ಸಿದ್ದಾಪುರದಲ್ಲಿ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದಾರೆ.
ರಾಜ್ಯಸರಕಾರಿ ನೌಕರರ ಸಂಘದಿಂದ ಮನವಿ
ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಸೀಲ್ದಾರ ಬಿ.ಕೆ.ಚಂದ್ರಮೌಳೇಶ್ವರರು ಕರ್ತವ್ಯದಲ್ಲಿದ್ದಾಗಲೆ ಹತ್ಯೆಗೈದಿರುವುದು ಖಂಡನೀಯವಾಗಿದೆ ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆನೀಡಬೇಕು ಹಾಗೂ ಆರೋಪಿಗೆ ಕಠೀಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ರಾಜ್ಯಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ರಾಜೇಶ ನಾಯ್ಕ ನೇತೃತ್ವದಲ್ಲಿ ತಹಸೀಲ್ದಾರ ಮಂಜುಳಾ ಭಜಂತ್ರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಇತ್ತೀಚಿನ ದಿನಗಳಲ್ಲಿ ಸರಕಾರಿ ನೌಕರರ ಮೇಲೆ ಹಲ್ಲೆ, ದೌರ್ಜನ್ಯಗಳು ಹೆಚ್ಚಾಗುತ್ತಿದೆ.ಅದರಲ್ಲೂ ಕ್ಷೇತ್ರ ಇಲಾಖೆಗಳಾದ ಕಂದಾಯ,ಭೂಮಾಪನ,ಗ್ರಾಮೀಣಾಭಿವೃದ್ಧಿಹಾಗೂ ಪಂಚಾಯತ್ ರಾಜ್,ಆರೋಗ್ಯ ಸೇರಿದಂತೆ ಹಲವುಇಲಾಖೆಗಳ ನೌಕರರ ಮೇಲೆ ಹಲ್ಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ.ಸರಕಾರ ಕೂಡಲೇ ನೌಕರರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು
ತಹಸೀಲ್ದಾರ ಹತ್ಯೆ ಆರೋಪಿಗೆ ಕಠೀಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಪ್ರಶಾಂತ ಜಿ.ಎಸ್.ರಾಜ್ಯಪರಿಷತ್ ಸದಸ್ಯ ಯಶವಂತ ಅಪ್ಪಿನಬೈಲ್,ಖಜಾಂಚಿ ತೇಜಸ್ವಿ ನಾಯ್ಕ,ಉಪಾಧ್ಯಕ್ಷ ಗಣಪತಿ ಐ ನಾಯ್ಕ,ಸಂಘಟನಾ ಕಾರ್ಯದರ್ಶಿ ಪರಶುರಾಮ ನಾಯ್ಕ,ಕ್ರೀಡಾ ಕಾರ್ಯದರ್ಶಿ ಹರೀಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಕಂದಾಯ ನೌಕರರ ಸಂಘದಿಂದ ಮನವಿ ಸಲ್ಲಿಕೆ

ಕಂದಾಯ ಇಲಾಖೆನೌಕರರ ಸಂಘದವರು ಬಿ.ಕೆ.ಚಂದ್ರಮೌಳಿಯವರ ಹತ್ಯೆಯನ್ನು ಖಂಡಿಸಿದ್ದಾರೆ.
ಈ ಕುರಿತು ತಹಸೀಲ್ದಾರ ಮಂಜುಳಾ ಭಜಂತ್ರಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕರ್ತವ್ಯನಿರತ ತಹಸೀಲ್ದಾರರನ್ನು ಹತ್ಯೆ ಮಾಡಿರುವ ಆರೋಪಿಗೆ ಕಠೀಣ ಶಿಕ್ಷೆಯನ್ನು ಶೀಘ್ರದಲ್ಲೆ ನೀಡಬೇಕು,ಮೃತರ ಕುಟುಂಬಕ್ಕೆ ಐವತ್ತು ಲಕ್ಷರೂ. ಪರಿಹಾರ ನೀಡಬೇಕು,ಕರ್ತವ್ಯ ನಿರ್ವಹಿಸಲು ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘದ ಅಧ್ಯಕ್ಷ ನಾಗರಾಜ ನಾಯ್ಕಡು,ಕಾರ್ಯದರ್ಶಿ ಡಿ.ಎಂ.ನಾಯ್ಕ ಸೇರಿದಂತೆ ಕಂದಾಯ ಇಲಾಖೆಯ ನೌಕರರು ಉಪಸ್ಥಿತರಿದ್ದರು.
ಆಶಾಕಾರ್ಯಕರ್ತೆಯರಿಂದ ಮನವಿ ಸಲ್ಲಿಕೆ

ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕಿನ ಆಶಾಕಾರ್ಯಕರ್ತೆಯರು ಶುಕ್ರವಾರ ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಹನ್ನೆರಡು ಸಾವಿರ ರೂ. ಗೌರವ ಧನ ನೀಡಬೇಕು ಕೊವಿಡ್
ಕರ್ತವ್ಯ ನಿರ್ವಹಿಸಲು ಅಗತ್ಯವಾದ ರಕ್ಷಣಾ ಸಾಮಗ್ರಿನೀಡಬೇಕು,ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಆಶಾ ಕಾರ್ಯಕರ್ತೆಗೆ ಪರಿಹಾರ ನೀಡಬೇಕು,ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು ಎಂದುಮನವಿಯಲ್ಲಿ ಆಗ್ರಹಿಸಲಾಗಿದೆ.

About the author

Adyot

Leave a Comment