ಚಿಂತಕ ಆನಂದ ತೇಲ್ತುಂಬ್ಡೆ ಬಿಡುಗಡೆಗೆ ಆಗ್ರಹಿಸಿ ಮನವಿ

ಆದ್ಯೋತ್ ಸುದ್ದಿನಿಧಿ::
ಭಾರತದ ಒಬ್ಬ ಪ್ರಮುಖ ವಿದ್ವಾಂಸರು. ಸಮಾಜಮುಖಿ ಚಿಂತಕರೂ, ಲೇಖಕರು ಹಾಗೂ ಮಾನವ ಹಕ್ಕುಗಳ ಪ್ರತಿಪಾದಕರೂ ಆದ ಡಾ. ಆನಂದ್ ತೇಲ್ತುಂಬ್ಡೆ ಮತ್ತು ಹಲವು ಚಿಂತಕರನ್ನು ಭೀಮಾ ಕೋರೆಗಾಂವ್ ಪ್ರಕರಣದಲಿ ಬಂಧಿಸಿ ಒಂದು ತಿಂಗಳಿಂದ ಬಿಡುಗಡೆ ಮಾಡದಿರುವುದು ಖಂಡನಾರ್ಹ. ಇವನ್ನು ತಕ್ಷಣ ಬಿಡುಗಡೆಮಾಡಬೇಕು ಎಂದು ಒತ್ತಾಯಿಸಿ ಮತ್ತು ಬಂಧಿತರಾದ ಈ ಎಲ್ಲಾ ಚಿಂತಕರ ಜೊತೆ ನಾವಿದ್ದೇವೆ ಎಂದು ಸಾರಲು ಮೇ 16 ರಂದು ಆಚರಿಸಲ್ಪಟ್ಟ ನ್ಯಾಯದ ದಿನ ಕ್ಕೆ ಚಿಂತನ ಉತ್ತರ ಕನ್ನಡ ಮತ್ತು ಸಹಯಾನ ಕೆರೆಕೋಣ ಬೆಂಬಲ ವ್ಯಕ್ತಪಡಿಸದ್ದಲ್ಲದೆ ಈ ಕುರಿತು ಜಿಲ್ಲಾಧಿಕಾರಿಯವರ ಮೂಲಕ ಪ್ರಧಾನಿಯವರಿಗೆ ಪತ್ರ ಕಳಿಸಲಾಯಿತು.
ದೇಶಕ್ಕೊಂದು ಜೀವಪರ ಸಂವಿಧಾನ ನೀಡುವಲ್ಲಿ ಮಹತ್ವದ ಪಾತ್ರವಹಿಸಿದ ಡಾ. ಬಿ.ಆರ್.ಅಂಬೇಡ್ಕರ್ ರವರ ಚಿಂತನೆಯನ್ನು ಮೈಗೂಡಿಸಿಕೊಂಡ ಡಾ. ಆನಂದ್ ತೇಲ್ತುಂಬ್ಡೆಯವರು ಜಾತಿ ಪದ್ಧತಿ ಅಸ್ಪøಶ್ಯತೆಗಳ ವಿರುದ್ಧ ಧ್ವನಿ ಎತ್ತುತ್ತ ಬಂದವರು. ಕುರುಡು ಸಾಂಪ್ರದಾಯಿಕತೆಯನ್ನು ಪ್ರಶ್ನಿಸಿದವರು. ಈ ನೆಲದ ದಮನಿತ, ಶೋಷಿತ ಜನರ ಬಾಳಿಗೆ ಬೆಳಕಾಗಬೇಕಾಗಿದ್ದ ಸಂವಿಧಾನದ ಪರವಾಗಿ ಗಟ್ಟಿಯಾಗಿ ಮಾತನಾಡಿದವರು. ದುರಂತವೆಂದರೆ ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ರವರ ಜನ್ಮ ದಿನದಂದೇ ಅವರನ್ನು ಯು.ಏ.ಪಿ.ಏ ಕಾಯ್ದೆಯಡಿ ಬಂಧಿಸಲಾಗಿದೆ. ಜಾಮೀನು ಕೂಡಾ ಸಿಗದ ಕರಾಳ ಕಾನೂನಿನ್ವಯ ಇವರನ್ನು ಬಂಧಿಸುವ ಮೂಲಕ ಮಾನವ ಹಕ್ಕುಗಳ ಪ್ರತಿಪಾದಕರ ಹಕ್ಕನ್ನೇ ಮೊಟಕುಗೊಳಿಸಲಾಗಿದೆ.
