ಆದ್ಯೋತ್ ಸುದ್ದಿ ನಿಧಿ : ವಿಶ್ವದಾದ್ಯಂತ ಆವರಿಸಿರುವ ಕೊರೊನಾದಿಂದಾಗಿ ಭಾರತ ವಿದೇಶದಲ್ಲಿರುವ ಭಾರತಿಯರನ್ನ ವಾಪಸ್ ಕರೆಸಿಕೊಳ್ಳುತ್ತಿದೆ. ಈ ದಿಸೆಯಲ್ಲಿ ಸರ್ಕಾರದ ಈ ಕಾರ್ಯಕ್ಕೆ ಭಾರತೀಯ ನೌಕಾ ಸೇನೆ ಕೂಡ ತನ್ನದೇ ಕೊಡುಗೆ ನೀಡುತ್ತಿದೆ. ಇಂದು ಜಲಮಾರ್ಗದ ಮೂಲಕ ಸುಮಾರು 698 ಭಾರತೀಯರನ್ನು ನೌಕಾ ಸೇನೆ ಕರೆತಂದಿದೆ.
ಭಾರತೀಯ ನೌಕಾ ಸೇನೆಯು ‘ಆಪರೇಷನ್ ಸಮುದ್ರಸೇತು’ ಅನ್ನುವ ಹೆಸರಿನ ಬೃಹತ್ ಕಾರ್ಯಾಚರಣೆ ಮೂಲಕ ಭಾರತೀಯರನ್ನ ವಾಪಸ್ ಕರೆತರುತ್ತಿದೆ. ನೌಕಾಪಡೆಯ “ಐ.ಎನ್. ಎಸ್ ಜಲಾಶ್ವ” ಅನ್ನೋ ನೌಕೆಯನ್ನ ಇದಕ್ಕೆ ನಿಯೋಜಿಸಲಾಗಿದ್ದು, ರಿಪಬ್ಲಿಕ್ ಆಫ್ ಮಾಲ್ಡಿವ್ಸ್ ನಿಂದ ಈ ನೌಕೆ ಮೇ 8 ಕ್ಕೆ ಸುಮಾರು 698 ಭಾರತಿಯರೊಂದಿಗೆ ಹೊರಟಿದ್ದು ಇಂದು ಕೇರಳದ ಕೊಚ್ಚಿನ್ ಬಂದರಿಗೆ ಬಂದು ತಲುಪಿದೆ. ನೌಕಾಪಡೆಯ ಕೆಲವು ನೌಕೆಗಳು ಐ.ಎನ್. ಎಸ್ ಜಲಾಶ್ವ ಗೆ ಜೊತೆಯಾಗಿ ಭಾರತೀಯರನ್ನು ಕರೆತರಲು ನೆರವಾದವು. ಕೊಚ್ಚಿ ಬಂದರಿಗೆ ಬಂದ ಭಾರತಿಯರನ್ನ ಕೇರಳ ರಾಜ್ಯದ ವಶಕ್ಕೆ ಒಪ್ಪಿಸಲಾಗಿದ್ದು ಆರೋಗ್ಯ ತಪಾಸಣೆ ನಡೆಯಲಿದೆ.