ಆದ್ಯೋತ್ ವಾರಭವಿಷ್ಯ

ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೆ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯನಮೋನಮಃ

##### ಜೂನ್ ತಿಂಗಳ ಪ್ರಮುಖ ದಿನಗಳು #####
ದಿ 5-6-2020 ಶುಕ್ರವಾರ ಹುಣ್ಣಿಮೆ ವಟಸಾವಿತ್ರಿ ವ್ರತ
ದಿ.8-6-2020 ಸೋಮವಾರ ಸಂಕಷ್ಠಿ(ಚಂದ್ರ ಉದಯ9-41)
ದಿ.21-6-2020 ರವಿವಾರ ಅಮವಾಸ್ಯೆ,ಸೂರ್ಯಗ್ರಹಣ,ದಕ್ಷಿಣಾಯಣ ಪ್ರಾರಂಭ
###### ##### ##### ##### ##### #####
31-05-2020 ರವಿವಾರ ದಿಂದ 06-06-2020 ಶನಿವಾರದವರೆಗೆ
ಮೇಷ;
ವಾರದ ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗುವ ಆರ್ಥಿಕ ಚಟುವಟಿಕೆ ಮಧ್ಯ ಭಾಗದಲ್ಲಿ ಚೇತರಿಸಿಕೊಳ್ಳಲಿದೆ.ಮನೆಗೆ ಬಂಧುಗಳ ಆಗಮನದಿಂದ ಖರ್ಚು-ವೆಚ್ಚ ಹೆಚ್ಚಾಗಲಿದೆ.ಹೊಸ ಬಟ್ಟೆ ಖರೀದಿಸಲಿದ್ದೀರಿ.ಮಕ್ಕಳಿಗೆ ಆರೋಗ್ಯದ ತೊಂದರೆ ಕಾಣಿಸಿಕೊಳ್ಳಲಿದೆ.ಮಹಾಗಣಪತಿಯ ಆರಾಧನೆ ಮಾಡುವುದು ಉತ್ತಮ
###
ವೃಷಭ:
ಮಾನಸಿಕ ಕಿರಿಕಿರಿಯಿಂದ ವಾರದಾದ್ಯಂತ ನರಳಲಿರುವಿರಿ.
ನವಮ ಗುರು ವಕ್ರವಾಗಿರುವ ಕಾರಣ ಸಿಗಲಿರುವ ಲಾಭಗಳು ಕೈತಪ್ಪಲಿವೆ.ಆರೋಗ್ಯದಲ್ಲಿ ಏರುಪೇರಾಗಲಿದ್ದು ಹೊಟ್ಟೆ ನೋವು ಕಾಣಿಸಿಕೊಳ್ಳಲಿದೆ ಆಹಾರ ಸೇವನೆಯಲ್ಲಿ ಎಚ್ಚರಿಕೆವಹಿಸದಿದ್ದರೆ
ಆರೋಗ್ಯ ಹದಗೆಡಲಲಿದೆ.ಹಣಕಾಸು ವ್ಯವಹಾರದಲ್ಲೂ ಎಚ್ಚರಿಕೆ ಅವಶ್ಯಕ
ಶಿವಪಂಚಾಕ್ಷರಿ ಮಂತ್ರ ಪಠಿಸುವುದು ಒಳ್ಳೆಯದು
###
ಮಿಥುನ:
ಈ ವಾರ ವಾಹನ ಮತ್ತು ಬೆಂಕಿಯಿಂದ ಎಚ್ಚರಿಕೆ ಇರಲಿ ಸ್ನೇಹಿತರಿಂದ ಮೋಸವಾಗುವ ಸಾಧ್ಯತೆ ಇದೆ ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ ಬಟ್ಟೆ ವ್ಯಾಪಾರಸ್ಥರಿಗೆ ಲಾಭವಾಗಲಿದೆ.ಸರಕಾರಿ ನೌಕರರಿಗೆ ಮೇಲಾಧಿಕಾರಿಗಳಿಂದ ಕಿರುಕಳವಾಗಲಿದೆ ಶುಕ್ರವಾರ ಶುಭ ಸುದ್ದಿ ಸಿಗುವ ಮೂಲಕ ಒಂದಿಷ್ಟು ನೆಮ್ಮದಿ ಸಿಗಲಿದೆ
ಗುರು ಆರಾಧನೆ ಮಾಡುವುದು ಉತ್ತಮ
###
ಕರ್ಕಾಟಕ:
ವ್ಯಾಪಾರಸ್ಥರಿಗೆ ಉತ್ತಮವಾಗಿರುವ ವಾರ,ಧಾನ್ಯದ ವ್ಯಾಪಾರ ಮಾಡುವವರಿಗೆ,ಕೃಷಿಕರಿಗೆ ಅನಿರೀಕ್ಷಿತ ಧನಲಾಭವಾಗಲಿದೆ.
ಮೂತ್ರಕೋಶದ ತೊಂದರೆ ಕಾಣಿಸಿಕೊಳ್ಳಲಿದ್ದು ಆಹಾರ ಪದ್ದತಿ
ಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ.
