಾಖಲಾಗಿತ್ತು. 11 ಜನ ಗುಣಮುಖರಾಗಿದ್ದರು. ಆದರೆ ಈಗ ಒಂದೇ ದಿನ 12 ಪ್ರಕರಣ ಬಂದಿದ್ದು, ಜಿಲ್ಲೆ ರೆಡ್ ಜೋನ್ ನತ್ತ ಹೊರಳುತ್ತಿದೆ. ಈ ಎಲ್ಲಾ ಪ್ರಕರಣಗಳೂ ಕೂಡ ಕಂಟೇನ್ಮೆಂಟ್ ಜೋನ್ ಆದ ಭಟ್ಕಳದಲ್ಲೇ ಕಂಡುಬಂದಿದ್ದು, ಜಿಲ್ಲೆಯ ಎಲ್ಲಾ 24 ಪ್ರಕರಣಗಳು ಭಟ್ಕಳವೊಂದರಲ್ಲೇ ಕಂಡುಬಂದಿದೆ. ಕಳೆದ 4 ದಿನದ ಹಿಂದೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದ ಯುವತಿಯ ಕುಟುಂಬದವರಿಗೆ ಕೊರೊನಾ ಕಂಡುಬಂದಿದೆ. ಈ ಸುದ್ದಿ ಕೇಳಿ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದು, ಹಸಿರು ವಲಯದತ್ತ ಹೋಗುತ್ತಿದ್ದ ಜಿಲ್ಲೆ ಕೆಂಪು ವಲಯಕ್ಕೆ ಹೋಗೋ ಸಾಧ್ಯತೆ ಇದ್ದು, ಜಿಲ್ಲೆಗೆ ನೀಡಿರುವ ಎಲ್ಲಾ ರಿಲಾಕ್ಸೇಷನ್ ಗಳನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಮುಗಿಯದ ಕರೋನಾ ಮಾರಿ ಪುರಾಣ.