ವಿಶ್ವ ಪರಿಸರ ದಿನಾಚರಣೆ

ಆದ್ಯೋತ್ ಸುದ್ದಿನಿಧಿ:
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೊವಿಡ್ ನಡುವೆಯೇ ರಾಜ್ಯಾದ್ಯಂತ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ
ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿ, ಸಭಾಧ್ಯಕ್ಷ
ವಿಶ್ವೇಶ್ವರ ಹೆಗಡೆಕಾಗೇರಿ ಗಿಡ ನೆಟ್ಟು ಶುಭಹಾರೈಸಿದರು

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಬೀಜ ಸಂರಕ್ಷಕ ಪರಿಸರ ಪ್ರೇಮಿ ಗಣಪತಿ ಹೆಗಡೆ ವಡ್ಡಿನಗದ್ದೆ ಪ್ರತಿವರ್ಷದಂತೆ ಈ ವರ್ಷವೂ ವಡ್ಡಿನಗದ್ದೆ ಗ್ರಾಮದ ಸಮೀಪದ ಗುಡ್ಡಗಳಲ್ಲಿ ವಿವಿಧ ಜಾತಿಯ ಅಪರೂಪದ ಬೀಜಗಳನ್ನು ಬಿತ್ತುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.

ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ,ತಹಸೀಲ್ದಾರ ಮಂಜುಳಾ ಭಜಂತ್ರಿ,ಸಿಪಿಐ ಪ್ರಕಾಶ,ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ,ಪರಿಸರ ತಜ್ಞ ಎಂ.ಬಿ.ನಾಯ್ಕ,ಪತ್ರಕರ್ತ ನಾಗರಾಜ ಮಾಳ್ಕೋಡ ಮುಂತಾದವರು ಭಾಗವಿಸಿದ್ದರು.

ಸಾಗರ ತಾಲೂಕು ಹೊನ್ನೆಮರಡಿನಲ್ಲಿ ಸ್ಥಳೀಯ ಎಸ್.ಎಲ್.ಎನ್.ಸ್ವಾಮಿ ಹಾಗೂ ಅವರ ಪತ್ನಿ ನೊಮಿಟೊ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಸಾಹಿತಿ ಗಂಗಾಧರ ಕೊಳಗಿಯವರ ಯಾನ ಪುಸ್ತಕವನ್ನು ಹಂಚಲಾಯಿತು

About the author

Adyot