ಆದ್ಯೋತ್ ಸುದ್ದಿನಿಧಿ:
ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರಕಾರದ ಕ್ರಮ ಖಂಡನೀಯವಾಗಿದೆ ಎಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಪಂ ಸದಸ್ಯ ನಾಸೀರ್ ವಲ್ಲಿಖಾನ್ ಹೇಳಿದ್ದಾರೆ.
ಅವರು ಆದ್ಯೋತ್ ನ್ಯೂಸ್ ಜೊತೆ ಮಾತನಾಡಿ,ದಿ.ದೇವರಾಜ ಅರಸು ಜಾರಿಗೆ ತಂದಿದ್ದ ಭೂಸುಧಾರಣೆ ಕಾಯ್ದೆಯಿಂದ ಲಕ್ಷಾಂತರ ಜನರು ಭೂ ಮಾಲಿಕರಾಗಲು ಸಾಧ್ಯವಾಯಿತು.ಭೂಮಾಲಿಕರ ಜೀತದಾಳಾಗಿ ಶೋಷಣೆಗೆ ಒಳಗಾಗುತ್ತಿದ್ದವರು ಭೂ ಒಡೆಯರಾಗುವ ಮೂಲಕ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು ಇಂತಹ ಐತಿಹಾಸಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಉಳ್ಳವರಿಗೆ ಭೂಮಿ ಕೊಡಿಸುವ ಕೆಲಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಮುಂದಾಗಿದೆ ಸರಕಾರದ ಈ ನಡೆಯನ್ನು ರಾಜ್ಯದ ಜನತೆ ಪ್ರತಿಭಟಿಸಬೇಕು ಎಂದು ನಾಸೀರ್ ಖಾನ್ ಹೇಳಿದ್ದಾರೆ.
——
ಕರ್ನಾಟಕ ರಣಧೀರಪಡೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ನಾಯ್ಕ ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
“ಮೂಗಿನ ಮಟ್ಟ ಮುಳುಗಿರುವ ರೈತರನ್ನು ತಲೆ ಪೂರ್ತಿ ಮುಳುಗಿಸಲುಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹೊರಟಿದೆ.
1974 ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸ ಹಲವರ ವಿರೋಧದ ನಡುವೆಯೂ ಭೂ ಸುಧಾರಣೆ ಕಾಯಿದೆ ತಂದು ಆ ಮೂಲಕ ಊಳುವವನೇ ಭೂಮಿಯ ಒಡೆಯ ಎಂದು ಸಾರಿದ್ದರು ಕೃಷಿ ಭೂಮಿ ಪರಭಾರೆ ಮಾಡಲು ಒಂದಿಷ್ಟು ಅಂಶಗಳನ್ನು ಸೇರಿಸುವ ಮೂಲಕ ರೈತರು ಹಾಗು ಕೊಳ್ಳುವವರ ನಡುವೆ ಒಂದು ತಡೆಗೊಡೆ ನಿರ್ಮಾಣ ಮಾಡಿದ್ದರು
2019 ರಲ್ಲಿ ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಭಾರತೀಯ ಜನತಾಪಕ್ಷ ಇಡಿ ಪ್ರಪಂಚ ಕೊರೋನಾ ಎಂಬ ಮಹಾಮಾರಿಯ ಕೆನ್ನಾಲಿಗೆಗೆ ಸಿಕ್ಕಿ ನಲುಗುತ್ತಿರುವ ಕಾಲಘಟ್ಟದಲ್ಲಿ ಕಾರ್ಪೋರೇಶನ್ ವ್ಯಾಪ್ತಿಯ ಕಾರ್ನರ್ ಸೈಟುಗಳ ಮಾರಾಟಕ್ಕೆ ಆದೇಶ ಮಾಡಿತು ಜನರೆಲ್ಲಾ ಮನೆಯೊಳಗೆ ಅಡಗಿದ್ದಾಗ ಮಾರುವ ಪ್ರಯತ್ನ ಮಾಡಿತು ಜನರಿಗೆ ಇವರ ಷಡ್ಯಂತ್ರ ಅರ್ಥವಾದರು ಸಹ ಸುಮ್ಮನಾದರು,
ಈಗ ಅದೇ ಮಾದರಿಯಲ್ಲಿ 1974 ರ ಭೂ ಸುಧಾರಣೆ ಕಾಯಿದೆಯಿಂದ ರೈತರ ಪಾಲಿಗೆ ರಕ್ಷಾ ಕವಚವಾಗಿದ್ದ ಆರ್ಟಿಕಲ್ 79A 79B ರದ್ದತಿ ಮಾಡಲು ಮುಂದಾಗಿದ್ದಾರೆ.
ಈ ಕಾಯಿದೆ ರದ್ದತಿಯಿಂದಾಗಿ ಇನ್ನು ಮುಂದೆ ರೈತರ ಜಮೀನು ಕೊಳ್ಳುವವ ರೈತನೇ ಆಗಿರಬೇಕು ಎಂಬ ಕಾನೂನು ಕಡ್ಡಾಯವಲ್ಲ ಯಾರು ಬೇಕಾದರೂ ಭೂಮಿ ಖರಿದಿಸಬಹುದು ಐದು ಸದಸ್ಯರಿರುವ ಕುಟುಂಬ 108 ಎಕ್ಕರೆ ಜಮೀನು ಖರೀದಿಸಲು ಯಾವುದೇ ಅಡ್ಡಿಯಿಲ್ಲ ಎಂಬುದಾಗಿರುತ್ತದೆ.