ಹೊಸ ಆಸ್ತಿ ಖರೀದಿಯ ಪ್ರಸ್ತಾವನೆ ಬರಲಿದ್ದು ಎಚ್ಚರಿಕೆಯಿಂದ ವ್ಯವಹರಿಸಿ.
###
ಸಿಂಹ:
ಹೊಸ ವ್ಯವಹಾರ ಪ್ರಾರಂಭಿಸಲು ಸಕಾಲವಾಗಿದೆ.ಮನೆ ನಿರ್ಮಾಣಕ್ಕೆ ಮುಂದಾಗಲಿದ್ದೀರಿ.ಅನಿರೀಕ್ಷಿತ ಧನಾಗಮನದಿಂದ ವಿಚಲಿತರಾಗಬೇಡಿ ಸರಿಯಾದ ರೀತಿಯಲ್ಲಿ ವಿನಿಯೋಗಿಸಿದರೆ ಭವಿಷ್ಯ ಉತ್ತಮವಾಗಿರುತ್ತದೆ.ಅವಿವಾಹಿತರಿಗೆ ಸಂಬಂಧ ಬರಲಿದ್ದು ವಿವಾಹ ಭಾಗ್ಯ ಸಿಗಲಿದೆ.ಕೃಷಿಕರಿಗೆ ಉತ್ತಮ ಬೆಳೆಯ ಜೊತೆಗೆ ಉತ್ತಮ ಬೆಲೆಯೂ ಸಿಗಲಿದೆ.
###
ಕನ್ಯಾ:
ವಾರದ ಪ್ರಾರಂಭ ಅಷ್ಟೇನು ಚೆನ್ನಾಗಿರುವುದಿಲ್ಲ ಮಾನಸಿಕ ಕಿರಿಕಿರಿಯಿಂದ ವ್ಯವಹಾರದಲ್ಲಿ ಹಿನ್ನಡೆ ಎನಿಸಬಹುದು ಆದರೆ ಎರಡೇ ದಿನದಲ್ಲಿ ಬದಲಾವಣೆಯಾಗಲಿದೆ ನಿಮ್ಮ ಆತ್ಮಸ್ಥೈರ್ಯ ನಿಮ್ಮನ್ನು ಮುನ್ನೆಡೆಸಲಿದೆ.ಹಿರಿಯರ ಸಲಹೆ ನಿಮ್ಮ ಬದುಕಿನ ದಾರಿಯನ್ನು ಬದಲಿಸಲಿದೆ ವಾರದ ಅಂತ್ಯದಲ್ಲಿ ಹೊಸ ವ್ಯವಹಾರ ಪ್ರಾರಂಭಿಸಲಿದ್ದೀರಿ ಚಿನ್ನ ಖರೀದಿ,ಬಟ್ಟೆ ಖರೀದಿ ಮಾಡಲಿದ್ದೀರಿ.
###
ತುಲಾ:
ಮಾನಸಿಕ ಚಂಚಲತೆ ನಿಮ್ಮ ದೌರ್ಬಲ್ಯವಾಗಿದ್ದು ಸ್ತ್ರೀ ಸಂಬಂಧಿತ ಆಪಾದನೆಯೊಂದು ನಿಮ್ಮನ್ನು ಕಾಡಲಿದೆ.ದೂರದ ಪ್ರಯಾಣದಿಂದ ದೈಹಿಕ ಶ್ರಮವಾಗಲಿದೆ ಖರ್ಚು ಹೆಚ್ಚಾಗಲಿದ್ದು ಮೂಗು ಮತ್ತು ಗಂಟಲಿನ ಸಮಸ್ಯೆಯಾಗಲಿದೆ ವಾರದ ಅಂತ್ಯದಲ್ಲಿ ಹರ್ಷದಾಯಕ ಸುದ್ದಿ ಬರಲಿದ್ದು ಇದರಿಂದ ನೆಮ್ಮದಿ ದೊರೆಯಲಿದೆ ಹಣಕಾಸಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಕೃಷಿಕರಿಗೆ ವೃಥಾ ಖರ್ಚು ಎದುರಾಗಲಿದೆ.
###
ವೃಶ್ಚಿಕ
ಹಣಕಾಸು ವ್ಯವಹಾರ ಸರಾಗವಾಗಿ ನಡೆಯಲಿದ್ದರೂ ನಿಮ್ಮ ದುಡುಕಿನಿಂದ ಕೆಲವು ಅವಕಾಶಗಳು ಕೈತಪ್ಪಲಿವೆ. ಬಹುದಿನದಿಂದ ನೆನಗುದಿಗೆ ಬಿದ್ದಿದ್ದ ಸಮಸ್ಯೆಯೊಂದು ಸುಲಭದಲ್ಲಿ ಬಗೆಹರಿಯಲಿದೆ.ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.ವಾರಾಂತ್ಯದಲ್ಲಿ ಹೊಸವಸ್ತು ಖರೀದಿಸುವ ಸಾಧ್ಯತೆ ಇದೆ.
ಕೃಷಿಕರಿಗೆ ಬೆಳೆಗೆ ಉತ್ತಮ ಬೆಲೆ ಸಿಗಲಿದೆ
ನಾಗಪೂಜೆ,ಸುಬ್ರಹ್ಮಣ್ಯ ಪೂಜೆ ಮಾಡುವುದು ಉತ್ತಮ
###
ಧನಸ್ಸು
ವಾರದ ಪ್ರಾರಂಭದಲ್ಲೆ ಆರೋಗ್ಯದ ಸಮಸ್ಯೆ ಕಾಡಲಿದ್ದು ವೈದ್ಯರ ಸಲಹೆ ಪಡೆಯುವುದು ಉತ್ತಮ.ಹಣಕಾಸು ವ್ಯವಹಾರ ಸಾದಾರಣವಾಗಿದ್ದು ಖರ್ಚು ಹೆಚ್ಚಾಗಲಿದೆ.ನಿರೀಕ್ಷಿಸಿದಂತೆ ಕೆಲಸ ನಡೆಯದ ಕಾರಣ ಮಾನಸಿಕ ಕಿರಿಕಿರಿ ಉಂಟಾಗಲಿದೆ.
