ಸ್ಪೀಕರ್ ಕಾಗೇರಿಯವರಿಂದ ದಿನಸಿ ಕಿಟ್ ವಿತರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಕೋಲಸಿರ್ಸಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕೊವಿಡ್ಸೋಂಕಿನ ಲಾಕಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಪರಿಶಿಷ್ಟ ಜಾತಿಯ ಹಾಗೂ ಇತರೆ ಬಡವರಿಗೆ ದಿನ ಬಳಕೆಯ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ವಿತರಿಸಿದರು.

ಹಲಗಡಿಕೊಪ್ಪ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೇರಿ, ಕರೊನಾ ಸೋಂಕಿನ ಜೊತೆ ಜೊತೆಗೆ ನಾವು ಇರಬೇಕಾಗಿದೆ ಕಾರಣ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳೊಂದಿಗೆ ಎಚ್ಚರಿಕೆಯಿಂದರಬೇಕು, ಸಾರ್ಜನಿಕ ಅಂತರವನ್ನು ಕಾಯ್ದುಕೊಳ್ಳುವುದು,ಮುಖಕ್ಕೆ ಮಾಸ್ಕ ಹಾಕಿಕೊಳ್ಳುವುದು,ಅವಶ್ಯಕತೆ ಇದ್ದರೆ‌ ಮಾತ್ರ ಹೊರಗಡೆ ಬರುವುದು ಅನಾವಶಕ ತಿರುಗಾಡುವುದನ್ನು ನಿಲ್ಲಿಸುವುದು, ಕಾಲಕಾಲಕ್ಕೆ ಕೈಗಳನ್ನು ಸ್ವಚ್ಚಗೊಳಿಸುವುದು,ಅನಾರೋಗ್ಯ ಉಂಟಾದರೆ ತಕ್ಷಣ ಸರಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಇತ್ಯಾದಿಗಳನ್ನು ಮಾಡುವುದರ ಮೂಲಕ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕುಸರಕಾರಿ ಆಸ್ಪತ್ರೆಯಲ್ಲಿ ಈ ಕುರಿತು ಎಲ್ಲ ವ್ಯವಸ್ಥೆ ಯನ್ನು ಮಾಡಲಾಗಿದ್ದು ಸಾರ್ವಜನಿಕರು ಈ ಕುರಿತು ಭಯಪಡಬೇಕಾಗಿಲ್ಲ ಆದರೆ ಎಲ್ಲರೂ ಕಡ್ಡಾಯವಾಗಿ ಸೋಂಕಿನ ಕುರಿತು ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.

ಅಲ್ಲದೆ ಕೋಲಸಿರ್ಸಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲಗಡಿಕೊಪ್ಪ ಊರೊಳಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ರು.10.00 ಲಕ್ಷಗಳು, ಕುಣಜಿ ಹಾನಂಬಿ ರಸ್ತೆ ಕಾಮಗಾರಿ ರೂ.10.00 ಲಕ್ಷಗಳು, ಕಲಕೊಪ್ಪ ಊರೊಳಗಿನ ರಸ್ತೆ ರೂ.5.00 ಲಕ್ಷಗಳು, ರಾಜೀವ ಗಾಂಧಿ ಸೇವಾ ಕೇಂದ್ರ ರೂ.18.25 ಲಕ್ಷಗಳು, ಕುಣಜಿ ಕುಡಿಯುವ ನೀರಿನ ಕಾಮಗಾರಿ ರೂ.8.00 ಲಕ್ಷಗಳ ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಸ್ಥಾಯಿ ಸಮೀತಿ ಅಧ್ಯಕ್ಷ ಮಾಬ್ಲೇಶ್ವರ ಹೆಗಡೆ, ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಧನಂಜಯ ಗೌಡರ್, ತಹಶಿಲ್ದಾರ ಮಂಜುಳಾ ಭಂಜತ್ರಿ, ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ರಾವ್, ಸಹಾಯಕ ಇಂಜಿನೀಯರ ಜಯಪ್ರಕಾಶ, ಸಿಪಿಐ ಪ್ರಕಾಶ, ಗ್ರಾಪಂ ಉಪಾಧ್ಯಕ್ಷ ವಿನಾಯಕ ಕೆ. ಆರ್., ಗ್ರಾ.ಪಂ.ಸದಸ್ಯರಾದ ನಾರಾಯಣ ನಾಯ್ಕ, ಪ್ರಶಾಂತ ಗೌಡರ್, ಯಶೋಧಾ ನಾಯ್ಕ , ಪ್ರಮುಖರಾದ ಪ್ರಸನ್ನ ಹೆಗಡೆ, ಗೋಪಾಲ ನಾಯ್ಕ,ಮಾದೇವ ನಾಯ್ಕ, ಶ್ರೀ ಆಂಜನೇಯ ದೇವಾಲಯದ ಅಧ್ಯಕ್ಷರಾದ ವೆಂಕಟೇಶ ರಾಮಾ ಕಾಂತು, ಊರಿನ ಗಣ್ಯರು, ಆಶಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಪಿಡಿಒ ಸುಬ್ರಮಣ್ಯ ಹೆಗಡೆಯವರು ಸ್ವಾಗತಿಸಿ ವಂದನಾರ್ಪಣೆ ಮಾಡಿದರು

About the author

Adyot

Leave a Comment