ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದ ಸಮೀಪ ವಿಜಯ ಬ್ಯಾಂಕ್ ಪಕ್ಕದಲ್ಲಿರುವ ಜುಬೇರ ಅಬ್ದುಲ್ ಖಾದರ್ ಎನ್ನುವವರ ಮನೆಯ ಮೇಲ್ಚಾವಣಿಯ ಮೇಲೆ ವೆಲ್ಡಿಂಗ್ ನಡೆಸುತ್ತಿದ್ದ ಸಮಯದಲ್ಲಿ ಮನೆಯ ತಳಭಾಗದಲ್ಲಿರುವ ಪುಸ್ತಕ ಮತ್ತು ಬಟ್ಟೆಯ ಮೇಲೆ ವೆಲ್ಡಿಂಗ್ ಕಿಡಿಗಳು ಬಿದ್ದ ಪರಿಣಾಮ ಬೆಂಕಿಹತ್ತಿಕೊಂಡಿದೆ. ವೆಲ್ಡಿಂಗ್ ಕೆಲಸ
ಮಾಡುತ್ತಿದ್ದ ಬಾಲಕೃಷ್ಣ ನಾಯ್ಕ ಎನ್ನುವವರಿಗೆ ಗಾಯವಾಗಿದೆ.
ತಕ್ಷಣವೇ ಸ್ಥಳೀಯ ಪೊಲೀಸ್ ಮತ್ತು ಅಗ್ನಿಶಾಮಕದಳದವರು
ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಬೇರ್ ಅಬ್ದುಲ್ ಖಾದರ್ ಮನೆಯ ಪಕ್ಕದ ಕೊಠಡಿಯಲ್ಲಿ ಪಟಾಕಿ ದಾಸ್ತಾನು ಇರುವುದಾಗಿ ತಿಳಿದು ಬಂದಿದ್ದು ಅಲ್ಲಿಗೆ ಬೆಂಕಿ ತಗುಲಿದರೆ ಬಾರಿ ಅನಾಹುತವಾಗುವ ಸಾಧ್ಯತೆ ಇತ್ತು
ಜನನಿಬಿಡ ಪ್ರದೇಶದಲ್ಲಿ ಇವರ ಮನೆ ಇದ್ದು ಪಕ್ಕದಲ್ಲೇ ವಿಜಯಭ್ಯಾಂಕ್ ಶಾಖೆ ಹಾಗೂ ಎಲ್.ಐ.ಸಿ. ಸೆಟ್ ಲೈಟ್ ಶಾಖೆಯೂ ಇದೆ
ದಿ.ಅಬ್ದುಲ್ ಖಾದರ್ ಹೆಸರಿಗೆ ಪಟಾಕಿ ಮಾರುವ ಲೈಸನ್ಸ್ ಇದ್ದು ಅವರು 2017ರಲ್ಲೆ ಮರಣ ಹೊಂದಿದ್ದಾರೆ.ಆದರೆ ಅವರ ಮರಣಾ ನಂತರ ಲೈಸನ್ಸ್ ನವೀಕರಣಗೊಂಡಿರುವುದಿಲ್ಲ
ಜುಬೇರ್ ಖಾದರ್ ಹೆಸರಲ್ಲಿ ಪರವಾನಿಗೆ ಇಲ್ಲವೆಂದು
ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು
ತಿಳಿದುಬಂದಿದ್ದು ಸುಮಾರು80000ರೂ. ಮೌಲ್ಯದ ಅಕ್ರಮವಾಗಿ ಪಟಾಕಿ ಸಂಗ್ರಹ ಮಾಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುವ್ವತ್ತು ಸಾವಿರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ
😶🤔🤔