ಸಿದ್ದಾಪುರದಲ್ಲಿ ಇಂದೂ ಮೂರು ಪಾಸಿಟಿವ್,ಬ್ಯಾಂಕ್ ಸೀಲ್ ಡೌನ್?

ಆದ್ಯೋತ್ ಸುದ್ದಿನಿಧಿ:
ತಾಲೂಕಿನಲ್ಲಿ ಕೊವಿಡ್ ಪೀಡಿತರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ.ಶನಿವಾರ ಮೂರು ಕೇಸ್ ಬಂದರೆ ರವಿವಾರ ಮೂರು ಕೇಸ್ ದಾಖಲಾಗಿದೆ.
ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯವರಿಗೆ ಪಾಸಿಟಿವ್ ಬಂದಿದ್ದು ನಾಳೆ ಬ್ಯಾಂಕ್ ಸೀಲ್ ಡೌನ್ ಆಗುವ ಸಾಧ್ಯತೆ ಇದೆ‌.ಆಂದ್ರಪ್ರದೇಶದ ಅನಂತಪುರದಿಂದ ಆಗಮಿಸಿರುವ ಈ ಸಿಬ್ಬಂದಿ ಬ್ಯಾಂಕ್ ಡ್ಯೂಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಬ್ಯಾಂಕ್ ನ ಇತರ ಸಿಬ್ಬಂದಿಗಳ ಜೊತೆಗೆ ಬ್ಯಾಂಕ್ ನಲ್ಲಿ ವ್ಯವಹಾರ ನಡೆಸಿದವರಿಗೂ ಆತಂಕ ಉಂಟಾಗಿದೆ.
ಹೊಸೂರುನ 27ವರ್ಷದ ಯುವಕ ಹಾಗೂ ಹೆಗ್ಗಾರಳ್ಳಿಯ 71 ವರ್ಷದವರಲ್ಲೂ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇದಲ್ಲದೆ ಗೋಳಗೋಡನ ಯುವಕನೊಬ್ಬನಿಗೆ ಪಾಸಿಟಿವ್ ಬಂದಿರುವುದ ಖಚಿತವಾಗಿದೆ.
ಇಲಾಖೆಯ ಮಾಹಿತಿಯ ಪ್ರಕಾರ ಶನಿವಾರದವರೆಗೆ 838 ಜನರ ಸ್ವಾಬ್(ಗಂಟಲು ದ್ರವ) ಸಂಗ್ರಹಿಸಲಾಗಿದೆ.ಅದರಲ್ಲಿ 706 ಜನರಲ್ಲಿ ನೆಗೆಟಿವ್ ಬಂದಿದೆ.111 ಜನರ ಫಲಿತಾಂಶ ಬರಬೇಕಿದೆ 21 ಜನರಿಗೆ ಪಾಸಿಟಿವ್ ಬಂದಿದೆ ಮೊದಲು ಬಂದ 6 ಜನರಿಗೆ ಕಾರವಾರದಲ್ಲಿ ಚಿಕಿತ್ಸೆ ನೀಡಲಾಗಿತ್ತು ಇಬ್ಬರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿದ್ದು ಒಟ್ಟೂ 8 ಜನರು ಗುಣಮುಖರಾಗಿದ್ದಾರೆ.ಇನ್ನೂ13 ಜನರನ್ನು ಕೊಂಡ್ಲಿಯಲ್ಲಿರುವ ಕೊವಿಡ್ ಕೇರ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದು ಅಂದಾಜಿನ ಪ್ರಕಾರ ಇನ್ನೂ 25-30 ಜನರಿಗೆ ಪಾಸಿಟಿವ್ ಆಗುವ ಸಾಧ್ಯತೆ ಇದೆ.
71 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿರುವುದು, ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲಿದಿರುವುದು ಕೊವಿಡ್ ಸಮುದಾಯಕ್ಕೆ ಹರಡುತ್ತಿದೆಯಾ? ಎಂಬ ಅನುಮಾನ ಮೂಡುತ್ತಿದೆ.

About the author

Adyot

Leave a Comment