ಆದ್ಯೋತ್ ಸುದ್ಸಿನಿಧಿ:
ಹಾಲಿ ವಿಧಾನಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ,ಜಯಮ್ಮ,ಎಂ.ಸಿ.ವೇಣುಗೋಪಾಲ,ಎನ್.ಎಸ್.ಬೋಸರಾಜು,ಎಚ್.ಎಂ.ರೇವಣ್ಣ,ಟಿ.ಎ.ಶರವಣನ್,ಡಿ.ಯು.ಮಲ್ಲಿಕಾರ್ಜುನ,ಈ ಏಳು ಸದಸ್ಯರ ಅವಧಿ ಜೂನ್30 ಕ್ಕೆ ಮುಗಿಯಲಿದ್ದು ಹೊಸ ಸದಸ್ಯರ ಆಯ್ಕೆಗಾಗಿ ಜೂ.29ರಂದು ಚುನಾವಣೆ ಘೋಷಿಸಲಾಗಿದೆ.
ಚುನಾವಣಾ ಆಯೋಗ ಜೂ.11ರಂದು ಅಧಿಸೂಚನೆ ಹೊರಡಿಸಲಿದ್ದು,ಜೂ.18ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ,ಜೂ.19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಜೂ.22 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆದಿನವಾಗಿರುತ್ತದೆ
ಜೂ.29 ಸೋಮವಾರ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಸಂಜೆ 5 ರಿಂದ ಮತ ಏಣಿಕೆ ನಡೆಯಲಿದ್ದು ಅದೇ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ.ಎಂದು ಚುನಾವಣಾ ಆಯೋಗ ತಿಳಿಸಿದೆ.
ಮುಕ್ತ ಹಾಗೂ ನ್ಯಾಯಯುತವಾದ ಚುನಾವಣೆ ನಡೆಸಲು ಚುನಾವಣಾ ಆಯೋಗ ವಿಕ್ಷಕರನ್ನು ನಿಯಮಿಸಲಾಗುವುದು.
ಕೊವಿಡ್ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಹಿರಿಯ ಅಧಿಕಾರಿಯನ್ನು ನಿಯಮಿಸುವಂತೆ ರಾಜ್ಯಸರಕಾರಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಇದೇ ಸಂದರ್ಭದಲ್ಲಿ ಪದವೀಧರರ ಕ್ಷೇತ್ರದ 2 ಸ್ಥಾನಕ್ಕೆ ಹಾಗೂ ಶಿಕ್ಷಕರ ಕ್ಷೇತ್ರದ 2 ಸ್ಥಾನಕ್ಕೆ ನಡೆಯಬೇಕಾಗಿದ್ದ ಚುನಾವಣೆಯನ್ನು ಕೊವಿಡ್ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮುಂದೂಡಿದೆ.