ಹೊನ್ನಾವರದಲ್ಲಿ ಕಾಣಿಸಿಕೊಂಡ ಕೊವಿಡ್19?

ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಕೊವಿಡ್19 ಕಾಲಿಟ್ಟಿದ್ದು ಮುಂಬೈನಿಂದ ಬಂದ ನಾಲ್ವರಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.


ಮುಂಬೈನಿಂದ ಮೇ12 ರಂದು ಬಸ್ ನಲ್ಲಿ ಆಗಮಿಸಿದ್ದ ಒಂಬತ್ತು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರಲ್ಲಿ ಪಾಸಿಟಿವ್ ಇರುವುದಾಗಿ ತಿಳಿದು ಬಂದಿದೆ. ಹೊನ್ನಾವರದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಲಾಗಿದ್ದ ಇವರು ಈಗ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಯಾವುದೇ ಆತಂಕವಿಲ್ಲ ಎನ್ನಲಾಗುತ್ತಿದೆ. ಅದೇ ರೀತಿ ಉತ್ತರಕನ್ನಡ ಜಿಲ್ಲೆಯ ಹಾಟ್ ಸ್ಪಾಟ್ ಭಟ್ಕಳದಲ್ಲೂ ಮತ್ತೆ ಮೂರು ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಅದೇ ರೀತಿ ಮುಂಡಗೋಡನಲ್ಲೂ ಎರಡು ಪಾಸಿಟಿವ್ ಪ್ರಕರಣಗಳಿವೆ ಎನ್ನಲಾಗುತ್ತಿದ್ದು ಸೋಮವಾರದ ಮದ್ಯಾಹ್ನದ ಹೆಲ್ತ್ ಬುಲೆಟಿನ್ ಲ್ಲಿ ಇದು ಖಚಿತಗೊಳ್ಳಲಿದೆ.

About the author

Adyot

2 Comments

Leave a Comment