ಆದ್ಯೋತ್ ಸುದ್ದಿನಿಧಿ:
ಶಿವಮೊಗ್ಗದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾಶಾಖೆಯ ಸದಸ್ಯರು ಜಿಲ್ಲಾಧ್ಯಕ್ಷ ಎಸ್.ಆರ್.ಮಂಜುನಾಥ ನೇತೃತ್ವದಲ್ಲಿ
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚೀವ ಈಶ್ವರಪ್ಪನವರಿಗೆ ಮನವಿ ಸಲ್ಲಿಸಿದರು.
ಆರನೆ ವೇತನ ಆಯೋಗದ ಪರಿಷ್ಕರಣೆಯಲ್ಲಿ ನಮ್ಮ ವೃಂದದ ವೇತನ ತಾರತಮ್ಯ ಸರಿಪಡಿಸಲು ವೇತನ ಆಯೋಗ ಸಮಿತಿಯು ಶಿಫಾರಸ್ಸು ಮಾಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸರಕಾರಕ್ಕೆ ಶಿಪಾರಸ್ಸು ಮಾಡುವುದು.
ನಮ್ಮ ವೃಂದದ ಪದನಾಮವನ್ನು ಸಮುದಾಯ ಆರೋಗ್ಯ ಶುಶ್ರೂಷಕ,ಅಧಿಕಾರಿ ಅಥವಾ ಆರೋಗ್ಯ ವೀಕ್ಷಕರು ಎಂದು ಪದನಾಮ ಬದಲಾವಣೆಗೆ ಶಿಪಾರಸ್ಸು ಮಾಡುವುದು.
ನಮ್ಮ ಕ್ಷೇತ್ರದ ಸಿಬ್ಬಂದಿಯವರು ಎಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ವಾರಿಯಸ್೯ರಂತೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು ರಿಸ್ಕ್ ಆಲೊಯನ್ಸ್ ಭತ್ಯೆ ಹಾಗೂ ಗ್ರಾಮೀಣ ಭತ್ಯೆಯನ್ನು ನೀಡುವಂತೆ ಶಿಪಾರಸ್ಸು ಮಾಡುವುದು.
ಇತ್ತೀಚಿನ ದಿನಗಳಲ್ಲಿ ನಮ್ಮ ವೃಂದದ ಸಿಬ್ಬಂದಿಯವರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು ಮಾನಸಿಕ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಒತ್ತಡ ಕಡಿಮೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾಟಾ ಎಂಟ್ರಿ ಅಪರೇಟರ್ ನೇಮಕ ಮಾಡಲು ಶಿಫಾರಸ್ಸು ಮಾಡುವುದು.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ
ಜನಸಂಖ್ಯೆಗನುಗುಣವಾಗಿ ಉಪಕೇಂದ್ರವನ್ನು ಸೃಜಿಸುವುದು ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಶಿಪಾರಸ್ಸು ಮಾಡುವುದು.
ಎನ್.ಆರ್.ಹೆಚ್.ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಖಾಯಂಗೊಳಿಸುವಂತೆ ಸರಕಾರಕ್ಕೆ ಶಿಪಾರಸ್ಸು ಮಾಡುವುದು.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.