ಸರಕಾರಿ ನೌಕರರಿಗೆ ಮುಂಬಡ್ತಿ ದೊರೆಯಲಿದೆ ಕೃಷಿಚಟುವಟಿಕೆ ನಿಧಾನಗೊಳಿಸಿದರೆ ಉತ್ತಮ
ಗುರು ಪೂಜೆ ಮಾಡುವುದು ಒಳ್ಳೆಯದು
###
ಮಕರ
ನಿರೀಕ್ಷಿಸಿದಂತೆ ಕೆಲಸವಾದ ಕಾರಣ ಮಾನಸಿಕ ಗೊಂದಲಕ್ಕೆ ಒಳಗಾಗಲಿದ್ದೀರಿ ಅವಕಾಶಗಳನ್ನು ಕೈಚೆಲ್ಲುವ ಕಾರಣ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ.ವಾಹನ ಅಪಘಾತವಾಗುವ ಸಾಧ್ಯತೆ ಇದ್ದು ಎಚ್ಚರಿಕೆ ಅವಶ್ಯಕ.ವಾರದ ಮಧ್ಯದಲ್ಲಿ ಹೊಸ ವಸ್ತು ಖರೀದಿಸಲಿದ್ದೀರಿ.ಕೃಷಿಚಟುವಟುಕೆಗೆ ಉತ್ತಮ ಅವಕಾಶವಿದ್ದು ಹೆಚ್ಚು ತೊಡಗಿಸಿಕೊಳ್ಳುವುದು ಉತ್ತಮ
ದಶರಥ ಕೃತ ಶನಿಸ್ತೋತ್ರ ಪಠನೆ ಮಾಡುವುದು ಒಳ್ಳೆಯದು
###
ಕುಂಭ
ವ್ಯವಹಾರಕ್ಕೆ ಉತ್ತಮ ಅವಕಾಶವಿರುವ ಈ ವಾರ ಹೊಸವಸ್ತು ಖರೀದಿಸಲಿದ್ದೀರಿ.ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಆಹಾರ ಸೇವನೆಯಲ್ಲಿ ಎಚ್ಚರವಿರಲಿ ಸರಕಾರಿ ನೌಕರರಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ.ಮೇಲಾಧಿಕಾರಿಗಳ ಪ್ರಶಂಸೆ ದೊರೆಯಲಿದೆ.ವಾರದ ಮಧ್ಯದಲ್ಲಿ ಜರಗುವ ಅನಿರೀಕ್ಷಿತ ಘಟನೆಯೊಂದು ನಿಮ್ಮ ಬದುಕಿನ ದಾರಿಯನ್ನು ಬದಲಿಸಲಿದೆ
ಕೃಷಿಕರಿಗೆ ಉತ್ತಮವಾಗಿರುವ ಈ ವಾರ ನಿರೀಕ್ಷಿತ ಹಣ ಕೈಸೇರಲಿದೆ
###
ಮೀನ
ಹಣಕಾಸು ವ್ಯವಹಾರದಲ್ಲಿ ಜಯಸಿಗಲಿದೆ ಬಹುಕಾಲದಿಂಸ ನೆನಗುದಿಗೆ ಬಿದ್ದಿರುವ ಕೋರ್ಟ ವ್ಯವಹಾರ ಈ ವಾರ ಚಾಲನೆಯಾಗಲಿದೆ.ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರವಾಗಲಿದೆ
ಹೊಸ ವಸ್ತುಗಳ ಖರೀದಿಯಾಗಲಿದೆ.ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸವಿರುತ್ತದೆ
ಧಾನ್ಯ ಬೆಳೆಯುವ ಕೃಷಿಕರು ಈ ವಾರ ಕೃಷಿಚಟುವಟಿಕೆಯಿಂದ ದೂರವಿರುವುದು ಉತ್ತಮ
##### ##### ### ಶುಭಂ ### ##### #####

About the author

Adyot

Leave a Comment

Use the form on right side to Send your query related to Advertisement, to Send News and to Share Your Feedback!

Ad/Send News/Feedback

Copyright © 2025. Adyot News | All Rights Reserved