ಆದ್ಯೋತ್ ಸುದ್ದಿ ನಿಧಿ : ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಮುಂದುವರೆದಿದೆ. ಹಾಟ್ ಸ್ಪಾಟ್ ಬಿಟ್ಟು ಜಿಲ್ಲೆಯ ಉಳಿದೆಡೆಯೂ ಕೊರೊನಾ ಕಾಲಿಡುತ್ತಿರೋ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯಲ್ಲಿ ಇಂದು 4 ಕೊರೊನಾ ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಯ ಮಲೆನಾಡು ಭಾಗಗಳಿಗೆ ಇಂದು ಕೊರೊನಾ ಶಾಕ್ ಕೊಟ್ಟಿದೆ. ಇಲ್ಲಿಯವರೆಗೆ ಜಿಲ್ಲೆಯ ಕರಾವಳಿ ಭಾಗಗಳಲ್ಲಷ್ಟೇ ಇದ್ದ ಕೊರೊನಾ, ಕಾರ್ಮಿಕ ಸಚಿವರ ತವರಿಗೂ ಕಾಲಿಟ್ಟಿದೆ. ಜಿಲ್ಲೆಯ ಯಲ್ಲಾಪುರ ಹಾಗೂ ದಾಂಡೇಲಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಹಾಗೇ ಜೋಯಿಡಾ ದಲ್ಲಿ ಒಂದು, ಹೊನ್ನಾವರದಲ್ಲಿ ಒಂದು ಪ್ರಕರಣ ದಾಖಲಾಗಿದ್ದು, 2 ಪ್ರಕರಣ ಮಹಾರಾಷ್ಟ್ರದ ಕಾಣಿಕೆಯಾಗಿದೆ. ಇದರೊಂದಿಗೆ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಪ್ರಕರಣ 56 ಕ್ಕೆ ಏರಿಕೆಯಾಗಿದೆ.