ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಆರ್ಭಟ ಹೆಚ್ಚಾಗಿದ್ದು
ಸೋಮವಾರ ಬೆಂಗಳೂರಿನಿಂದ ಆಗಮಿಸಿದ್ದ ಶಿರಸಿ ತಾಲೂಕಿನ ಕಾನಗೋಡು ಗ್ರಾಪಂ ವ್ಯಾಪ್ತಿಯ ಬಾಳಗಾರನ 42 ವರ್ಷದ ವ್ಯಕ್ತಿ ಕೊವಿಡ್ ನಿಂದಾಗಿ ಮರಣ ಹೊಂದಿದ್ದಾನೆ.
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಜು.4 ರಂದು ಬೆಂಗಳೂರಿನಿಂದ ಆಗಮಿಸಿದ್ದು ಆರೋಗ್ಯ ತೊಂದರೆಯಿಂದಾಗಿ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಗೆ ದಾಖಲಾಗಿರುತ್ತಾನೆ ಜು 5 ರಂದು ಈತನಿಗೆ ಗಂಟಲು ದ್ರವಪರೀಕ್ಷೆಯನ್ನು ಟ್ರೂನಟ್ ಮಷಿನ್ ನಿಂದ ಪರೀಕ್ಷೆಗೆ ಒಳಪಡಿಸಿದಾಗ ಕೊವಿಡ್ ಇರುವುದು ಖಚಿತವಾಗಿದೆ.ಜು 6 ಸೋಮವಾರ ಬೆಳಿಗ್ಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಲ್ಲಿಯೂ ಕೊವಿಡ್ ಇರುವುದು ದೃಢಪಟ್ಟಿದ್ದು ಚಿಕಿತ್ಸೆಗೆ ಕಾರವಾರಕ್ಕೆ ಕಳುಹಿಸಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ 3-30ರ ಸುಮಾರಿಗೆ ವ್ಯಕ್ತಿ ಮರಣ ಹೊಂದಿದ್ದಾನೆ
ಈಗಾಗಲೇ ಯಲ್ಲಾಪುರದ ವೃದ್ಧೆಯೊಬ್ಬರು ಕೊವಿಡ್ ನಿಂದ ಮತಣ ಹೊಂದಿದ್ದು ಜಿಲ್ಲೆಯಲ್ಲಿ ಕೊವಿಡ್ ನಿಂದ ಮರಣ ಹೊಂದಿದವರ ಸಂಖ್ಯೆ ಎರಡಕ್ಕೆ ಏರಿದೆ
ಸೋಮವಾರ ಒಂದೇದಿನ 77 ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 435 ಕೊವಿಡ್ ಪ್ರಕರಣಗಳು ದಾಖಲಾಗಿವೆ.
ಬೇರೆ ಬೇರೆ ಜಿಲ್ಲೆಯಿಂದ ಬಂದವರಲ್ಲಿ ಅದರಲ್ಲೂ ಬೆಂಗಳೂರಿನಿಂದ ಬಂದವರಲ್ಲಿ ಕೊವಿಡ್ ಕಾಣಿಸಿಕೊಳ್ಳುತ್ತಿದೆ.
ಅದು ಸಮುದಾಯಕ್ಕೂ ಹರಡುವ ಅಪಾಯವಿದೆ.
ಜಿಲ್ಲೆಯ ಕೆಲವು ತಾಲೂಕಿನಲ್ಲಿ ಜನರು ಸ್ವಯಂ ಲಾಕ್ ಡೌನ್ ವಿಧಿಸಿಕೊಂಡಿದ್ದಾರೆ.
ಬೇರೆ ಜಿಲ್ಲೆಯಿಂದ ಮೂರು ದಿನಕ್ಕಿಂತ ಹೆಚ್ಚು ದಿನ ಜಿಲ್ಲೆಯಲ್ಲಿ
ವಾಸ್ತವ್ಯ ಹೂಡುವವರು ಕಡ್ಡಾಯವಾಗಿ ಬಂದ ದಿನವೇ ಜ್ವರ ಕ್ಲಿನಿಕ್ ಗೆ ತೆರಳಿ ವೈದ್ಯಕೀಯ ತಪಾಸಣೆಗೆ ಒಳಪಡಬೇಕು ಇಲ್ಲವಾದಲ್ಲಿ ವಿಪ್ಪತ್ತು ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸ ಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕೊವಿಡ್ ಜನರನ್ನು ಭಯಭೀತರನ್ನಾಗಿ ಮಾಡುತ್ತಿದ್ದು ಕೊವಿಡ್ ನಿಂದ ಸತ್ತ ಶಿರಸಿಯ ವ್ಯಕ್ತಿಯ ಶವ ಸಂಸ್ಕಾರಕ್ಕೂ ಕಾರವಾರದಲ್ಲಿ ಅಡ್ಡಿಪಡಿಸಲಾಗುತ್ತಿದೆ.ಸ್ಥಳೀಯರು ಅಧಿಕಾರಿಗಳ ಜೊತೆಗೆ ವಾಗ್ವಾದ ಮಾಡುತ್ತಿದ್ದಾರೆ.
ಕೊವಿಡ್ ನಿಂದ ಸತ್ತರೆ ಗೌರವಯುತವಾದ ಸಂಸ್ಕಾರವೂ ಸಿಗುತ್ತಿಲ್ಲ ಈಗಾಲಾದರೂ ಜನರು ಎಚ್ಚೆತ್ತು ಕೊವಿಡ್ ಬರದಂತೆ
ಸುರಕ್ಷಿತವಾಗಿರುವುದನ್ನು ರೂಢಿಸಿಕೊಳ್ಳುವುದು ಉತ್ತಮ.