ಕಾರವಾರದಲ್ಲಿ ಶ್ರೀರಾಮುಲು ಕೊವಿಡ್ ನಿಯಂತ್ರಣದ ಕುರಿತು ಸಭೆ ನಡೆಸಿದರು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಆರೋಗ್ಯ ಸಚೀವ ಶ್ರೀರಾಮುಲು
ಕೊವಿಡ್19 ನಿಯಂತ್ರಣದ ಕ್ರಮದ ಬಗ್ಗೆ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ,
ಜಿಲ್ಲಾಧಿಕಾರಿ ಡಾ.ಹರೀಶಕುಮಾರ,ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್,
ಜಿಲ್ಲಾರೋಗ್ಯಾಧಿಕಾರಿ ಶರದ ನಾಯಕ,ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀತಾಮುಲು,ರಾಜ್ಯಸಭೆಗೆ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರನ್ನ ಆಯ್ಕೆ ಮಾಡಿ ಕೆಳಹಂತದ ಕಾರ್ಯಕರ್ತತರನ್ನ ಗುರುತಿಸಿದ್ದು ಕುಷಿ ತಂದಿದೆ. ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈ ಆಯ್ಕೆ ನಡೆದಿದ್ದು ಇಲ್ಲಿ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಅವರು ಸಣ್ಣ ಮಟ್ಟದ ಕಾರ್ಯಕರ್ತರನ್ನು ಗುರುತಸಿ ಸ್ಥಾನಮಾನ ನೀಡುವುದು ಬಿಜೆಪಿಯಲ್ಲಿ ಮಾತ್ರ, ಇವರಿಬ್ಬರ ಆಯ್ಕೆ ಬೂತ್ ಮಟ್ಟದ ಕಾರ್ಯಕರ್ತರಿಗೆ ಖುಷಿ ನೀಡಿದೆ. ಆಯ್ಕೆ ವಿಚಾರದಲ್ಲಿ ಬಿಎಸ್ ವೈ ಹಾಗೂ ನಳಿನ್ ಕುಮಾರ್ ಕಟೀಲ್ ಅವರು ಕೆಲವು ಸಲಹೆ ಸೂಚನೆ ನೀಡಿದ್ರು. ಆದರೆ ಅಂತಿಮವಾಗಿ ಹೈ‌ಕಮಾಂಡ್ ಇವರಿಬ್ಬರನ್ನು ನೇಮಿಸಿದೆ. ಹೈಕಮಾಂಡ್ ಆದೇಶಕ್ಕೆ ನಾವೆಲ್ಲಾ ತಲೆ ಭಾಗಬೇಕು ಎಂದರು.

ಇನ್ನು ಪಕ್ಷದಲ್ಲಿ ಕೆಲವರು ಆಕಾಂಕ್ಷಿಗಳು ಇದ್ದದ್ದು ನಿಜ. ರಮೇಶ್ ಕತ್ತಿ ಹಾಗೂ ಪ್ರಭಾಕರ ಕೋರೆಯನ್ನು ಪಕ್ಷ ಕಡೆಗಣಿಸಿಲ್ಲ. ಸಮಯ ಬಂದಾಗ ಎಲ್ಲರಿಗೂ ಅವಕಾಶ ಸಿಕ್ಕೇ ಸಿಗುತ್ತದೆ ಎಂದರು.
ಮೆಡಿಕಲ್ ಕಾಲೇಜ್ ಪರಿಶೀಲನೆ ಮಾಡುವ ಸಂದರ್ಭದಲ್ಲಿ
ಮಾಜಿ ಶಾಸಕ ಸತೀಶ ಸೈಲ್,ಶ್ರೀರಾಮುಲುರವರನ್ನು ಭೇಟಿ ಮಾಡಿ,ಗೋವಾ ರಾಜ್ಯಕ್ಕೆ ಕೆಲಸಕ್ಕೆ ಹೋಗುವ ಕೆಲಸಗಾರರ ಗಂಟಲು ದೃವವನ್ನು ಪರೀಕ್ಷೆ ಮಾಡಿಸಲು ಗೋವಾ ರಾಜ್ಯದಲ್ಲಿ ಪ್ರತಿಯೊಬ್ಬರಿಂದ 2000 ರೂಗಳನ್ನು ಪಡೆದುಕೊಳ್ಳುಲಾಗುತ್ತಿದೆ
ಆದ ಕಾರಣ ನಮ್ಮ ಜಿಲ್ಲಾ ಮೆಡಿಕಲ್ ಕಾಲೇಜ ಆಸ್ಪತ್ರೆ ಮಾನ್ಯತೆ ಪಡೆದಿದೆ ಇಲ್ಲಿಯೇ ಗಂಟಲು ದೃವವನ್ನು ಪರೀಕ್ಷೆ ಮಾಡಬೇಕಾಗಿ ಮನವಿ ನೀಡಿದರು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಹುಲ್ ರಾಮನಾಥ ನಾಯ್ಕ ಜಿಲ್ಲಾ ಸರ್ಜನ ಕಳೆದ 10 ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಅವರನ್ನು ವರ್ಗಾವಣೆ ಮಾಡಬೇಕಾಗಿ ಮನವಿ ನೀಡಿದರು.

About the author

Adyot

Leave a Comment