ಕೋವಿಡ್ ಕಾಲದಲ್ಲಿ ಈಗಾಗಲೇ ಬಂಧನದಲ್ಲಿರುವ ಇತರ ಖೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಕೋವಿಡ್ ಸೋಂಕಿಗೆ ಒಳಗಾಗುವ ಅಪಾಯವನ್ನು ತಪ್ಪಿಸಬೇಕೆಂದು ಒತ್ತಾಯಗಳಿರುವಾಗಲೇ ಡಾ. ಆನಂದ್ ತೇಲ್ತುಂಬ್ಡೆ ಯವರನ್ನು ಸುಳ್ಳು ಆರೋಪದಡಿ ಈ ಕಾಲದಲ್ಲಿಯೇ ಬಂಧಿಸಿ ಸೆರೆಯಲ್ಲಿಟ್ಟುರುವುದು ಖಂಡನೀಯ.
ಈ ಹಿನ್ನೆಲೆಯಲ್ಲಿ ಜಗತ್ತಿನ ಹಾಗೂ ಭಾರತದ ಜೀವಪರ, ಸಂವಿಧಾನಪರ ಎಲ್ಲ ವ್ಯಕ್ತಿಗಳು ಸಂಘಟನೆಗಳು ಡಾ. ಆನಂದ ತೇಲ್ತುಂಬ್ಡೆಯವರನ್ನು ಬಂಧಮುಕ್ತ ಮಾಡಬೇಕೆಂದು ಆಗ್ರಹಿಸಿ ಮೇ 16 ರಂದು ದೇಶದ್ಯಾಂತ ನ್ಯಾಯ ದಿನವನ್ನು ಆಚರಿಸಲು ಕರೆಕೊಟ್ಟಿದ್ದಾರೆ. ಈ ಕರೆಗೆ ಜೀವಪರ ಮನಸ್ಸುಗಳು ಬೆಂಬಲಿಸಬೇಕೆಂದು ಚಿಂತನ ಮತ್ತು ಸಹಯಾನ ವಿನಂತಿಸುತ್ತದೆ. ಮತ್ತು ಭಾರತ ಸರಕಾರವು ಡಾ. ಆನಂದ ತೇಲ್ತುಂಬ್ಡೆಯವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಬೇಕೆಂದು ಒತ್ತಾಯಿಸುತ್ತವೆ. ಈ ಮೂಲಕ ಜಾಗತೀಕವಾಗಿ ಭಾರತ ದೇಶದ ಗೌರವವನ್ನು ಉಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಪತ್ರಕ್ಕೆ ಚಿಂತನ ಉತ್ತರಕನ್ನಡ,ಸಹಯಾನ ಕೆರೆಕೋಣದ
ಡಾ. ಎಂ. ಜಿ. ಹೆಗಡೆ, ಡಾ.ವಿಠ್ಠಲ ಭಂಡಾರಿ, ಶಾಂತಾರಾಮ ನಾಯಕ ಹಿಚ್ಕಡ, ವಿಷ್ಣು ನಾಯ್ಕ ಅಂಕೋಲ ಬೆಂಬಲ ವ್ಯಕ್ತಪಡಿಸಿದ್ದಾರೆ.

About the author

Adyot

1 Comment

Leave a Comment