ಆದ್ಯೋತ್ ಸುದ್ದಿ ನಿಧಿ : ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಸ್ ಗಳ ಸಂಚಾರ ಆರಂಭವಾಗಿದೆ. ವಾಯವ್ಯ ಕರ್ನಾಟಕ ಸಾರಿಗೆಯ ಶಿರಸಿ ಘಟಕದಿಂದ ಬಸ್ ಗಳ ಸಂಚಾರ ಆರಂಭಗೊಂಡಿದೆ.
ಮಾಸ್ಕ್ ಗಳನ್ನು ಹಾಕಿ ಬಸ್ ಓಡಿಸಲು ಚಾಲಕ ಹಾಗೂ ನಿರ್ವಾಹಕರುಗಳು ಸಜ್ಜಾಗಿದ್ದಾರೆ. ಜನ ಸಂಚಾರ ವಿರಳ ಹಿನ್ನೆಲೆಯಲ್ಲಿ ಜನರ ಸಂಖ್ಯೆಯನ್ನು ಆಧರಿಸಿ ಬಸ್ ಗಳನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಇದರಿಂದಾಗಿ ಅಪರೂಪಕ್ಕೊಮ್ಮೆ ಬಸ್ ಗಳು ಸಂಚರಿಸುತ್ತಿವೆ. ಜನರ ಸಂಖ್ಯೆ ಆಧರಿಸಿ ಬಸ್ ಗಳು ಬರುತ್ತಿವೆ. ಬಸ್ ಓಡಿಸಲು ಸಾರಿಗೆ ಘಟಕ ಸಂಪೂರ್ಣ ಸಜ್ಜಾಗಿದೆ. ಪ್ರಯಾಣಿಕರ ಹಾಗೂ ಬಸ್ ಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ತಿಳಿಸಿದ್ದಾರೆ.