ಸಿದ್ದಾಪುರ ಸರಕಾರಿ ಆಸ್ಪತ್ರೆ ಒಪಿಡಿ ಬಂದ್,ಹೊಸೂರು ,ಗುಂಜಗೋಡನ ಕೆಲವು ಭಾಗ ಸೀಲ್ ಡೌನ್

ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸರಕಾರಿ ವೈದ್ಯರೂ ಸೇರಿದಂತೆ ಜಿಲ್ಲೆಯಲ್ಲಿ 23 ಕೊವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಸಿದ್ದಾಪುರ ಪಟ್ಟಣದ ಹೊಸೂರು ಎಲ್.ಬಿ.ನಗರದ ಕೆಲವು ಭಾಗವನ್ನು ಹಾಗೂ ಗುಂಜಗೋಡನ ಮೂರು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಸಿದ್ದಾಪುರ ಆಸ್ಪತ್ರೆಯ ಆಡಳಿತಾಧಿಕಾರಿಯೂ ಆಗಿರುವ ವೈದ್ಯರು ಶಿರಾಳಕೊಪ್ಪದಿಂದ ಓಡಾಡುತ್ತಿದ್ದು ಅವರ ಸಹಾಯಕರು ಶಿರಸಿಯಿಂದ ಓಡಾಡುತ್ತಿದ್ದರು ಆದರೆ ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಹಾಗೂ ಅಲ್ಲಿ ಬಂದು ಹೋಗಿದ್ದ ರೋಗಿಗಳು ಆತಂಕ ಪಡುವಂತಾಗಿದೆ
ಅಲ್ಲದೆ ಇದೇ ತಿಂಗಳ 4ನೇ ತಾರೀಖಿನಂದು ಕುಟುಂಬಯೋಜನೆ ಶಸ್ತ್ರಚಿಕಿತ್ಸೆಯ ಕ್ಯಾಂಪ್ ನಡೆದಿದೆ ಒಟ್ಟೂ ಹತ್ತು ಮಹಿಳೆಯರಿಗೆ ಅಪರೇಷನ್ ನಡೆದಿದ್ದು ಆ ದಿನ ಈ ವೈದ್ಯರು ಕರ್ತವ್ಯದಲ್ಲಿದ್ದರು. ಇದರಿಂದ ಮಹಿಳೆ ಸೇರಿದಂತೆ,ಅವರ ಜೊತೆ ಇರುವ ಶಿಶು,ಅವರ ಜೊತೆಗೆ ಬಂದವರೂ ಸೇರಿದಂತೆ ಎಲ್ಲರೂ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಆರೋಗ್ಯ ಸಹಾಯಕಿಯರು,ಆಶಾ ಕಾರ್ಯಕರ್ತೆಯರು ಈ ಕ್ಯಾಂಪ್‍ನಲ್ಲಿ ಭಾಗವಹಿಸಿದ್ದು ಅವರೆಲ್ಲರ ಗಂಟಲು ದ್ರವ ಪರೀಕ್ಷೆ ನಡೆಸಬೇಕಾಗಿದೆ.

ತಾಲೂಕಿನ ಹೊಸೂರು ಎಲ್‍ಬಿನಗರದ ಇಬ್ಬರು ಯುವತಿಯರಿಗೆ ಹಾಗೂ ಗುಂಜಗೋಡನ ಯುವಕನೊಬ್ಬನಿಗೆ ಕೊವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದ್ದು ಅವರನ್ನು ಪಟ್ಟಣದ ಆಸ್ಪತ್ರೆಗೆ ಸೇರಿಸಿಲಾಗಿದೆ ನಾಳೆ ಕೊಂಡ್ಲಿ ಬಿಸಿಎಂ ಹಾಸ್ಟೆಲ್‍ನ ಕೊವಿಡ್ ಕೇರ್ ಕೇಂದ್ರದಲ್ಲಿ ಇಡಲಾಗುವುದು.ಈಗಾಗಲೇ ಪಟ್ಟಣದ ಹೊಸೂರು ಎಲ್.ಬಿ.ನಗರದ ಕೆಲವು ಭಾಗವನ್ನು ಕಂಟೋನ್ಮೆಂಟ್ ಝೊನ್ ಎಂದು ಪರಿಗಣಿಸಿ ಸಿಲ್‍ಡೌನ್ ಮಾಡಲಾಗಿದೆ ಅದರಂತೆ ಗುಂಜಗೋಡನ ಮೂರು ಮನೆಯ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ
ಈ ಭಾಗದ ಎಲ್ಲರ ಗಂಟಲುದ್ರವ ಪರೀಕ್ಷೆಯನ್ನು ಮಾಡಲಾಗುವುದು. ಆಸ್ಪತ್ರೆಯನ್ನು ಸೆನಿಟೈಸರ್ ಮಾಡಲಾಗಿದೆ ಗುರುವಾರ ಮತ್ತು ಶುಕ್ರವಾರ ಹೊರರೋಗಿಗಳ ವಿಭಾಗವನ್ನು ಮುಚ್ಚಲಾಗುವುದು ನಂತರ ಎಂದಿನಂತೆ ಕಾರ್ಯನಿರ್ವಹಸಲಾಗುವುದು ಎಂದು ತಹಸೀಲ್ದಾರ ಮಂಜುಳಾ ಭಜಂತ್ರಿ ತಿಳಿಸಿದ್ದಾರೆ.

ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರನ್ನು ತಡೆಯಬೇಕು
ಸಿದ್ದಾಪುರ ಪಟ್ಟಣಪಂಚಾಯತ್ ಸಭಾಭವನದಲ್ಲಿ ಗುರುವಾರ
ಕೊವಿಡ್ ನಿಯಂತ್ರಣದ ಕುರಿತು ಪಟ್ಟಣ ಪಂಚಾಯತ್ ಪ್ರತಿನಿಧಿಗಳ ಸಭೆ ನಡೆಯಿತು.

ಅಧ್ಯಕ್ಷತೆವಹಿಸಿದ್ದ ಪಪಂ ಆಡಳತಾಧಿಕಾರಿಯೂ ಆಗಿರುವ ತಹಸೀಲ್ದಾರ ಮಂಜುಳಾ ಭಜಂತ್ರಿ ಮಾತನಾಡಿ,ಮುಂದಿನ ದಿನಗಳಲ್ಲಿ ಕೊವಿಡ್ ಪ್ರಕರಣಗಳು ಇನ್ನಷ್ಟು ಹೆಚ್ಚಾಗಲಿದೆ ಕೊವಿಡ್ ಕೇರ್ ಕೇಂದ್ರವನ್ನು ಕೊಂಡ್ಲಿ ಬಿಸಿಎಂ ಹಾಸ್ಟೆಲ್ ನಲ್ಲಿ ಮಾಡಲಾಗಿದೆ ಕೊವಿಡ್ ಲಕ್ಷಣವಿಲ್ಲದೆ ಪಾಸಿಟೀವ್ ಬಂದವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು.ಕೊವಿಡ್ ಲಕ್ಷಣವಿದ್ದರೆ ಅಂತಹವರಿಗೆ ಆಸ್ಪತ್ರೆಯಲ್ಲಿಯೂ ರೋಗ ಲಕ್ಷಣ ಹೆಚ್ಚಾಗಿದ್ದರೆ ಅಂತಹವರಿಗೆ ಕಾರವಾರದ ಕೊವಿಡ್ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಕೊಂಡ್ಲಿಯಲ್ಲಿ ಕೊವಿಡ್ ಕೇರ್ ಕೇಂದ್ರ ಸ್ಥಾಪಿಸುತ್ತಿರುವುದರಿಂದ ಸ್ಥಳೀಯರು ಆತಂಕಪಡುತ್ತಿದ್ದಾರೆ ಎಂದು ಕೆಲವು ಸದಸ್ಯರು ಹೇಳಿದರು.
ಈ ಬಗ್ಗೆ ಯಾರೂ ಆತಂಕ ಪಡುವ ಕಾರಣವಿಲ್ಲ ಇಲ್ಲಿ ಸಾಕಷ್ಟು ಸುರಕ್ಷತೆ ಇದೆ ಹತ್ತಿರದಲ್ಲಿ ಜನವಸತಿ ಇಲ್ಲ ಅನಗತ್ಯ ಆತಂಕ ಬೇಡ ಎಂದು ಮಂಜುಳಾ ಭಜಂತ್ರಿ ಹೇಳಿದರು.
ರಸ್ತೆ ಬದಿಯಲ್ಲಿ ಕೆಲವರು ತರಕಾರಿ,ಹಣ್ಣುಗಳನ್ನು ಮಾರುತ್ತಿದ್ದಾರೆ
ಪಾಸ್ಟ್ ಪುಡ್ ಅಂಗಡಿಗಳು ರಾತ್ರಿ ಹತ್ತುಗಂಟೆಯವರೆಗೆ ತೆರೆದಿರುತ್ತಾರೆ ಇವನ್ನು ನಿಯಂತ್ರಿಸಬೇಕು ತರಕಾರಿ,ಹಣ್ಣುಗಳನ್ನು ತರಕಾರಿ ಮಾರುಕಟ್ಟೆಯಲ್ಲೆ ಮಾರುವಂತೆ ಮಾಡಬೇಕು,ಮಾಸ್ಕ್ ಹಾಕದವರಿಗೆ ದಂಡ ವಿಧಿಸಬೇಕು. ತಹಸೀಲ್ದಾರ ಅಧ್ಯಕ್ಷತೆಯಲ್ಲಿ
ಪಟ್ಟಣದ ವರ್ತಕರ ಸಭೆ ನಡೆಸಿ ಸ್ವಯಂಲಾಕ್ ಡೌನ್ ಮಾಡುವಂತೆ ಮಾಡಬೇಕು ಎಂದು ಸದಸ್ಯರು ಸೂಚಿಸಿದರು.
ಈ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ತಹಸೀಲ್ದಾರ ಭರವಸೆ ನೀಡಿದರು.
ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಪಟ್ಟಣಕ್ಕೆ ಬೇರೆ ಬೇರೆ ಜಿಲ್ಲೆಯಿಂದ ಆಗಮಿಸಿದವರ ಮಾಹಿತಿ ನೀಡಿದರು.ಅಲ್ಲದೆ ಮಾಸ್ಕ್ ಹಾಕದವರಿಗೆ,ಅಂತರ ಕಾಪಾಡಿಕೊಳ್ಳದಿದ್ದರೆ ದಂಡ ಹಾಕಲಾಗುವುದು ಎಂದು ಹೇಳಿದರು.

About the author

Adyot

Leave a Comment