ಆದ್ಯೋತ್ ಸುದ್ದಿ ನಿಧಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 7 ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ, ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕದಲ್ಲಿದ್ದವರಿಗೆ ಸೋಂಕು ಬಂದಿದೆ. ನೇರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಪತ್ತೆ ನಡೆದಿದೆ. ಕೊರೊನಾ ಸೋಂಕಿತರಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಯಾರೇ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿ. ಸ್ವಯಂ ಚಿಕಿತ್ಸೆಗೆ ಒಳಗಾಗುವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಬಿಗು ನಿಯಮಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಆದರೆ ಇದು ಅವಶ್ಯಕವಾಗಿದೆ. ಜನ ಗಾಬರಿಗೊಳಗಾಗಬಾರದು ಎಂದರು.
ಪತಾಂಜಲಿ ಆಸ್ಪತ್ರೆ ರಕ್ಷಣಾ ವ್ಯವಸ್ಥೆಯ ಆಸ್ಪತ್ರೆಗಳಲ್ಲಿ ಅಗ್ರಸ್ಥಾನಿಯಾಗಿದೆ. ಕೆಲವೊಂದು ರಕ್ಷಣಾ ವ್ಯವಸ್ಥೆಯ ಕಾರಣಗಳಿಂದ ಆಸ್ಪತ್ರೆಯನ್ನು ಅವರಿಗೆ ಬಿಟ್ಟುಕೊಡಲೇಬೇಕಾಗಿದೆ. ಅವರು ನಮ್ಮ ಜೊತೆ ಉತ್ತಮವಾಗಿ ಸಹಕರಿಸಿದ್ದಾರೆ. ಇನ್ನು ಮುಂದೆ ಕಾರವಾರ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕೊರೊನಾ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿಯಲಿದೆ. ಇನ್ನು ಬರೋ 30 ಸ್ವಾಬ್ ಗಳ ಮೇಲೆ ಜಿಲ್ಲಾಡಳಿತ ಗಮನಹರಿಸುತ್ತಿದೆ. ಅದು ಪ್ರೈಮರಿ ಕಾಂಟ್ಯಾಕ್ಟ್ ಗಳಿಂದ ಹೋಗಿರೋ ಸ್ವಾಬ್ ಗಳು. ಆ ವರದಿಗಳು ನಾಳೆ ಬರೋ ಸಾಧ್ಯತೆ ಇದೆ ಎಂದರು.