ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು

ಆದ್ಯೋತ್ ಸುದ್ದಿನಿಧಿ:
ಕೊವಿಡ್19 ಕಾರಣದಿಂದ ಎಸ್.ಎಸ್.ಎಲ್.ಸಿ
ಪರೀಕ್ಷೆ ವಿಳಂಬವಾಗಿದ್ದು, ಈಗ ದಿನಾಂಕ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳು ಆರೋಗ್ಯ ಕಾಳಜಿ ವಹಿಸುವುದರ ಜತೆಗೆ ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಿ ಉತ್ತಿರ್ಣರಾಗಬೇಕು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಶುಭ ಹಾರೈಸಿದ್ದಾರೆ.
ಕೊವಿಡ್19 ಕಾರಣದಿಂದ ಪರೀಕ್ಷೆಯ ದಿನಾಂಕದ ಬಗ್ಗೆ ಅನೇಕ ಗೊಂದಲಗಳಿದ್ದವೂ ಅದರ ನಿವಾರಣೆಯಾಗಿದ್ದು, ದಿನಾಂಕ ನಿಗದಿ ಮಾಡಲಾಗಿದೆ. ಸಮಯ ಕಡಿಮೆ ಇದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೊಬೈಲ್ ಫೋನ್‍ಗಳಿಂದ ದೂರು ಇರಿಸಿ ಅಭ್ಯಾಸದ ಬಗ್ಗೆ ಎಚ್ಚರವಹಿಸಬೇಕು.ಇಷ್ಟು ದಿನ ವಿದ್ಯಾರ್ಥಿಗಳು ಮನೆಯಲ್ಲಿಯೇ ಉಳಿದಿದ್ದು, ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕುರಿತು ಹೆಚ್ಚು ಕಾಳಜಿವಹಿಸಬೇಕು. ಮಕ್ಕಳಿಗೆ ಕಠಿಣ ಎನಿಸಿದ ವಿಷಯದ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿಸಬೇಕು. ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಹಳೆ ಪ್ರಶ್ನೇ ಪತ್ರಿಕೆಯ ಲೆಕ್ಕಗಳ ಸಮಸ್ಯೆಗಳನ್ನು ಬಗೆಹರಿಸುವುದು. ವಿಜ್ಞಾನ ವಿಷಯದ ಚಿತ್ರಗಳ ಭಾಗಗಳನ್ನು ಗುರುತಿಸುವುದು ಹಾಗೂ ಆಯಾ ಪಾಠಕ್ಕೆ ಸಂಬಂಧಿಸಿದಂತೆ ಸತತ ಅಧ್ಯಯನ ಮಾಡಬೇಕು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಲೇಖನ, ಪದ್ಯ ಕಂಠಪಾಠ, ಪ್ರಬಂಧ ಬರವಣಿಗೆ, ವ್ಯಾಕರಣ, ಇನ್ನಿತ್ತರ ಪ್ರಶ್ನೋತ್ತರಗಳ ಬಗ್ಗೆಯೂ ಒತ್ತು ನೀಡಬೇಕು. ಇದರಿಂದ ಹೆಚ್ಚಿನ ಅಂಕಗಳಿಕೆ ಸಾಧ್ಯವಾಗುತ್ತದೆ ಎಂದು ಶಾಸಕಿ ಸಲಹೆ ನೀಡಿದ್ದಾರೆ.

ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ರಾಜರ ಕಾಲಘಟ್ಟ, ಅವರ ಆಡಳಿತದಲ್ಲಿ ವಾಸ್ತುಶಿಲ್ಪ, ಆಡಳಿತ ಶೈಲಿ, ನಕಾಶೆಯಲ್ಲಿ ಸ್ಥಳ ಗುರುತಿಸುವಿಕೆಯ ತಯಾರಿಯನ್ನು ಪಾಲಕರು ಮಾಡಿಸಬೇಕು ಮಕ್ಕಳ ಏಕಾಗ್ರತೆಗಾಗಿ ಲಘು ವ್ಯಾಯಾವi, ಯೋಗಾಸನ, ಪ್ರಾಣಾಯಾಮಗಳಂತ ಚಟುವಟಿಕೆ ಮಾಡಿಸಬೇಕು. ಅಲ್ಲದೇ, ಓದಿದಂತಹ ವಿಷಯಗಳ ನೆನೆಪಿನಲ್ಲಿರಿಸಿಕೊಳ್ಳುವುದಕ್ಕಾಗಿ ಹೆಚ್ಚು ಹೆಚ್ಚು ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ರೂಪಾಲಿ ನಾಯ್ಕ ಹೇಳಿದ್ದಾರೆ.

About the author

Adyot

Leave a Comment