ಆದ್ಯೋತ್ ವಾರಭವಿಷ್ಯ

ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೆ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯನಮೋನಮ
#####
ಮೇಷ:
ಗೆಲುವಿನೊಂದಿಗೆ ಪ್ರಾರಂಭವಾಗುವ ಈ ವಾರ ಅನಿರೀಕ್ಷಿತ ಧನಾಗಮನವಾಗಲಿದೆ.ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಂತಸದ ವಾತಾವರಣ ಇರುತ್ತದೆ. ವ್ಯಾಪಾರಸ್ಥರಿಗೆ ಉತ್ತಮ ಬೆಳವಣಿಗೆ ಯಾಗಲಿದ್ದು ಧಾನ್ಯ ವ್ಯಾಪಾರಿಗಳು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಕೃಷಿಕರು ಬೆಳೆಯನ್ನು ಮಾರುಕಟ್ಟೆಗೆ ಒಯ್ಯುವುದು ಉತ್ತಮ ಶನಿವಾರ ಬಿತ್ತನೆಗೆ ಅನುಕೂಲ
###
ವೃಷಭ:
ಹೊಸ ವಸ್ತುಗಳನ್ನು ಖರೀದಿಸಲಿದ್ದೀರಿ.ಹಣಕಾಸು ವ್ಯವಹಾರದಲ್ಲಿ ಒಂದಿಷ್ಟು ಹಿನ್ನಡೆಯಾದರೂ ವಾರಾಂತ್ಯಕ್ಕೆ ಚೇತರಿಕೆಯಾಗಲಿದೆ.
ಬುಧವಾರ ಅನಿರೀಕ್ಷಿತ ಧನಾಗಮನವಾಗಲಿದ್ದು ಭವಿಷ್ಯದಲ್ಲಿ ಉಪಯೋಗವಾಗಲಿದೆ.ಗೊಬ್ಬರ ಮತ್ತು ಬೀಜ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸವಿರುತ್ತದರ.ಕೃಷಿಕರಿಗೆ ಉತ್ತಮ ಲಾಭವಾಗಲಿದೆ.
ರವಿವಾರ ಬಿತ್ತನೆಗೆ ಅನುಕೂಲ
###
ಮಿಥುನ:
ಮಾನಸಿಕ ಚಂಚಲತೆಯಿಂದ ಗೊಂದಲ. ಸೃಷ್ಟಿಯಾಗಲಿದೆ.ವಾಹನ,ಬೆಂಕಿಯಿಂದ ಅಪಘಾತ ಸಂಭವಿಸುವ ಸಾಧ್ಯತೆಗಳಿದೆ.ಶತ್ರುಗಳ ಕಾಟದಿಂದ ವೃಥಾಪವಾದಗಳು ಬರಲಿದೆ
ವ್ಯಾಪಾರಿಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು.ಬಟ್ಟೆ ವ್ಯಾಪಾರಸ್ಥರಿಗೆ ಒಂದಿಷ್ಟು ಲಾಭವಾಗಲಿದೆ.ಕೃಷಿಕರು ಬೆಳೆಯನ್ನು ಮಾರುಕಟ್ಟೆಗೆ ಒಯ್ಯುವುದು ಸರಿಯಲ್ಲ
ಶನಿವಾರ ಬಿತ್ತನೆಗೆ ಅನುಕೂಲ
###
ಕರ್ಕಾಟಕ:
ಹಿಂದೆ ತೊಡಗಿಸಿದ್ದ ಬಂಡವಾಳದ ಲಾಭ ಈ ವಾರ ನಿಮ್ಮ ಕೈಸೇರಲಿದೆ.ಹಣಕಾಸು ವ್ಯವಹಾರದಲ್ಲಿ ಉತ್ತಮ ಲಾಭ ದೊರಕಲಿದೆ ಧಾನ್ಯ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಾಗಲಿದೆ
ಹೊಸ ವಸ್ತುಗಳ ಖರೀದಿಯ ಜೊತೆಗೆ ಆಭರಣ ಖರೀದಿ ಮಾಡಲಿದ್ದೀರಿ
ಕೃಷಿಕರಿಗೆ ಉತ್ತಮ ಲಾಭ ದೊರಕಲಿದ್ದು ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯುವುದು ಉತ್ತಮ‌
ಬುಧವಾರ ಬಿತ್ತನೆಗೆ ಅನುಕೂಲ
###
ಸಿಂಹ:
ಹಣಕಾಸು ವ್ಯವಹಾರದಲ್ಲಿ ಪ್ರಗತಿಯಾಗಲಿರುವ ಈ ವಾರ ಉತ್ತಮ ಸಾಧನೆ ಮಾಡಲಿದ್ದೀರಿ‌‌.ಉದರ ಮತ್ತು ಕರಳು ಸಂಬಂಧಿತ ಖಾಯಿಲೆ ಕಾಣಿಸಿಕೊಳ್ಳಲ್ಲಿದ್ದು ನಿರ್ಲಕ್ಷ ಮಾಡಬೇಡಿ
ಸರಕಾರಿ ನೌಕರರಿಗೆ ಬಡ್ತಿ ದೊರೆಯಲಿದೆ ಹೊಸ ಬಟ್ಟೆ ಖರೀದಿ ಮಾಡಲಿದ್ದೀರಿ.ವ್ಯಾಪಾರಸ್ಥರಿಗೆ ಉತ್ತಮ ವಾರವಾಗಲಿದೆ‌
ಕೃಷಿಕರು ಬೆಳೆ ಮಾರಾಟದಿಂದ ಲಾಭಗಳಿಸಲಿದ್ದಾರೆ‌ ಗುರುವಾರ ಬಿತ್ತನೆಗೆ ಅನುಕೂಲವಾಗಲಿದೆ.
