ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಹಾಗೂ ಕಾರವಾರಕ್ಕೆ ಸೋಮವಾರ ಮುಜರಾಯಿ,ಮೀನುಗಾರಿಕಾ ಮತ್ತು ಬಂದರು ಸಚೀವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ಪೂಜಾರಿ,ಸೋಮವಾರದಿಂದ ಮುಜರಾಯಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.ಕೇಂದ್ರಸರಕಾರದ ಮಾರ್ಗಸೂಚಿ ಹಾಗೂ ರಾಜ್ಯಸರಕಾರದ ಅನುಮೋದನೆಯೊಂದಿಗೆ ದೇವಸ್ಥಾನವನ್ನು ತೆರೆಯಲಾಗುತ್ತಿದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಕೆಲವು ನಿಯಮಗಳನ್ನು ಅನುಸರಿಸಿ ದರ್ಶನಪಡೆಯಬಹುದಾಗಿದೆ ಎಂದು ಹೇಳಿದರು.
ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬದ್ಧವಾಗಿದ್ದು,2016-17,17-18,18-19ನೇ ಸಾಲಿನ ಉಳಿತಾಯ ಪರಿಹಾರ ಯೋಜನೆಯ ಕೇಂದ್ರ ಸರಕಾರದ ಪಾಲು 500ಕೋಟಿರೂ.ಬಿಡುಗಡೆಯಾಗಿದೆ ರಾಜ್ಯ ಸರಕಾರವು ಶನಿವಾರ ಇಷ್ಟೆ ಮೊತ್ತವನ್ನು ಬಿಡುಗಡೆ ಮಾಡಿದ್ದು ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಪೂಜಾರಿ ಹೇಳಿದರು
ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಕಡಲು ಕೊರೆತ ಪ್ರದೇಶಕ್ಕೆ ಶಾಸಕಿ ರೂಪಾಲಿ ನಾಯ್ಕ ಜೊತೆ ಭೇಟಿ ನೀಡಿ ಪರಿಶೀಲಿಸಿದ ಸಚೀವರು ಸಾರ್ವಜನಿಕರು ನೀಡಿದ ಮನವಿಯನ್ನು ಸ್ವೀಕರಿಸಿದರು.
ಶಾಸಕಿ ರೂಪಾಲಿ ನಾಯ್ಕ ಪ್ರಸ್ತಾಪದ ಮೇರೆಗೆ ಗಾಬಿತಕೇಣಿಯ 5.50ಕೋಟಿರೂ.ವೆಚ್ಚದ ಅಲೆತಡೆಗೋಡೆ ನಿರ್ಮಾಣದ ಕಾಮಗಾರಿಯೂ ಸೇರಿದಂತೆ 17.50ಕೋಟಿ.ರೂ.ಕಾಮಗಾರಿಗೆ ಮೀನುಗಾರಿಕಾ ಇಲಾಖೆಯಿಂದ ಮಂಜೂರಾತಿ ಆದೇಶ ನೀಡಲಾಗಿದೆ.140ಕೋಟಿರೂ.ವೆಚ್ಚದಲ್ಲಿ ಬೆಳಂಬಾರದಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣದ ಪ್ರಸ್ತಾಪವನ್ನು ಸಚೀವ ಸಂಪುಟದ ಗಮನಕ್ಕೆ ತಂದು ಅನುಮೋದನೆ ಪಡೆಯಲಾಗುವುದು ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು
ಶಾಸಕಿ ರೂಪಾಲಿ ನಾಯ್ಕ,ಜಿಪಂ ಸದಸ್ಯ ಜಗದೀಶ ನಾಯಕ,ಮೀನುಗಾರರ ಸಹಕಾರಿ ಸಂಘ ಪೆಡರೇಷನ್ ಅಧ್ಯಕ್ಷ ಗಣಪತಿ ಮಾಂಗ್ರೆ ಮುಂತಾದವರು ಉಪಸ್ಥಿತರಿದ್ದರು.