ಕಂದಾಯ ಮಂತ್ರಿ ಆರ್.ಅಶೋಕರವರಿಗೆ ಬಹುಶಃ ಅರಿವಿನ ಕೊರತೆಯಿದೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಹಿಡುವಳಿಯೆ ಇಲ್ಲವಾಗಿದೆ ಕಾರಣವಿಷ್ಟೇ ತಲೆಮಾರುಗಳಲ್ಲಿ ವಿಭಾಗವಾಗುತ್ತಿರುವ ಜಮೀನು ಸಣ್ಣ ಹಿಡುವಳಿಗಳಾಗಿ ಪರಿವರ್ತನೆಯಾಗುತ್ತಿದೆ.ಒಂದು ಐನೂರು ಮನೆ ಇರುವ ಗ್ರಾಮದ ಜಮೀನಿನ ಎಲ್ಲೆ ಹಾಗು ಸರ್ವೆ ನಂಬರ್ ಕೆಲವೇ ನೂರು ಎಕರೆಗಳಾಗಿರುತ್ತದೆ.
22 ಲಕ್ಷ ಹೆಕ್ಟೆರ್ ಕೃಷಿ ಭೂಮಿ ಪಾಳು ಬಿದ್ದಿದೆ ಹಾಗಾಗಿ ಈ ಕಾಯಿದೆ ತಿದ್ದುಪಡಿ ಮಾಡಿದರೆ ಅದು ಕ್ರಯವಾಗಿ ಕೃಷಿ ಚಟುವಟಿಕೆ ನಡೆಯುತ್ತದೆ ಎಂಬ ತೀರ ಬಾಲಿಶ ಕಾರಣವನ್ನು ಕಂದಾಯ ಸಚೀವರು ನೀಡಿದ್ದಾರೆ. ರೈತ ಏಕೆ ತನ್ನ ಜಮೀನು ಪಾಳು ಬಿಟ್ಟು ಎಂಟತ್ತು ಸಾವಿರಕ್ಕೆ ಸೆಕ್ಯುರಿಟಿ ಗಾರ್ಡ್ ಕೆಲ್ಸ ಮಾಡ್ತಾರೆ ಎಂದರೆ, ಕೃಷಿ ಕಾರ್ಮಿಕರ ಕೊರತೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲ, ಫಲ ಸಂಗ್ರಹಿಸಲು ಶೈತ್ಯಾಗಾರಗಳ ಕೊರತೆ,ವೈಜ್ಞಾನಿಕ ಕೃಷಿ ಮಾಡಲು ಸಣ್ಣ ಹಿಡುವಳಿದಾರರಿಗೆ ಆಗದು,ಸೂಕ್ತ ಮಾರುಕಟ್ಟೆ ಇಲ್ಲ.ಇಂತಹ ಹತ್ತು ಹಲವು ಕಾರಣಗಳಿಂದಾಗಿ ಇಂದು ಕೆಲವು ರೈತರು ಕೃಷಿಯಿಂದ ಹಿಮ್ಮುಖರಾಗುತ್ತಿದ್ದಾರೆ ಅಷ್ಟೇ ಹೊರತು ಕೃಷಿ ಮಾಡಲಾರದ ಹೇಡಿಗಳಾಗೀ ಅಲ್ಲ, ಇರುವ ಕೃಷಿ ಭೂಮಿಯನ್ನು ಸದ್ಬಳಕೆ ಮಾಡಲು ಎಕ್ಕರೆಗೆ ಇಂತಿಷ್ಟು ಅಂತ ಸಂಬಳ ಕೊಟ್ಟು ಸೂಕ್ತ ಮಾರುಕಟ್ಟೆ ನಿರ್ಮಾಣ ಮಾಡಿ, ಬೆಂಬಲ ಬೆಲೆ ಕೊಟ್ಟಲ್ಲಿ 22ಲಕ್ಷ ಹೆಕ್ಟರ್ ಕೂಡ ಸಂಪೂರ್ಣವಾಗಿ ಕೃಷಿ ಚಟುವಟಿಕೆಗೆ ಅಣಿಯಾಗುತ್ತವೆ
ಒಮ್ಮೆ ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾದ ಯಡಿಯೂರಪ್ಪ ಗೋಲೀಬಾರ್ ಮಾಡಿಸಿದ್ರು ಸತ್ತವ ಒಬ್ಬ ರೈತನಾಗಿದ್ದ ಅದೇ ಹಸಿರು ಶಾಲು ಹತ್ತು ವರ್ಷದ ನಂತರ ಹೊದ್ದು ಪ್ರಮಾಣ ಸ್ವೀಕರಿಸಿದ ಯಡಿಯೂರಪ್ಪ ಈಗ ರೈತ ಸಂಕುಲಕ್ಕೆ ಗೋಲಿಬಾರ್ ಮಾಡಲು ಹೊರಟಿರುವುದು ಒಕ್ಕಲುತನ ಮಾಡುವ ಮಾಡಿರುವ ಮಾಡಿದ ಕುಟುಂಬದ ಪೀಳಿಗೆಯ ಎಲ್ಲರೂ ಆಲೋಚಿಸಲೇಬೇಕಾದ ಅಂಶವಾಗಿದೆ.
ರೈತರು ಇಂತಹ ರೈತ ನಾಶದ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡುವಂತೆ ಆಗ್ರಹಿಸಿ ಹೋರಾಟ ಮಾಡಬೇಕು”ಎಂದು ಹೇಳಿದ್ದಾರೆ.