ಆದ್ಯೋತ್ ಸುದ್ದಿನಿಧಿ:
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನಾಗಪ್ಪಲೇಔಟ್ ಸಮೀಪದ ಹಾನಂಬಿಕೆರೆ ಏರಿಯ ಬಳಿ ಗುರುವಾರ
ಯುವಕನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ನೆಹರೂ ನಗರ ಬಡಾವಣೆಯ 24 ವರ್ಷದ ಸಾಜಿಲ್ ಎಂದು ಗುರುತಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ವ್ಯಕ್ತಿ ಗಲ್ಪರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದು ಈಗ ಕೆಲವು ತಿಂಗಳ ಹಿಂದೆ ಊರಿಗೆ ಮರಳಿ ಹಣ್ಣಿನ ವ್ಯಾಪಾರ ನಡೆಉಸುತ್ತಿದ್ದ ಬುಧವಾರ ತನ್ನ ಬೆಲೆಬಾಳುವ ಮೊಬೈಲ್ ಕಳುವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಎಂದು ತಿಳಿದುಬಂದಿದೆ. ಘಟನೆಯ ಹಿಂದೆ ಇಸ್ಪಿಟ್, ಗಾಂಜಾದಂತಹ ದೋ ನಂಬರ್ ದಂಧೆ ಇರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕೊಲೆಗಾರರ ಬಂಧನಕ್ಕೆ ಬಲೆಬೀಸಿದ್ದಾರೆ ಎಂದು ತಿಳಿದು ಬಂದಿದೆ.