###
ಕನ್ಯಾ:
ಮನಸ್ಸಿನಲ್ಲಿ ಅಪೇಕ್ಷಿಸಿದ್ದ ಹಲವು ಕೆಲಸಗಳು ಈ ವಾರ ಈಡೇರಲಿದೆ.ಅನಿರೀಕ್ಷಿತ ಧನಾಗಮನದಿಂದ ಸಾಲ ಮುಕ್ತರಾಗಲಿದ್ದೀರಿ.ಕಬ್ಬಿಣ ಮತ್ತು ವಿಧಯುತದ ಉಪಕರಣ ಮಾರಾಟಗಾರರೊಗೆ ಹೆಚ್ಚಿನ ಲಾಭವಾಗಲಿದೆ ಹೊಸ ವಾಹನದ ಖರೀದಿ ಮಾಡಲಿದ್ದು ಮನೆಯಲ್ಲಿ ಸಂತಸವಿರುತ್ತದೆ
ಹೂವು,ಹಣ್ಣಿನ ಕೃಷಿಕರಿಗೆ ಉತ್ತಮ ಲಾಭವಾಗಲಿದೆ
ಸೋಮವಾರ ಬಿತ್ತನೆಗೆ ಅನಕೂಲವಾಗಿದೆ
###
ತುಲಾ:
ಹೊಸ ವ್ಯವಹಾರ ಪ್ರಾರಂಭಿಸುವ ಮುನ್ನ ಒಮ್ಮೆ ಯೋಚಿಸಿ
ಅನುಭವಸ್ಥರ ಸಲಹೆ ಪಡೆಯುವುದು ಉತ್ತಮ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿರುವ ಈ ವಾರ ಆರೋಗ್ಯ ಸಮಸ್ಯೆಯಿಂದ ಬಳಲುವಿರಿ ಚರ್ಮವ್ಯಾಧಿ ಕಾಣಿಸಿಕೊಂಡು ಮಾನಸಿಕ ಕಿರಿಕಿರಿ ಅನುಭವಿಸಲಿದ್ದಿರಿ.ವಾರಾಂತ್ಯದಲ್ಲಿ ಶುಭ ಸುದ್ದಿಯೊಂದು ನಿಮ್ಮ ಬದುಕು ಬದಲಾಯಿಸಲಿದೆ‌
ಕೃಷಿಕರಿಗೆ ನಷ್ಟವಾಗುವ ಸಂಭವವಿರುವುದರಿಂದ ಬೆಳೆ ಮಾರಾಟ ಮಾಡುವುದು ಸೂಕ್ತವಲ್ಲ
ಬುಧವಾರ ಬಿತ್ತನೆಗೆ ಅನುಕೂಲ
###
ವೃಶ್ಚಿಕ:
ಬಹುನಿರೀಕ್ಷಿತ ಕೆಲಸವೊಂದು ಕೈಗೂಡಲಿದೆ.ಸ್ನೇಹಿತರಿಂದ ಮಾನಹಾನಿಯಾಗುವ ಸಂಭವವಿದ್ದು ದೂರ ಉಳಿಯುವುದು ಉತ್ತಮ ಗೊಬ್ಬರ ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ದೊರಕಲಿದೆ
ಹೊಸ ವಸ್ತುಗಳ ಖರೀದಿ ಮಾಡಲಿದ್ದೀರಿ
ಕೃಷಿಕರಿಗೆ ಉತ್ತಮ ಅವಕಾಶವಿದ್ದು ಉತ್ಪನ್ನ ಮಾರಾಟ ಮಾಡುವುದು ಉತ್ತಮ
ಗುರುವಾರ ಬಿತ್ತನೆಗೆ ಅನುಕೂಲ
###
ಧನಸ್ಸು:
ಹೊಸ ವ್ಯವಹಾರ ಮಾಡಲು ಸಮಯ ಪಕ್ವವಾಗಿಲ್ಲ ಮನಸ್ಸಿನ ಚಂಚಲತೆಯಿಂದ ನಷ್ಟವಾಗುವ ಸಾಶ್ಯತೆ ಇದೆ ಹೊಸ ವ್ಯವಹಾರ ಬೇಡ.ಸರಕಾರಿ ನ್ಔಕರರಿಗೆ ಬಡ್ತಿ ದೊರೆಯಲಿದೆ ಧಾನ್ಯ ಹಾಗೂ ಬಟ್ಟೆ ವ್ಯಾಪಾರಸ್ಥರಿಗೆ ಲಾಭವಾಗಲಿದೆ.
