ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಆಡುಕಟ್ಟಾ ಸಮೀಪ ಶನಿವಾರ ಸಂಜೆ ಪೈಪ್ ತುಂಬಿದ್ದ ಲಾರಿ ಪಲ್ಟಿಯಾಗಿದ್ದು ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.ಲಾರಿಯಲ್ಲಿದ್ದ ಕ್ಲೀನರ ಸಣ್ಣ-ಪುಟ್ಟ ಗಾಯಗಳೊಂದಗೆ ಅಪಾಯದಿಂದ ಪಾರಾಗಿದ್ದಾನೆ.
ತಿರುಪತಿಯಿಂದ ಜುಲೈ10ರಂದು ತಿರುಪತಿಯಿಂದ ಪೈಪ್ ತುಂಬಿಕೊಂಡು ಕಾರವಾರಕ್ಲೆ ಹೊರಟಿದ್ದ ಲಾರಿ (AP26Y6989) ಆಡುಕಟ್ಟ ಸಮೀಪ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೊಡೆಗೆ ಹೊಡೆದು ಮಗುಚಿಬಿದ್ದಿದೆ.
ಮೃತ ಚಾಲಕನನ್ನು ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಟರಪಲ್ಲಿಯ ಬಿಗಬಾಸ ತಂದೆ ಗಜೇಂದ್ರ ಎಂದು ಗುರುತಿಸಲಾಗಿದೆ.ಕ್ಲೀನರ್ ವೆಂಕಟೇಶಚಿನ್ನಪ್ಪನನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ಸಿದ್ದಾಪುರ ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.