ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ
ಶುಕ್ರವಾರ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ಮಂಜುನಾಥ ಭಂಡಾರಿ ಸುದ್ದಿಗೋಷ್ಠಿ ನಡೆಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ, ಯುವ ಕಾಂಗ್ರೆಸ್ ನ ಸಕ್ರೀಯ ಸದಸ್ಯನಾಗಿ ಕಾರ್ಯಕರ್ತರ ಮನಸ್ಸನ್ನು ಗೆದ್ದ ಡಿ.ಕೆ.ಶಿವಕುಮಾರ ಅವರನ್ನು ನಮ್ಮ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಕೆ.ಪಿ.ಸಿ.ಸಿಯ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ
ಪಕ್ಷದ ಕಾರ್ಯಕರ್ತರ ನಾಡಿ ಮಿಡಿತ ಅರಿತ ಡಿಕೆಶಿ ತನ್ನದೇ ರೀತಿಯಲ್ಲಿ ಪದಗ್ರಹಣ ಮಾಡಬೇಕೆಂದು ಜುಲೈ 2 ರಂದು ಪದಗ್ರಹಣ ಕಾರ್ಯಕ್ರಮ ಹಾಗೂ ಪ್ರತಿಜ್ಞಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಯದಲ್ಲಿ 15 ಲಕ್ಷ ಕಾರ್ಯಕರ್ತರು ಪಕ್ಷ ಕಟ್ಟುತ್ತೇವೆ ಎಂದು ಪ್ರತಿಜ್ಞೆ ಮಾಡಲಿದ್ದಾರೆ. ಪ್ರತಿ ಹಳ್ಳಿ, ಬೂತ್ ಮಟ್ಟದಲ್ಲಿ ಎಲ್ಲರೂ ಈ ಕಾರ್ಯಕ್ರಮ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಿದ್ದೆವೆ. ಪಕ್ಷದ ಕಾರ್ಯಕರ್ತನ ಧ್ವನಿಯೇ ರಾಜಾಧ್ಯಕ್ಷರ ಧ್ವನಿಯಾಗಿರುತ್ತದೆ. ಕಾರ್ಯಕರ್ತರ ಸಂಪೂರ್ಣ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ಕಾಂಗ್ರೇಸ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ಸುಷ್ಮಾ ರಾಜಗೋಪಾಲ ರೆಡ್ಡಿ, ರಾಜನಂದಿನಿ ಕಾಗೋಡ, ವೆರೋನಿಕಾ, ಶಾರದಾ ಶೆಟ್ಟಿ (ಮಾಜಿ ಶಾಸಕರು) ಹಾಗೂ ವಿ.ಎಸ್.ಆರಾಧ್ಯ ಇದ್ದರು.