ಕೃಷಿಕರಿಗೆ ಉತ್ತಮ ಪ್ರತಿಫಲ ದೊರಕಲಿದ್ದು ಹಣ್ಣಿನ ಬೆಳೆಗಾರರಿಗೆ ಹೆಚ್ಚಿನ ಲಾಭವಾಗಲಿದೆ.
###
ಮಕರ:
ಸ್ತ್ರೀ ಸಂಬಂಧಿತ ಆಪಾದನೆಯೊಂದು ಈ ವಾರ ನೀವು ನರಳುವಂತೆ ಮಾಡುತ್ತದೆ.ನೀವು ನಂಬಿದ ವ್ಯಕ್ತಿಯಿಂದ ಮೋಸವಾಗುವುದರಿಂದ ಹಣಕಾಸು ವ್ಯವಹಾರದಲ್ಲಿ ನಷ್ಟ ಅನುಭವಿಸಲಿದ್ದೀರಿ ಹೊಸ ವಸ್ತು ಖರೀದಿಯಾಗಲಿದ್ದು ಗುರುವಾರ ಬರಲಿರುವ ನಿಮ್ಮಿಷ್ಟದವರಿಂದ ಒಳ್ಳೆಯ ಫಲ ದೊರಕಲಿದೆ.ಕೃಷಿಕರು ಉತ್ಪನ್ನ ಮಾರಾಟ ಮಾಡುವುದು ಒಳ್ಳೆಯದಲ್ಲ ಸೋಮವಾರ ಬಿತ್ತನೆಗೆ ಅನುಕೂಲ
ಗುರುಆರಾಧನೆ ಮಾಡುವುದು ಒಳ್ಳೆಯದು
###
ಕುಂಭ:
ಹೊಸ ವ್ಯವಹಾರಕ್ಕೆ ಸೂಕ್ತವಾದ ವಾರವಾಗಿದೆ. ನಿಮ್ಮ ಸಮಸ್ಯೆಗಳು ಸುಲಭವಾಗಿ ಬಗೆಹರಿಯುವುದರಿಂದ ನಿರಾಳವಾಗುವಿರಿ ವಾರದ ಮಧ್ಯದಲ್ಲಿ ಆರೋಗ್ಯ ಸಂಬಂಧಿತ ಕಿರಿಕಿರಿಯಾಗಲಿದೆ.ದ್ರವ ಪದಾರ್ಥ ಹಾಗೂ ಹಣ್ಣಿನ ವ್ಯಾಪಾರಿಗಳಿಗೆ ಲಾಭವಾಗಲಿದೆ.ಧಾನ್ಯ ಬೆಳೆದ ಕೃಷಿಕರು ಮಾರಾಟ ಮಾಡುವುದು ಉತ್ತಮ
ಗುರುವಾರ ಬಿತ್ತನೆಗೆ ಅನುಕೂಲ
###
ಮೀನ
ಶೃಂಗಾರ ಸಾಮಗ್ರಿಗಳ ಖರೀದಿಯಿಂದ ಕೌಟಿಂಬಿಕ ಸುಖವನ್ನು ಅನುಭವಿಸಲಿದ್ದೀರಿ.ಬೆಂಕಿ ಮತ್ತು ವಾಹನಗಳಿಂದ ಅಪಾಯವಾಗುವ ಸಾಧ್ಯತೆ ಇದ್ದು ಎಚ್ಚರವಿರಲಿ.ಹೊಸ ವ್ಯವಹಾರದಿಂದ ಲಾಭವಾಗಲಿದ್ದು ಉಳಿತಾಯದ ಕಡೆಗೆ ಗಮನವಿರಲಿ ವಾರಾಂತ್ಯದಲ್ಲಿ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸವಿದ್ದರೂ ಮಾನಸಿಕ ಕಿರಿಕಿರಿ ಅನುಭವಿಸುವಿರಿ
ಕೃಷಿಕರಿಗೆ ಉತ್ತಮ ಬೆಲೆ ಸಿಗುವುದರಿಂದ ಉತ್ಪನ್ನ ಮಾರುವುದು
ಉತ್ತಮ ಸೋಮವಾರ ಬಿತ್ತನೆಗೆ ಅನುಕೂಲ
##### ###### ### ಶುಭಂ ### ##### #####

About the author

Adyot

Leave a Comment